Site icon Vistara News

Accident Case : ಮಹಿಳೆ ಮೇಲೆ ಮಣ್ಣಿನ ರಾಶಿ ಹಾಕಿದ ಜೆಸಿಬಿ ಚಾಲಕ; ಬಯಲು ಶೌಚಕ್ಕೆ ಹೋದಾಕೆ ಉಸಿರುಗಟ್ಟಿ ಸಾವು!

Accident case

ರಾಯಚೂರು: ನಿವೇಶನ ಸ್ವಚ್ಚಗೊಳಿಸುತ್ತಿದ್ದಾಗ ಜೆಸಿಬಿ ಚಾಲಕನಿಂದ ಅಚಾತುರ್ಯ (Accident Case) ನಡೆದಿದೆ. ಬಯಲು ಶೌಚಕ್ಕೆ ಹೋದ ಮಹಿಳೆ ಮೇಲೆ ಮಣ್ಣಿನ ರಾಶಿ ಹಾಕಿದ್ದರಿಂದ ಮೂವರು ಮಕ್ಕಳ ತಾಯಿ ಮೃತಪಟ್ಟಿದ್ದಾರೆ. ತಾಯಮ್ಮ(32) ಮೃತಪಟ್ಟವರು. ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿನ ಜನತಾ ಕಾಲೋನಿಯಲ್ಲಿ ಘಟನೆ ನಡೆದಿದೆ.

ಖಾಲಿ ನಿವೇಶನದಲ್ಲಿ ಜಾಲಿ ಗಿಡ ಕಸ ಬೆಳೆದಿತ್ತು. ಹೀಗಾಗಿ ಬಡಾವಣೆಯ ಕೆಲ ಬಡ ಮಹಿಳೆಯರು ಇಲ್ಲಿ ಬಯಲು ಶೌಚಕ್ಕೆ ಹೋಗುತ್ತಿದ್ದರು. ತಾಯಮ್ಮ ಮುಂಜಾನೆ ಎಂದಿನಂತೆ ಬಯಲು ಶೌಚಕ್ಕೆಂದು ಹೋಗಿದ್ದಾರೆ. ಇದನ್ನು ಗಮನಿಸಿದ ಚಾಲಕ ಜೆಸಿಬಿಯಿಂದ ಮಣ್ಣಿನ ರಾಶಿಯನ್ನು ತಾಯಮ್ಮ ಮೇಲೆ ಹಾಕಿದ್ದಾನೆ.

ತಾಯಮ್ಮಳ ಮುಖದ ಮೇಲೆ ಮಣ್ಣಿನ ರಾಶಿ ಬಿದ್ದಿದ್ದರಿಂದ ಸಹಾಯಕ್ಕೆ ಚೀರಾಡಲು ಆಗದಂತಾಗಿದೆ. ಇತ್ತ ಎರಡ್ಮೂರು ಬಾರಿ ಮಣ್ಣಿ ರಾಶಿ ಬಿದ್ದಾಗ ಕುಸಿದು ಬಿದ್ದ ತಾಯಮ್ಮ ಹೊರಬರಲು ಆಗದೆ ಒದ್ದಾಡಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ತಾಯಿ ಕಳೆದುಕೊಂಡ ಮೂವರು ಮಕ್ಕಳು ಅನಾಥರಾಗಿದ್ದಾರೆ.

ಘಟನಾ ಸ್ಥಳಕ್ಕೆ ಬಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜೆಸಿಬಿ ಮತ್ತು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ವೆಸ್ಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Independence Day 2024 : ಚಿಕ್ಕಬಳ್ಳಾಪುರ, ರಾಯಚೂರಿನಲ್ಲಿ ಧ್ವಜಾರೋಹಣ ವೇಳೆ ಕುಸಿದು ಬಿದ್ದ ಮಕ್ಕಳು, ಪೊಲೀಸರು

ಬೈಕ್‌ಗೆ ಟ್ರಾಕ್ಟರ್‌ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು

ರಾಯಚೂರಿನಲ್ಲಿ ಬೈಕ್‌ಗೆ ಟ್ರಾಕ್ಟರ್ ಡಿಕ್ಕಿ ಹೊಡೆದಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದ ಬಳಿಕ ಟ್ರಾಕ್ಟರ್ ಸಮೇತ ಚಾಲಕ ಎಸ್ಕೇಪ್ ಆಗಿದ್ದ. ರಾಯಚೂರು ತಾಲೂಕಿನ ಎಲೆ ಬಿಚ್ಚಾಲಿ ಬಳಿ ಘಟನೆ ನಡೆದಿದೆ. ಚಂದ್ರಶೇಖರ್ (21)ಮೃತ ದುರ್ದೈವಿ.

ರಾಯಚೂರು ತಾಲ್ಲೂಕಿನ ಬಿ.ಹನುಮಾಪುರ ಗ್ರಾಮದ ಚಂದ್ರಶೇಖರ್‌, ಪ್ಲೊಮಾ ಮುಗಿಸಿ ಸಿಇಟಿಗೆ ಸಿದ್ಧವಾಗುತ್ತಿದ್ದ. ನಿನ್ನೆ ರಾತ್ರಿ ಬೈಕ್ ನಲ್ಲಿ ಚಂದ್ರಶೇಖರ್ ಸ್ವ ಗ್ರಾಮಕ್ಕೆ ಹೋಗೊವಾಗ ಟ್ರಾಕ್ಟರ್ ಡಿಕ್ಕಿಯಾಗಿದೆ. ಅಪಘಾತದ ಬಳಿಕ ಚಾಲಕ ಶಬ್ಜವಲಿ ಎಂಬಾತ ಮಾರ್ಗ ಮಧ್ಯೆ ಜಮೀನುವೊಂದರಲ್ಲಿ ಟ್ರಾಕ್ಟರ್ ಸಮೇತ ಬಚ್ಚಿಟ್ಟುಕೊಂಡಿದ್ದ. ಬಳಿಕ ಟ್ರಾಕ್ಟರ್ ಪತ್ತೆ ಹಚ್ಚಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version