Site icon Vistara News

Raichur Election Result 2024: ರಾಯಚೂರಿನಲ್ಲಿ ಕಾಂಗ್ರೆಸ್‌ನ ಕುಮಾರ್‌ ನಾಯಕ್‌ ಜಯಭೇರಿ; ಹಾಲಿ ಎಂಪಿಗೆ ಮುಖಭಂಗ

Kumar G Nayak

Raichur Election Result 2024: Kumar G Nayak Wins Against Raja Amareshwar Nayak

ರಾಯಚೂರು: ಭತ್ತದ ಕಣಜ ಎಂದೇ ಖ್ಯಾತಿಯಾಗಿರುವ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ (Raichur Election Result 2024) ಬಿಜೆಪಿಯ ರಾಜಾ ಅಮರೇಶ್ವರ್‌ ನಾಯಕ್‌ (Raja Amareshwar Nayak) ಅವರ ವಿರುದ್ಧ ಕುಮಾರ್‌ ಜಿ ನಾಯಕ್‌ (Kumar G Nayak) ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಗೆಲುವು ಸಾಧಿಸಿದ್ದ ರಾಜಾ ಅಮರೇಶ್ವರ್‌ ನಾಯಕ್‌ ಅವರಿಗೆ ಈ ಬಾರಿ ಭಾರಿ ಮುಖಭಂಗವಾಗಿದೆ. ಸರಳತೆ, ಸಜ್ಜನಿಕೆಯ ಮೂಲಕವೇ ಜನರ ವಿಶ್ವಾಸ ಗಳಿಸಲು ಯತ್ನಿಸಿದ್ದ ಕುಮಾರ್‌ ನಾಯಕ್‌ ಅವರು ಗೆಲುವಿನ ನಗೆ ಬೀರಿದ್ದಾರೆ.

ರಾಜಾ ಅಮರೇಶ್ವರ ನಾಯಕ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನಾಮದ ಬಲವಿತ್ತು. ಹಲವು ಅಭಿವೃದ್ಧಿ ಕಾಮಗಾರಿಗಳ ಬಲ ಇದ್ದರೂ, ಮೂಲ ಸೌಕರ್ಯ ಒದಗಿಸುವ ವಿಚಾರದಲ್ಲಿ ಸಂಸದ ಹಿಂದೆ ಬಿದ್ದಂತೆ ಕಾಣಿಸುತ್ತಿತ್ತು. ರೈತರ ಆಕ್ರೋಶವೂ ಅವರ ವಿರುದ್ಧ ಇತ್ತು. ಆದರೆ, ಲೋಕಸಭೆ ಚುನಾವಣೆಯಲ್ಲಿ ಮತದಾರರು ರಾಷ್ಟ್ರ ಮಟ್ಟದ ಚಿಂತನೆಯೊಂದಿಗೆ ವೋಟು ಹಾಕುವುದರಿಂದ ಅಮರೇಶ್ವರ ನಾಯಕ್‌ ಅವರಿಗೆ ವರದಾನವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು.

Raichur Lok Sabha Constituency

ಇನ್ನು, 1990ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದ ಜಿ. ಕುಮಾರ್‌ ನಾಯಕ್‌ ಅವರು ನಿವೃತ್ತಿ ಹೊಂದಿದ್ದು, ಈಗ ರಾಜಕೀಯದಲ್ಲಿ ಎರಡನೇ ಇನ್ನಿಂಗ್ಸ್‌ ಆರಂಭಿಸುವ ತವಕದಲ್ಲಿದ್ದರು. 1999ರಿಂದ 2002 ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಕುಮಾರ್‌ ನಾಯಕ್‌ ಅವರಿಗೆ ಜಿಲ್ಲೆಯ ಜತೆ ಒಡನಾಟವಿತ್ತು. ಐಎಎಸ್‌ ಅಧಿಕಾರಿಯಾಗಿದ್ದರು ಎಂಬ ಸಾಫ್ಟ್‌ ಕಾರ್ನರ್‌, ಯುವಕರ ಬೆಂಬಲವು ಅವರ ಜತೆಗಿತ್ತು.

2019, 2014ರಲ್ಲಿ ಏನಾಗಿತ್ತು?

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ರಾಜಾ ಅಮರೇಶ್ವರ್‌ ನಾಯಕ್‌ ಅವರು ಕಾಂಗ್ರೆಸ್‌ನ ಬಿ.ವಿ. ನಾಯಕ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು. ರಾಜಾ ಅಮರೇಶ್ವರ್‌ ನಾಯಕ್‌ ಅವರು 1.17 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ವಿ. ನಾಯಕ್‌ ಅವರು ಬಿಜೆಪಿಯ ಶಿವನಗೌಡ ನಾಯಕ್‌ ವಿರುದ್ಧ ಕೇವಲ 1,499 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. 2019ರಲ್ಲಿ ರಾಜಾ ಅಮರೇಶ್ವರ್‌ ನಾಯಕ್‌ ಅವರಿಗೆ ಮೋದಿ ಅಲೆಯು ವರದಾನವಾಗಿತ್ತು.

ಇದನ್ನೂ ಓದಿ: Belagavi Election Result 2024: ಬೆಳಗಾವಿಯಲ್ಲಿ ಶೆಟ್ರಂಗಡಿ ಓಪನ್;‌ ಮೃಣಾಲ್‌ ಹೆಬ್ಬಾಳ್ಕರ್‌ ವಿರುದ್ಧ ಜಗದೀಶ್‌ ಶೆಟ್ಟರ್‌ಗೆ ಜಯ

Exit mobile version