ಉಡುಪಿ: ಕೊಲ್ಲೂರು ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ ಗರೀಬ್ ರಥ್ ರೈಲು ಮೊದಲ ನಿಲುಗಡೆ ಸಂಭ್ರಮವನ್ನು ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘ ಹಾಗೂ ರಿಕ್ಷಾ, ಟ್ಯಾಕ್ಸಿ ಮಾಲಕರು ಆಚರಿಸಿದರು.
ರಾಜ್ಯದಲ್ಲೇ ಪ್ರಸಿದ್ಧ ಪುಣ್ಯಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸಂದರ್ಶನಕ್ಕೆ ತೆರಳುವವರಿಗೆ ಲೋಕಮಾನ್ಯ ತಿಲಕ್ – ಕೊಚುವೆಲಿ – ಮುಂಬೈ ಲೋಕಮಾನ್ಯ ತಿಲಕ್ ಗರೀಬ್ ರಥ ರೈಲು ವಾರದ ನಾಲ್ಕು ದಿನ ಬೈಂದೂರು ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದೆ.
ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಜನರು ಹರ್ಷ ವ್ಯಕ್ತಪಡಿಸಿದರು. ಈ ರೈಲಿನ ನಿಲುಗಡೆಗಾಗಿ ಬಹಳ ದಿನಗಳಿಂದ ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘ ಹೋರಾಟ ನಡೆಸುತ್ತಾ ಬಂದಿತ್ತು. ನಿಲುಗಡೆಯ ಕುರಿತು ಹರ್ಷ ವ್ಯಕ್ತಪಡಿಸಿದ ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘ, ಗರೀಬ್ ರಥ ರೈಲು ಬೈಂದೂರಿನಲ್ಲಿ ನಿಲುಗಡೆಗೆ ಶ್ರಮವಹಿಸಿದ ಜನಪ್ರತಿನಿಧಿಗಳು ಹಾಗೂ ಸಹಕರಿಸಿದ ಕೇಂದ್ರ ರೈಲ್ವೆ ಮಂತ್ರಿಗಳಾದ ಅಶ್ವಿನಿ ವೈಷ್ಣವ್ ಅವರಿಗೆ ಅಭಿನಂದನೆ ಸಲ್ಲಿಸಿದೆ.
ಇದನ್ನೂ ಓದಿ: Hill Station: ಮಾಥೇರಾನ್ ಗಿರಿಧಾಮದ ಭೇಟಿಗೆ ಥ್ರಿಲ್ ತುಂಬಲು ಬಂದಿದೆ ಪುಟಾಣಿ ವಿಸ್ಟಾಡೋಮ್ ರೈಲು!