ಬೆಂಗಳೂರು, ಕರ್ನಾಟಕ: ಬೆಳಗಾವಿ ಜಿಲ್ಲೆಯ ಪ್ರಮುಖ ಕ್ಷೇತ್ರವಾಗಿರುವ ರಾಯಬಾಗ್ ಎಸ್ ಸಿ ಮೀಸಲು ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿಯ ಯಶಸ್ವಿಯಾಗಿದೆ. ಹಾಲಿ ಶಾಸಕ ದುರ್ಯೋಧನ ಐಹೊಳೆ ಅವರು 57,500 ಮತಗಳನ್ನು ಪಡೆದುಕೊಂಡು, ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಿಕರ್ ವಿರುದ್ಧ 2570 ಮತಗಳ ಅಂತರದಿಂದ ಗೆದ್ದಿದ್ದಾರೆ. ಶಂಭು ಅವರಿಗೆ 54533 ಮತಗಳು ಬಿದ್ದಿವೆ. ಇನ್ನೂ ಮೂರನೇ ಸ್ಥಾನದಲ್ಲಿರುವ ಜೆಡಿಎಸ್ ಅಭ್ಯರ್ಥಿ ಪ್ರದೀಪ್ ಕುಮಾರ್ ಮಾಳಗಿ ಅವರು 25263 ಮತಗಳನ್ನು ಪಡೆದುಕೊಂಡರೆ, ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವ ಮಾಹವೀರ್ ಮೋಹಿತೆ ಅವರಿಗೆ 22685 ಮತಗಳು ಬಂದಿವೆ(Raibag Results).
2023ರ ಚುನಾವಣೆಯ ಅಭ್ಯರ್ಥಿಗಳು
ಎಸ್ ಮೀಸಲು ಕ್ಷೇತ್ರವಾಗಿರುವ ರಾಯಬಾಗದಲ್ಲಿ ಮಹಾವೀರ್ ಮೋಹಿತೆ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಹಾಲಿ ಶಾಸಕ ದುರ್ಯೋಧನ ಐಹೊಳೆ ಅವರು ಸ್ಪರ್ಧಿಸಿದ್ದಾರೆ.
ಇದನ್ನೂ ಓದಿ: Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ; ರೇಣುಕಾಚಾರ್ಯಗೆ ಸೋಲಿನ ನೋವು
2018ರ ಚುನಾವಣೆ ಫಲಿತಾಂಶಗಳು
1957ರಿಂದಲೂ ಅಸ್ತಿತ್ವದಲ್ಲಿರುವ ಈ ಕ್ಷೇತ್ರವು ಅನೇಕ ಕಾರಣಕ್ಕೆ ಹೆಸರುವಾಸಿಯಾಗಿದೆ. ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಜನತಾ ಪಾರ್ಟಿ ಕೂಡ ಎರಡ್ಮೂರು ಬಾರಿ ಗೆದ್ದಿದೆ. ಇತ್ತೀಚಿನ ಚುನಾವಣೆಗಳಲ್ಲಿ ಬಿಜೆಪಿ ತನ್ನ ಪ್ರಭುತ್ವವನ್ನ ಸಾಧಿಸಿದೆ. 2018ರ ಚುನಾವಣೆ ವೇಳೆ, ದುರ್ಯೋಧನ ಐಹೊಳೆ 65702 ಮತಗಳನ್ನು ಪಡೆದುಕೊಂಡು ಕಾಂಗ್ರೆಸ್ ಪಕ್ಷದ ಪ್ರದೀಪ್ ಕುಮಾರ್ ಮಾಳಗೆ ಅವರನ್ನು ಸೋಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 50954 ಮತಗಳನ್ನು ಪಡೆದುಕೊಂಡಿದ್ದರು.