ರಾಯಚೂರು: ರಾಯಚೂರಲ್ಲಿ ಪ್ರೇಮ ವೈಫಲ್ಯಕ್ಕೆ (Love Failure) ಯುವಕನೊರ್ವ ಆತ್ಮಹತ್ಯೆಗೆ (Self Harming) ಶರಣಾಗಿದ್ದಾನೆ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದ್ಗಲ್ ಪಟ್ಟಣ ಸಮೀಪದ ಕನಸಾವಿ ಗ್ರಾಮದಲ್ಲಿ ಘಟನೆ ನಡೆದಿದೆ. ಸಂತೋಷ್ (22) ಮೃತ ದುರ್ದೈವಿ.
ಮನೆಯಲ್ಲಿರುವ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೂ ಮುನ್ನ ತನ್ನ ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್‌ನಲ್ಲಿ ʻನಾನು ಸತ್ತರು ಪ್ರೀತಿಗೋಸ್ಕರ ಸೋಲ್ತಿನಿ ಯಾಕೆಂದರೆ ನಾನು ಒಬ್ಬ ಹುಚ್ಚು ಪ್ರೇಮಿʼ ಎಂದು ಫೋಟೊ ಜತೆಗೆ ಬರಹವೊಂದನ್ನು ಹಾಕಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಂತೋಷ್ ತನ್ನ ಅಣ್ಣನ ಹೆಂಡತಿ ತಂಗಿಯನ್ನೇ ಪ್ರೀತಿ ಮಾಡುತ್ತಿದ್ದ. ಆದರೆ ಮದುವೆಗೆ ಒಪ್ಪದಿದ್ದಾಗ ಮನನೊಂದು ಆತ್ಮಹತ್ಯೆ ಶರಣಾಗಿದ್ದಾನೆ. ಮುದ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು
ಇಲಿ ಪಾಷಣ ಸೇವಿಸಿ ಜೀವ ಬಿಟ್ಟ ಮೆಕ್ಯಾನಿಕ್
ದೊಡ್ಡಬಳ್ಳಾಪುರ: ಸಾಲ ಮಾಡಿ ಬಡ್ಡಿ ಕಟ್ಟಲಾಗದೆ ಬೇಸತ್ತ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ. ಪರ್ವೀಜ್ ಪಾಷ (38) ಆತ್ಮಹತ್ಯೆಗೆ ಶರಣಾದವರು.
ದೊಡ್ಡಬಳ್ಳಾಪುರ ನಗರದ ರೋಜಿಪುರ ಬಡಾವಣೆಯ ನಿವಾಸಿಯಾದ ಪರ್ವೀಜ್ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೆಕ್ಯಾನಿಕ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಪರ್ವೀಜ್ ಈ ಹಿಂದೆ ಹಲವು ವ್ಯಕ್ತಿಗಳ ಬಳಿ ಬಡ್ಡಿಗೆ ಸಾಲ ಪಡೆದಿದ್ದ. ಸಾಲಗಾರರ ಕಾಟ ತಡೆಯಲಾರದೇ ಮನನೊಂದಿದ್ದ.
ಸಾಲ ತೀರಿಸಲು ದಿಕ್ಕು ದೋಚದೆ ಮೂರು ದಿನ ಊಟ ಬಿಟ್ಟಿದ್ದ. ನಂತರ ಅಂಗಡಿ ಮುಂದೆ ಸಾಲಗಾರರ ಕಾಟ ಹೆಚ್ಚಾದಾಗ ಕಳೆದ ಭಾನುವಾರ ಮನೆಗೆ ಬಂದವರೇ ಇಲಿ ಪಾಷಣ ಸೇವಿಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಪರ್ವೀಜ್ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಪರ್ವೀಜ್ ಸಾವನ್ನಪ್ಪಿದ್ದಾನೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ರೋಜಿಪುರದಲ್ಲಿ ಈ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.