Site icon Vistara News

Self Harming : ಮಣ್ಣಾಗಿ ಹೋಯ್ತು ಶಿಕ್ಷಕನ ಕನಸು; ಸರ್ಕಾರದ ವಿರುದ್ಧ ಡೆತ್‌ ನೋಟ್‌ ಬರೆದಿಟ್ಟು ಯುವಕ ಆತ್ಮಹತ್ಯೆ

Self harming by young man

ರಾಯಚೂರು: ಶಿಕ್ಷಕನಾಗುವ ಕನಸು (dream to become teacher) ಹೊತ್ತಿದ್ದ ಯುವಕನೊಬ್ಬ ಅದು ಕೈಗೂಡದೆ ಹೋದ ಬೇಸರದಲ್ಲಿ ಆಡಳಿತ ವ್ಯವಸ್ಥೆಯ (Fuming aganist system) ವಿರುದ್ಧ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ (Self Harming).

ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಘಟನೆ ನಡೆದಿದೆ. ಇಲ್ಲಿನ ಜ್ಞಾನಗಂಗಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಮರಕ್ಕೆ ಚಿಕ್ಕ ಬೂದೂರಿನ ಯುವಕ ಚನ್ನಬಸವ (25) ನೇಣು ಬಿಗಿದುಕೊಂಡಿದ್ದಾನೆ.

ಬಹುಹಿಂದಿನಿಂದಲೇ ಶಿಕ್ಷಕನಾಗುವ ಕನಸು ಹೊತ್ತಿದ್ದ ಆತ ಅದಕ್ಕಾಗಿ ತೀವ್ರ ಪ್ರಯತ್ನ ನಡೆಸುತ್ತಿದ್ದ. ಕಳೆದ ಬಾರಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂಥ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಈಗ ಬಾರಿ ಆತನೇ ಫೇಲ್‌ ಆಗಿದ್ದ. ಹೀಗಾಗಿ ಅವನಿಗೆ ಭಾರಿ ಬೇಸರವಾಗಿತ್ತು ಎನ್ನಲಾಗಿದೆ.

2022ರ ಪಟ್ಟಿಯಲ್ಲಿದ್ದ ಹೆಸರು ಕೊನೆಗೆ ಮಿಸ್‌ ಆಗಿತ್ತು!

ನಿಜವೆಂದರೆ, 6-8ನೇ ತರಗತಿ ಶಿಕ್ಷಕರ ಹುದ್ದೆಗೆ ಚನ್ನಬಸವ ಆಯ್ಕೆಯಾಗಿದ್ದ. 2022ರ ನೇಮಕಾತಿ ಲಿಸ್ಟ್‌ನಲ್ಲಿ ಅವನ ಹೆಸರು ಇತ್ತು. ಆದರೆ, ಕೊನೆ ಕ್ಷಣದಲ್ಲಿ ಲಿಸ್ಟ್ ನಿಂದ‌ ಹೆಸರು ಕೈ ತಪ್ಪಿತ್ತು.

ಬಳಿಕ ಮತ್ತೊಂದು ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದ ಚನ್ನಬಸವ ಈ ಬಾರಿಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಫೇಲ್ ಆಗಿದ್ದ. ಬಳಿಕ ಪ್ರತ್ಯೇಕ ರೂಮ್ ಮಾಡಿ ಪರೀಕ್ಷೆಗೆ ತಯಾರಿ‌ ನಡೆಸಿದ್ದ ಚನ್ನಬಸವ.

ದೇವದುರ್ಗ ಪಟ್ಟಣದಲ್ಲೇ ರೂಮ್‌ ಮಾಡಿಕೊಂಡು ಸಿದ್ಧತೆ ನಡೆಸುತ್ತಿದ್ದ ಚನ್ನಬಸವನಿಗೆ ಏನಾಯಿತೋ ಗೊತ್ತಿಲ್ಲ. ಒಮ್ಮಿಂದೊಮ್ಮೆಗೇ ತಾನು ಪ್ರೀತಿಸುತ್ತಿದ್ದ ಶಾಲೆಯ ಆವರಣದ ಮರದ ಬಳಿ ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.

ಅಂತಿಮವಾಗಿ ಆಡಳಿತ ವ್ಯವಸ್ಥೆ ವಿರುದ್ಧ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾರೋ ಮಾಡಿದ ತಪ್ಪಿಗೆ ವ್ಯವಸ್ಥೆ ನನಗೆ ಶಿಕ್ಷೆ ನೀಡಿದೆ. ಆಡಳಿತ ವ್ಯವಸ್ಥೆಗೆ ನನ್ನ ದಿಕ್ಕಾರವಿರಲಿ ಎಂದು ಡೆತ್ ನೋಟ್ ಬರೆದಿದ್ದಾರೆ.

ಬಹುಶಃ ಕಳೆದ ಬಾರಿ ಆಯ್ಕೆ ಪಟ್ಟಿಯಲ್ಲಿ ಬಂದ ಹೆಸರನ್ನು ಬದಲಿಸಲಾಗಿದೆ ಎನ್ನುವ ನೋವು ಅವರನ್ನು ಕಾಡುತ್ತಿದೆ. ಇದು ವ್ಯವಸ್ಥೆ ತನಗೆ ಬಗೆದ ದ್ರೋಹವೆಂದು ಅವರು ನೋವು ಅನುಭವಿಸುತ್ತಿದ್ದರು ಅನಿಸುತ್ತದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Students end life : ಚೆನ್ನಾಗಿ ಓದಿ ಎಂದು ಹೆತ್ತವರು ಬುದ್ಧಿ ಹೇಳಿದ್ದಕ್ಕೆ ಪ್ರಾಣವನ್ನೇ ಕಳೆದುಕೊಂಡ ಇಬ್ಬರು ವಿದ್ಯಾರ್ಥಿನಿಯರು

ಈ ನಡುವೆ, ಯಾರೂ ಕೂಡಾ ಯಾರ ವಿರುದ್ಧವೂ ದೂರು ನೀಡಬಾರದು ಎಂದೂ ಅವರು ಮನವಿ ಮಾಡಿದ್ದಾರೆ. ನನ್ನ ಕುಟುಂಬ ಅನಕ್ಷರಸ್ಥ. ಹೀಗಾಗಿ ಅವರನ್ನು ಬಳಸಿಕೊಂಡು ಯಾರಾದರೂ ದೂರು ನೀಡಲೂಬಹುದು. ಅದನ್ನೂ ಪರಿಗಣಿಸಬಾರದು ಎಂದು ಕೂಡಾ ಡೆತ್‌ ನೋಟ್‌ನಲ್ಲಿ ಮನವಿ ಮಾಡಲಾಗಿದೆ.

ಇದೀಗ ಪೊಲೀಸರು ಕುಟುಂಬಿಕರಿಗೆ ವಿಷಯ ತಿಳಿಸಿದ್ದು ಮುಂದಿನ ಕ್ರಮಗಳನ್ನು ಜರುಗಿಸಿದ್ದಾರೆ.

Exit mobile version