ರಾಯಚೂರು: ಸಮವಸ್ತ್ರದಲ್ಲಿ ಮಲವಿಸರ್ಜನೆಗೈದ ಎಂದು ಶಿಕ್ಷಕನೊಬ್ಬ ವಿದ್ಯಾರ್ಥಿಯ ಮೇಲೆ ಬಿಸಿನೀರು ಎರಚಿ ವಿಕೃತಿ ಮೆರೆದ ಘಟನೆ ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಶಾಲೆಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಗ್ರಾಮದ ಶ್ರೀ ಘನಮಠೇಶ್ವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲಾ ಶಿಕ್ಷಕ ಹುಲಿಗೆಪ್ಪ ಎಂಬಾತ ಕೃತ್ಯ ಎಸಗಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಆಗಸ್ಟ್ 2ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗಾಯಗೊಂಡ ವಿದ್ಯಾರ್ಥಿ ಮಿಟ್ಟೆಕೆಲ್ಲೂರು ನಿವಾಸಿ, 2ನೇ ತರಗತಿಯ ಅಖಿಲ್(8). ಸಂತೆಕೆಲ್ಲೂರು ಶಾಲೆಗೆ ದಿನನಿತ್ಯ ಕೋಚಿಂಗ್ ಹೋಗುತ್ತಿದ್ದ ವಿದ್ಯಾರ್ಥಿ ಅಖಿಲ್, ಅಂದು ತರಗತಿಯಲ್ಲೇ ಮಲವಿಸರ್ಜನೆ ಮಾಡಿಕೊಂಡಿದ್ದನೆಂದು ಹೇಳಲಾಗಿದೆ. ಇದರಿಂದ ಸಿಟ್ಟಿಗೆದ್ದ ಶಿಕ್ಷಕ ಹುಲಿಗೆಪ್ಪ, ಮಗುವಿನ ಮೈಮೇಲೆ ಬಿಸಿನೀರು ಎರಚಿ ವಿಕೃತಿ ಮೆರೆದಿದ್ದಾನೆ. ಬಿಸಿನೀರಿನ ತಾಪಕ್ಕೆ ವಿದ್ಯಾರ್ಥಿಯ ದೇಹ ಶೇ.40ರಷ್ಟು ಸುಟ್ಟುಹೋಗಿದೆ. ಘಟನೆ ನಡೆದ ಬೆನ್ನಲ್ಲೇ ಆರೋಪಿ ಶಿಕ್ಷಕ ಶಾಲೆಯಿಂದ ಎಸ್ಕೇಪ್ ಆಗಿದ್ದಾನೆ. ಗಾಯಾಳು ಅಖಿಲ್ ಲಿಂಗಸುಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದನ್ನೂ ಓದಿ | Dowry Case | ಕೆಜಿಗಟ್ಟಲೇ ಚಿನ್ನಾಭರಣ, ಕೋಟಿಗಟ್ಟಲೇ ವರದಕ್ಷಿಣೆ ಕೊಟ್ಟರೂ ನಿಲ್ಲದ ಧನದಾಹ, ವಿಕೃತಿ!