Site icon Vistara News

Gang War in School : ಶಾಲೆಯಲ್ಲೇ ಗ್ಯಾಂಗ್‌ ವಾರ್‌; ವಿದ್ಯಾರ್ಥಿಗಳ ಕೈಯಲ್ಲಿ ಗನ್‌, ಡ್ಯಾಗರ್‌, ಬಟನ್‌ ಚಾಕು

Gang war in Raichur School

ರಾಯಚೂರು:‌ ಅಸಹನೆ, ವೈರತ್ವ ಮತ್ತು ವ್ಯಗ್ರತೆ ಯುವಜನರಲ್ಲಿ ಮಿತಿ ಮೀರಿದ್ದನ್ನು ಕಾಣಬಹುದು. ಸಣ್ಣ ಸಣ್ಣ ಕಾರಣಕ್ಕೆ ಜನರು ಜಗಳಕ್ಕೆ ಇಳಿಯುವುದು, ಹೊಡೆದಾಟ, ಕೊಲೆಯನ್ನೇ ನಡೆಸುವಷ್ಟರ ಮಟ್ಟಿಗೆ ಜನರು ಮುಂದುವರಿದಿದ್ದಾರೆ. ಈ ಮನೋಸ್ಥಿತಿ ಈಗ ಯುವಕರ ಹಂತದಿಂದ ಮಕ್ಕಳ ಹಂತಕ್ಕೂ ಇಳಿದಿರುವುದು ಭಾರಿ ಕಳವಳವನ್ನು ಸೃಷ್ಟಿಸಿದೆ. ರಾಯಚೂರು ನಗರದ ಜ್ಯೋತಿ ಕಾಲೋನಿಯ (Raichur Jyothi Colony) ರಿಖಬ್ ಚಂದ್ ಸುಖಾಣಿ ಪ್ರೌಢ ಶಾಲೆಯ (Rikhab Chand sukhani High School) ಬಳಿ ನಡೆದ ಘಟನೆಯನ್ನು (Gangwar in School) ನೋಡಿದರೆ ಮಕ್ಕಳಿರುವ ಪ್ರತಿಯೊಬ್ಬರೂ ಬೆಚ್ಚಿ ಬೀಳಬೇಕು. ಯಾಕೆಂದರೆ, ಇಲ್ಲಿನ ಮಕ್ಕಳು ಹೊಸ ವರ್ಷ ಆಚರಣೆ (New year Celebration) ಹೆಸರಿನಲ್ಲಿ ಯಾರಿಗೋ ಸ್ಕೆಚ್‌ ಹಾಕಿದ್ದಾರೆ. ಕೊಂದೇ ಕೊಲ್ಲಬೇಕು ಎಂಬಷ್ಟು ಆಕ್ರೋಶದಿಂದ ಶಾಲೆಗೆ ಗನ್, ಚಾಕು ಮತ್ತು ಬಟನ್ ಚಾಕು ತೆಗೆದುಕೊಂಡು ಬಂದಿದ್ದಾರೆ. 9ನೇ ಮತ್ತು 7ನೇ ತರಗತಿ ವಿದ್ಯಾರ್ಥಿಗಳ ಈ ಕ್ರೌರ್ಯದ ಮನೋಸ್ಥಿತಿ (Cruel Mindset) ಕಂಡು ನಿಜಕ್ಕೂ ಊರೇ ಬೆಚ್ಚಿಬಿದ್ದಿದೆ. ಹೆತ್ತವರಂತೂ ತಮ್ಮ ಮಕ್ಕಳು ಹೀಗಾಗಿ ಹೋದರಾ ಎಂದು ಯೋಚಿಸಿ ಕಣ್ಣೀರು ಹಾಕುತ್ತಿದ್ದಾರೆ. ಶಿಕ್ಷಕರಿಗಂತೂ ನಾವು ಪಾಠ ಮಾಡಿದ್ದೆಲ್ಲ ವೇಸ್ಟ್‌ ಆಗೋಯ್ತಾ ಎನ್ನುವ ಆತಂಕ. ವಿದ್ಯಾರ್ಥಿಗಳ ಓಡಾಟದ ಪ್ರತಿಯೊಂದು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗ್ಯಾಂಗ್‌ವಾರ್‌ನ ಸನ್ನಿವೇಶ

ಏನಿದು ವಿದ್ಯಾರ್ಥಿಗಳ ಗ್ಯಾಂಗ್‌ ವಾರ್‌?

