Site icon Vistara News

Kids murder: ಹೆಂಡತಿ ನಡತೆ ಮೇಲೆ ಶಂಕೆ, ಅಡ್ಡಬಂದ ಇಬ್ಬರು ಮಕ್ಕಳ ಕೊಲೆ ಮಾಡಿದ ತಂದೆ

kids murder

ರಾಯಚೂರು: ಹೆಂಡತಿಗೆ ಅನೈತಿಕ ಸಂಬಂಧ ಇದೆ ಎಂದು ಶಂಕಿಸಿ ಗಲಾಟೆ ಮಾಡಿದ ಗಂಡನೊಬ್ಬ, ಮಧ್ಯೆ ಪ್ರಶ್ನಿಸಲು ಬಂದ ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿದ ಬರ್ಬರ ಘಟನೆ ನಡೆದಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಕ್ಕಲದೊಡ್ಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ನಿಂಗಪ್ಪ ಎಂಬಾತನೇ ಈ ಕ್ರೂರಿ. ಈತನ ಮಕ್ಕಳಾದ ಶಿವರಾಜ್ (5) ಮತ್ತು ರಾಘವೇಂದ್ರ (3) ಮೃತ ಬಾಲಕರು. ಹೆಂಡತಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಶಂಕಿಸಿ ನಿಂಗಪ್ಪ ಗಲಾಟೆ ಎಬ್ಬಿಸಿದ್ದ. ಜಗಳದಲ್ಲಿ ಮಕ್ಕಳು ಮಧ್ಯೆ ಪ್ರವೇಶಿಸಿದ್ದರು. ಇದರಿಂದ ಸಿಟ್ಟಿಗೆದ್ದ ನಿಂಗಪ್ಪ, ಈ ಮಕ್ಕಳಿಬ್ಬರು ನನಗೆ ಜನಿಸಿಲ್ಲ ಎಂದು ಅವರನ್ನು ಕತ್ತು ಹಿಸುಕಿ ಕೊಂದು ಹಾಕಿದ್ದಾನೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Fraud case: ಮದುವೆಯಾಗುವುದಾಗಿ ನಂಬಿಸಿ ಲೈವ್‌ ಬ್ಯಾಂಡ್‌ ಯುವತಿಗೆ ವಂಚನೆ, ಜೆಡಿಎಸ್ ಜಿಲ್ಲಾಧ್ಯಕ್ಷನಿಗೆ ಧರ್ಮದೇಟು

Exit mobile version