Site icon Vistara News

Karnataka Election: ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್‌ ಗಾಂಧಿ ಕೇಳಿದ 3 ಪ್ರಶ್ನೆ ಏನು?; ಭಾಷಣ ಕಡಿಮೆ ಮಾಡಲು ಹೇಳಿದ್ದೇಕೆ?

Rahul Gandhi Gets Passport

Rahul Gandhi Gets 3-Year Passport Ahead Of US

ಚಾಮರಾಜನಗರ: ರಾಜ್ಯದಲ್ಲಿರುವುದು 40% ಸರ್ಕಾರ ಅಂತ ಐದು ವರ್ಷದ ಮಕ್ಕಳಿಗೂ ಗೊತ್ತಿದೆ. ಇಲ್ಲಿ ಸ್ಕ್ಯಾಮ್‌ಗಳ ದೊಡ್ಡ ಪಟ್ಟಿಯೇ ಇದೆ. ಕಳೆದ ಮೂರು ವರ್ಷದಿಂದ ರಾಜ್ಯದಲ್ಲಿ (Karnataka Election) ಭ್ರಷ್ಟಾಚಾರ ತಾಂಡವವಾಡುತ್ತಿದ್ದರೂ ಪ್ರಧಾನಿ ಒಂದೇ ಒಂದು ಮಾತು ಆಡಿಲ್ಲ. ಪ್ರಧಾನಿಗಳೇ ನೀವು ಇಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತನಾಡಿ ಎಂದು ಒತ್ತಾಯಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಮೋದಿ ಅವರಿಗೆ ಮೂರು ಪ್ರಶ್ನೆಗಳನ್ನೂ ಕೇಳಿದ್ದಾರೆ.

ಚಾಮರಾಜನಗರದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, 2500 ಕೋಟಿ ರೂ. ನೀಡಿದರೆ ಸಿಎಂ ಸ್ಥಾನ ಲಭ್ಯ ಅಂತ ಅದೇ ಪಕ್ಷದ ಶಾಸಕ ಹೇಳುತ್ತಾರೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಗಲಭೆಯಲ್ಲಿ ನೀವು ಏನು ಮಾಡಿದಿರಿ? ಅಂತಾರಾಜ್ಯ ಕುಡಿಯುವ ನೀರಿನ ವಿವಾದ ಸಮಸ್ಯೆಗೆ ಏನು ಪರಿಹಾರ ಕಲ್ಪಿಸಿದ್ದೀರಿ? ಅತಿವೃಷ್ಟಿ ಸಂದರ್ಭದಲ್ಲಿ ಏನು ಮಾಡಿದಿರಿ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ | BJP Manifesto : ಬಿಜೆಪಿಯು ಪ್ರಣಾಳಿಕೆಯಲ್ಲಿ ನೀಡಿರುವ ಪ್ರಮುಖ 16 ಭರವಸೆಗಳೇನು?

ಅಡುಗೆ ಅನಿಲ ಸಿಲಿಂಡರ್ ಬೆಲೆ ಗಗನಕ್ಕೇರಿದೆ, ಅಡುಗೆ ಎಣ್ಣೆ ಬೆಲೆ 70 ರಿಂದ 200 ರೂ.ಗಳಿಗೆ ಏರಿದೆ. ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ರೈತರಿಂದ ಜಿಎಸ್‌ಟಿ ಕಟ್ಟಿಸಿಕೊಳ್ಳಲಾಗುತ್ತಿದೆ. ನಿರುದ್ಯೋಗ ಹೆಚ್ಚಿದ್ದು, ಸಣ್ಣ ಉದ್ಯಮಗಳು ಮುಚ್ಚುತ್ತಿವೆ. ಬಿಜೆಪಿ ಮಾಡಿರುವ ಲೂಟಿ ಹಣ, 40% ಕಮಿಷನ್ ಹಣವನ್ನು ಕಾಂಗ್ರೆಸ್ ಸರ್ಕಾರ ವಾಪಸ್ ಕೊಟ್ಟೆ ಕೊಡುತ್ತದೆ. ನಿಮ್ಮ ನಾಯಕರು ಎಷ್ಟು ಭ್ರಷ್ಟರಿದ್ದಾರೆ ಎಂದರೆ ಅವರ ಹೆಸರು ಹೇಳಲೂ ನಿಮ್ಮಿಂದ ಆಗುತ್ತಿಲ್ಲ ಎಂದು ಮೋದಿ ವಿರುದ್ಧ ಕಿಡಿಕಾರಿದರು.

