ಬೆಳಗಾವಿ/ ಕೊಡಗು/ಶಿವಮೊಗ್ಗ: ವರುಣನ ಆರ್ಭಟ ಮತ್ತೆ ಮುಂದುವರಿದಿದ್ದು, ಬೆಳಗಾವಿಯಲ್ಲಿ ಹಲವು ಶಾಲಾ ಕಟ್ಟಡಗಳು ಕುಸಿದಿವೆ. ಕೊಡಗಿನಲ್ಲಿ ದನದ ಕೊಟ್ಟಿಗೆ ಗೋಡೆ ಕುಸಿದು ಆಕಳು, ಕರುಗಳು ಸತ್ತಿವೆ. ಶಿವಮೊಗ್ಗದಲ್ಲಿ ಮಳೆಯಿಂದಾಗಿ ಮನೆ ಕುಸಿದಿದೆ.
ಬೆಳಗಾವಿಯ ಖಾನಾಪುರ ತಾಲೂಕಿನಲ್ಲಿ ಮಳೆಯಿಂದಾಗಿ ಐದು ಸರ್ಕಾರಿ ಶಾಲಾ ಕಟ್ಟಡಗಳು ಕುಸಿತಗೊಂಡಿವೆ. ಗುರ್ಲಗುಂಜಿ, ಮುತೆವಾಡಿ, ಹಲಗಾ ಗ್ರಾಮದ ಮರಾಠಿ ಶಾಲೆಯ ಕೊಠಡಿ ಮತ್ತು ಮುಗಳಿಹಾಳ, ಗಂದಿಗವಾಡದ ಸರ್ಕಾರಿ ಕನ್ನಡ ಶಾಲೆಯ ಕಟ್ಟಡಗಳು ಹಾನಿಗೊಳಗಾಗಿವೆ. ಈಗಾಗಲೇ ತಾಲೂಕು ಆಡಳಿತ ಶಿಥಿಲಾವಸ್ಥೆಯಲ್ಲಿರುವ 12 ಶಾಲಾ ಕಟ್ಟಡಗಳನ್ನು ಗುರುತಿಸಿದೆ.
ಇದನ್ನೂ ಓದಿ | Rain fury: ಮಹಾಮಳೆಗೆ ತತ್ತರಿಸಿದ ಅಹಮದಾಬಾದ್: ಒಂದೇ ದಿನ 115 ಮಿ.ಮೀ ಮಳೆ, 5 ವರ್ಷದಲ್ಲೇ ಇದು ದಾಖಲೆ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಭಾರೀ ಮಳೆಯಿಂದಾಗಿ ಕೋಣನತಲೆ ಗ್ರಾಮದಲ್ಲಿ ಮನೆ ಕುಸಿದಿದೆ. ಸೋಮವಾರ (ಜು.11) ರಾತ್ರಿ ಸುರಿದ ಮಳೆಯಿಂದಾಗಿ ನಜ್ಜೂರು ಲೋಕೇಶ್ ಎಂಬುವರ ಮನೆಯ ಗೋಡೆ ಕುಸಿದು, ಚಾವಣಿಯೂ ಹಾನಿಗೊಳಗಾಗಿದೆ.
ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಕುಶಾಲನಗರ ಸಮೀಪದ ಶಿರಂಗಾಲ ಮೂಡಲಕೊಪ್ಪಲು ಗ್ರಾಮದ ಮಾದಪ್ಪ ಎಂಬುವರ ದನದ ಕೊಟ್ಟಿಗೆ ಗೋಡೆ ಕುಸಿದು ಆಕಳು, ಕರುಗಳು ಪ್ರಾಣ ಕಳೆದುಕೊಂಡಿವೆ.
ಇದನ್ನೂ ಓದಿ | Rain News | ಕಿತ್ತೂರು ತಾಲೂಕಿನಲ್ಲಿ ಮಳೆ ಹಾನಿಗೊಳಪಟ್ಟ ಮನೆಗಳ ಸಂಖ್ಯೆ 30ಕ್ಕೇರಿಕೆ