ರಿಖಬ್ ಚಂದ್ ಸುಖಾಣಿ ಪ್ರೌಢ ಶಾಲೆಯ ಆವರಣದಲ್ಲಿ ಸೋಮವಾರ ಬೆಳಗ್ಗೆ ಕೆಲವು ಹುಡುಗರು ಚಾಕು, ಗನ್‌, ಬಟನ್‌ ಚಾಕು ಹಿಡಿದುಕೊಂಡು ಬಂದಿದ್ದರು. ಆವರಣಕ್ಕೆ ಬರುತ್ತಿದ್ದಂತೆಯೇ ಒಂಬತ್ತನೇ ತರಗತಿಯ ಒಬ್ಬ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ತಿಳಿಯುತ್ತಿದ್ದಂತೆಯೇ ಪೊಲೀಸರು ಧಾವಿಸಿದ್ದಾರೆ. ಆಗ ಎಲ್ಲ ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಓಡಿದ್ದಾರೆ. ಪೊಲೀಸರು ಬಂದು ನೋಡಿದಾಗ ಅಲ್ಲಿ ಪಿಸ್ತೂಲು, ಡ್ಯಾಗರ್‌, ಚಾಕುಗಳು ಪತ್ತೆಯಾದವು. ವಿಷಯ ತಿಳಿಯುತ್ತಿದ್ದಂತೆಯೇ ಪೋಷಕರೆಲ್ಲ ಶಾಲೆಗೆ ಓಡಿಕೊಂಡೇ ಬಂದಿದ್ದಾರೆ.

ಅಂದ ಹಾಗೆ, ಈ ಹಲ್ಲೆಯ ನೇತೃತ್ವವನ್ನು ವಹಿಸಿದ್ದು ಒಬ್ಬ ಏಳನೇ ತರಗತಿ ವಿದ್ಯಾರ್ಥಿ. ಹೀಗೆ ಒಂಬತ್ತನೇ ತರಗತಿ ವಿದ್ಯಾರ್ಥಿಯ ಹತ್ಯೆಗೆ ಸುಪಾರಿ ನೀಡಿದ ಏಳನೇ ತರಗತಿ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಷ್ಟಕ್ಕೂ ಈ ಗ್ಯಾಂಗ್‌ ವಾರ್‌ ನಡೆದಿದ್ದು ಯಾಕೆ?

ಖಾಸಗಿ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಹಾಗೂ ಏಳನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ನಡುವೆ ಕಿರಿಕ್ ಉಂಟಾಗಿತ್ತು. ಈ ವೇಳೆ ಒಂಬತ್ತನೇ ತರಗತಿ ವಿದ್ಯಾರ್ಥಿ ಏಳನೇ ತರಗತಿ ವಿದ್ಯಾರ್ಥಿಗೆ ಹೊಡೆದಿದ್ದ. ಇದಕ್ಕೆ ಪ್ರತಿಯಾಗಿ ಒಂಬತ್ತನೇ ತರಗತಿ ವಿದ್ಯಾರ್ಥಿಯನ್ನು ಹೊಡೆಸಲು ಏಳನೇ ತರಗತಿ ವಿದ್ಯಾರ್ಥಿ ಏರಿಯಾ ಹುಡುಗರನ್ನು ಕರೆಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಬಂಧಿತ ಬಾಲಕ

ಏರಿಯಾದ ಚಿಲ್ಟುಪಲ್ಟು ಹುಡುಗರು ಡ್ಯಾಗರ್‌, ಚಾಕು, ಹಕ್ಕಿಗೆ ಹೊಡೆಯೋ ಏರ್‌ ಗನ್ ಹಾಗೂ ಇತರೆ ಅಪಾಯಕಾರಿ ಸಲಕರಣೆ ತಂದ ಏರಿಯಾ ಹುಡುಗರು ಒಂಬತ್ತನೇ ತರಗತಿ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬರ್ತಿದ್ದಂತೆಯೇ ಎಲ್ಲಾ ಟೂಲ್ಸ್ ಬಿಟ್ಟು ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: Double Murder : ಹೊಸ ವರ್ಷವೇ ಡಬಲ್‌ ಮರ್ಡರ್‌; ಕ್ಷುಲ್ಲಕ ಕಾರಣಕ್ಕೆ ಪ್ರಾಣವೇ ಹೋಯ್ತು!

ರಾಯಚೂರು ಶಾಲೆಯ ಗ್ಯಾಂಗ್‌ವಾರ್‌ಗೆ ಸಂಬಂಧಿಸಿದ ಒಂದು ವಿಡಿಯೊ

Exit mobile version