ಬಿಜೆಪಿಯವರಿಗೆ 40% ಇಷ್ಟದ ಕೆಲಸ, ಅದರ ಬಗ್ಗೆ ಅವರಿಗೆ ಪ್ರೀತಿ ಇದೆ. ಬಿಜೆಪಿಗೆ 40 ಇಷ್ಟದ ಸಂಖ್ಯೆಯಾಗಿರುವುದರಿಂದ ಅವರಿಗೆ 40 ಸೀಟ್ ಕೊಟ್ಟು, ಕಾಂಗ್ರೆಸ್‌ಗೆ 150 ಸ್ಥಾನ ಕೊಡಿ ಎಂದು ಜನರಿಗೆ ಮನವಿ ಮಾಡಿದ ಅವರು, ಒಂದು ವೇಳೆ ನಮಗೆ ಬಹುಮತ ಬರದಿದ್ದರೆ, ಭ್ರಷ್ಟಾಚಾರದ ಹಣದಲ್ಲಿ ಬಿಜೆಪಿಯವರು ಮತ್ತೆ ಶಾಸಕರ ಖರೀದಿಗೆ ಮುಂದಾಗುತ್ತಾರೆ ಎಂದು ಆರೋಪಿಸಿದರು.

ಇಲ್ಲಿನ ಬಿಜೆಪಿ ಅಭ್ಯರ್ಥಿ (ವಿ.ಸೋಮಣ್ಣ) ಭಾರಿ ಶ್ರೀಮಂತ, ಆದರೆ ನಮ್ಮ ಅಭ್ಯರ್ಥಿ (ಸಿ.ಪುಟ್ಟರಂಗಶೆಟ್ಟಿ) ಆರ್ಥಿಕ ಸ್ಥಿತಿವಂತರಲ್ಲ ಎಂದ ಅವರು, ಮೋದಿಯವರೇ ನಾವು ಮಾಡುವ ಕೆಲಸಗಳನ್ನು ಎಲ್ಲರ ಮುಂದೆ ಇಟ್ಟಿದ್ದೇವೆ. ನಾವು ನೀಡಿರುವ ಐದು ಭರವಸೆಗಳನ್ನು ಮೊದಲ ಸಚಿವ ಸಂಪುಟ ಸಭೆ ದಿನವೇ ಜಾರಿಗೊಳಿಸುತ್ತೇವೆ. ಮೋದಿಯವರೇ ಒಂದು ವೇಳೆ ನಿಮ್ಮ ಸರ್ಕಾರ ಬಂದರೆ ನೀವು ಏನು ಮಾಡುತ್ತೀರಿ ಮೊದಲು ಹೇಳಿ ಎಂದು ಒತ್ತಾಯಿಸಿದರು.

ಇದನ್ನೂ ಓದಿ | Karnataka Election: ಬಿಜೆಪಿ ಲಿಂಗಾಯತರನ್ನು ಸಿಎಂ ಮಾಡಲ್ಲ, ನಾನು ಕನ್ನಡಿಗರ ಬಿ ಟೀಮ್; ಪ್ರಧಾನಿ ಮೋದಿಗೆ ಎಚ್.ಡಿ. ಕುಮಾರಸ್ವಾಮಿ ತಿರುಗೇಟು

ಭಾಷಣ ಕಡಿಮೆ ಮಾಡಿ, ಜನರಿಗೆ ಏನು ಮಾಡುತ್ತೀರೋ ಹೇಳಿ?

ನಮ್ಮ ಪಕ್ಷದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಇನ್ನು ಅನೇಕ ನಾಯಕರ ಹೆಸರು ಹೇಳುತ್ತೇನೆ. ಆದರೆ ಮೋದಿಯವರು ಭಾಷಣದಲ್ಲಿ ಬಿಜೆಪಿಯ ಯಾರ ಹೆಸರನ್ನೂ ಹೇಳಲ್ಲ. ಸಿಎಂ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ ಹೆಸರು ಯಾಕೆ ಹೇಳುತ್ತಿಲ್ಲ ಎಂದ ಅವರು, ಬಿಜೆಪಿಯ ಈ ನಾಯಕರು ದೊಡ್ಡವರಾದರೆ ಅವರಿಗೆ ಗೌರವಿಸಬೇಕಾಗುತ್ತದೆ ಅಂತ ಹೆಸರು ಹೇಳುತ್ತಿಲ್ಲ. ಗೌರವಿಸುವುದನ್ನು ಮೋದಿ ಇಲ್ಲಿವರೆಗೆ ಕಲಿತಿಲ್ಲ. ಮೋದಿಯವರೆ ನಿಮ್ಮ ಬಗ್ಗೆ ಭಾಷಣ ಕಡಿಮೆ ಮಾಡಿ, ಜನರಿಗೆ ಏನು ಮಾಡುತ್ತೀರೋ ಅದನ್ನು ಹೇಳಿ? ನೀವು ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದ್ದೀರಿ ಎಂದು ಹರಿಹಾಯ್ದರು.

Exit mobile version