ರಾಯಚೂರು: ಅಪ್ರಾಪ್ತ ವಯಸ್ಸಿನಲ್ಲೇ (Minor Aged Girl) ಕಾರು ಚಾಲಕನ ಜತೆ ಪ್ರೀತಿ-ಪ್ರೇಮ-ಪ್ರಣಯದಲ್ಲಿ (Love With Car Driver) ತೊಡಗಿದ್ದ ಬಾಲಕಿಯೊಬ್ಬಳು ಇದೀಗ ಪ್ರಾಣ ಕಳೆದುಕೊಂಡಿದ್ದಾಳೆ (Self Harming). ಇದಕ್ಕೆ ಕಾರಣ ಅವಳ ಹೆತ್ತವರು ಈ ಪ್ರೀತಿಯನ್ನು ಆಕ್ಷೇಪಿಸಿದ್ದು.
ರಾಯಚೂರು ಜಿಲ್ಲೆಯ (Raichur News) ಮಾನ್ವಿ ಪಟ್ಟಣದಲ್ಲಿ ನಡೆದ ಘಟನೆ ನಡೆದಿದ್ದು, ಸಂಗೀತಾ (17) ಆತ್ಮಹತ್ಯೆಗೆ ಒಳಗಾದ ಅಪ್ರಾಪ್ತ ಬಾಲಕಿ.
ಸಂಗೀತಾಗೆ ಕಾರು ಚಾಲಕ ಕೃಷ್ಣಾ ಎಂಬ ಯುವಕನ ಜೊತೆ ಪ್ರೀತಿ-ಪ್ರೇಮ ಇತ್ತು. ಆಕೆ ಈ ಹಿಂದೆ ಎರಡು ಬಾರಿ ಕೃಷ್ಣಾನ ಜೊತೆಯಾಗಿ ಮನೆಬಿಟ್ಟಿದ್ದಳು. ಬಳಿಕ ಬುದ್ಧಿವಾದ ಹೇಳಿ ಮನೆಗೆ ಕರೆ ತರಲಾಗಿತ್ತು.
ಇದೀಗ ಮತ್ತೊಮ್ಮೆ ಆಕೆ ಚಾಲಕನ ಜತೆ ಓಡಿ ಹೋಗಲು ಸಿದ್ಧತೆ ಮಾಡಿದಾಗ ಮನೆಯವರು ಆಕೆಯನ್ನು ತಡೆದಿದ್ದರು. ಇದರಿಂದ ಮನನೊಂದ ಆಕೆ ಮನೆಯಲ್ಲಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮನೆಯಲ್ಲಿದ್ದ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಂಗೀತಾ ಮೃತದೇಹವನ್ನು ಮಾನ್ವಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : Illicit relationship : Live in ಇದ್ದಾಗಲೇ ಮತ್ತೊಬ್ಬನ ಜತೆ Love in! ಸಂಗಾತಿ ಸೂಸೈಡ್
ಹೋಟೆಲ್ ಕೆಲಸದ ಸಂಬಳ ಕೇಳಿದ್ದಕ್ಕೆ ಮರಕ್ಕೆ ಕಟ್ಟಿ ಹಾಕಿ ಹಲ್ಲೆ
ಚಿಕ್ಕಮಗಳೂರು: ಮಾಡಿದ ಕೆಲಸಕ್ಕೆ ಸಂಬಳ ಕೇಳಿದ್ದಕ್ಕೆ ಯುವಕನೊಬ್ಬನನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿದ ಘಟನೆ ಕೊಪ್ಪ ತಾಲೂಕಿನ ಸೋಮ್ಲಾಪುರ ರಸ್ತೆಯ ಪ್ಲಾಂಟೇಶನ್ ನಲ್ಲಿ ನಡೆದಿದೆ.
ಕೊಪ್ಪ ಸಮೀಪದ ಕರ್ಕೇಶ್ವರ ಗ್ರಾಮದ ಸತೀಶ್ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಆತ ಹೋಟೆಲ್ ಕೆಲಸದ ಸಂಬಳವನ್ನು ಕೇಳಿದ್ದ. ಆಗ ಕೆಲವು ಯುವಕರು ಸೇರಿ ಮರಕ್ಕೆ ಯುವಕನ ಕೈ ಕಾಲು ಕಟ್ಟಿ ಹಾಕಿ ಥಳಿಸಿದ್ದಾರೆ.
ಹಲ್ಲೆ ಮಾಡಿದ ವಿಡಿಯೊ ವೈರಲ್ ಆಗಿದ್ದು, ಬಳಿಕ ಆರೋಪಿಗಳು ತಲೆಮರಿಸಿಕೊಂಡಿದ್ದರು. ಹೀಗೆ ತಲೆಮರೆಸಿಕೊಂಡಿದ್ದ ಮಹೇಶ್, ವಿಠಲ್, ಸಿರಿಲ್, ಸುನೀಲ್, ಮಂಜು ಎಂಬವರನ್ನು ಬಂಧಿಸಲಾಗಿದೆ.
ಈ ಗುಂಪು ಮದ್ಯಪಾನ ಮಾಡುತ್ತ ಹಲ್ಲೆ ನಡೆಸಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ. ಹಲ್ಲೆ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐವರ ಬಂಧನಕ್ಕೆ ತಂಡ ರಚನೆ ಮಾಡಿದ್ದ ಚಿಕ್ಕಮಗಳೂರು ಎಸ್ಪಿ