ಹಾಸನ: ಇಲ್ಲಿನ ಸಕಲೇಶಪುರ ತಾಲೂಕಿನ ದೋಣಿಗಾಲ್ ಸಮೀಪ ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಶಿರಾಡಿಘಾಟ್‌ನಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿತ ಉಂಟಾಗಿದೆ. ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಕಾಮಗಾರಿ ನಡೆಯುತ್ತಿದ್ದು, ಸಾವಿರಾರು ಲೋಡ್ ಮಣ್ಣನ್ನು ಪೇರಿಸಲಾಗಿತ್ತು. ಆದರೆ ಭಾರಿ ಮಳೆಗೆ (Rain Effect) ಸಾವಿರಾರು ಲೋಡ್ ಮಣ್ಣು ನೀರಿನ ಜತೆಗೆ ರೈತರ ಜಮೀನುಗಳಿಗೆ ನುಗ್ಗಿದೆ.
ಸುಮಾರು 50 ಎಕರೆಗೂ ಅಧಿಕ ಕೃಷಿ ಭೂಮಿ ಹಾಳಾಗಿದೆ. ಮಣ್ಣು ಸಮೇತ ನೀರು ನುಗ್ಗಿ ಬಂದಿದ್ದರಿಂದ ಕಾಫಿ, ಭತ್ತ, ಅಡಿಕೆ ಬೆಳೆಗಳೆಲ್ಲವೂ ಸಂಪೂರ್ಣ ಹಾಳಾಗಿವೆ.
ಚತುಷ್ಟಥ ಕಾಮಗಾರಿಯಲ್ಲಿ ಅವಘಡ
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯನ್ನು ರಾಜ್ ಕಮಾಲ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಗುತ್ತಿಗೆ ಪಡೆದವರು ಮಳೆ ನೀರು ಹೋಗಲು ತಳಭಾಗದಲ್ಲಿ ಪೈಪ್ ಅಳವಡಿಸದೇ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಅವಘಡಕ್ಕೆ ಇದೇ ಕಾರಣ ಎನ್ನಲಾಗುತ್ತಿದೆ. ರಸ್ತೆ ನಿರ್ಮಾಣಕ್ಕಾಗಿ ಸಾವಿರಾರು ಲೋಡ್ ಮಣ್ಣನ್ನು ಬೇರೆಡೆಯಿಂದ ತರಲಾಗಿತ್ತು. ಈಗ ಭಾರಿ ಮಳೆಗೆ ಮಣ್ಣು ಕೊಚ್ಚಿ ಜಮೀನುಗಳಿಗೆ ಸೇರಿದೆ. ಇದರಿಂದಾಗಿ ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ.
ಈ ಜಾಗದಲೇ ಭೂಕುಸಿತ
ಈ ಹಿಂದೆ ಇದೇ ಜಾಗದಲ್ಲಿ ಭೂಕುಸಿತವಾಗಿ ಹೆದ್ದಾರಿ ಬಂದ್ ಆಗಿತ್ತು. ಈಗ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಜಿಲ್ಲಾಡಳಿತವು ಶಿರಾಡಿಘಾಟ್‌ನಲ್ಲಿ ಲಘು ವಾಹನ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಿದೆ.
ಇದನ್ನೂ ಓದಿ | Rain News | ಬೆಳಗಾವಿಯಲ್ಲಿ ಮಳೆಯ ಆರ್ಭಟಕ್ಕೆ ಅಪಾರ ಹಾನಿ: ಎಲ್ಲಿ ಎಷ್ಟು?