ರಾಯಚೂರು: ನಕಲಿ ಪಿಸ್ತೂಲ್ ತೋರಿಸಿ ಮನೆ ದರೋಡೆ ಮಾಡಿದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗಾಂಧಿನಗರ ಗ್ರಾಮದಲ್ಲಿ ನಡೆದಿದೆ.
ಗಾಂಧಿನಗರ ನಿವಾಸಿ ಎಂ. ಭಾಸ್ಕರ ರಾವ್ ಮನೆಯಲ್ಲಿ ಕಳ್ಳತನವಾಗಿದೆ. ಗಾಂಧಿನಗರ ಗ್ರಾಮದ ಶಿವದೇಗುಲದ ಅಧ್ಯಕ್ಷ ಭಾಸ್ಕರ ರಾವ್ ಅವರ ಮನೆಗೆ ರಾತ್ರಿ 12 ಗಂಟೆ ಸುಮಾರಿಗೆ ನುಗ್ಗಿದ ದರೋಡೆಕೋರರು ಪಿಸ್ತೂಲ್ ತೋರಿಸಿ ಬೆದರಿಸಿ ವಜ್ರದ ಕಿವಿಯೋಲೆ ಸೇರಿ ಒಟ್ಟು 38.85 ಲಕ್ಷ ರೂ. ಮೌಲ್ಯದ ಸ್ವತ್ತು ಅಪಹರಿಸಿದ್ದಾರೆ. ಈ ವೇಳೆ ಭಾಸ್ಕರ ರಾವ್ ಸೇರಿದಂತೆ ಮನೆಯ ಸದಸ್ಯರ ಮೇಲೆ ಕಬ್ಬಿಣ ರಾಡ್‌ನಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಮನೆಯಲ್ಲಿದ್ದ ನಗ ನಾಣ್ಯ, ಸಿಸಿ ಕ್ಯಾಮೆರಾ ಡಿವಿಆರ್ ಸಹ ಹೊತ್ತೊಯ್ದಿದ್ದಾರೆ.
ನಂತರ ಪಿಸ್ತೂಲ್ ಮನೆಯಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದು, ಪರಿಶೀಲಿಸಿದಾಗ ನಕಲಿ ಪಿಸ್ತೂಲ್ ಎಂದು ಗೊತ್ತಾಗಿದೆ. ಮೂರು ಜನರ ತಂಡದಿಂದ ಕೃತ್ಯ ನಡೆದಿರುವುದು ಗೊತ್ತಾಗಿದೆ. ತುರವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಸ್ಪಿ ಸೇರಿದಂತೆ ಶ್ವಾನದಳದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಇದನ್ನೂ ಓದಿ | Petrol Pump Robbery | ಪೆಟ್ರೋಲ್ ಪಂಪ್ ದರೋಡೆಗೆ ಬಂದು ಹೆಣವಾದ! ವಿಡಿಯೋ ವೈರಲ್