ಬೆಂಗಳೂರು: ಮಳೆ ಸಂಪೂರ್ಣ ನಿಂತ ಬಳಿಕ ಸಂಪೂರ್ಣ ಮಳೆ (Rain News) ಹಾನಿ ಸಮೀಕ್ಷೆ ಮಾಡಿಯೇ ಕೇಂದ್ರಕ್ಕೆ ವರದಿ ನೀಡುತ್ತೇವೆ. ಸದ್ಯ ಮಳೆಹಾನಿ ಪರಿಹಾರ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರ ಹಣ ನೀಡುತ್ತೇವೆ. ಬಳಿಕ ಕೇಂದ್ರದಿಂದ ಬರುವ ಹಣವನ್ನು ಬಳಕೆ ಮಾಡಿಕೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್.ಆಶೋಕ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಳೆಯಿಂದ ಅಂದಾಜು ಎಷ್ಟು ನಷ್ಟ ಆಗಿದೆ ಎಂಬುದು ಗೊತ್ತಿಲ್ಲ. ಈಗಾಗಾಲೇ ನಾನು ವಿಕೋಪ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇನೆ. ಮಳೆ ಹಾನಿ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಎಂ ಕೂಡ ಹೆಚ್ಚುವರಿ ಹಣ ಬಿಡುಗಡೆ ಮಾಡಿದ್ದು, ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಡಬಲ್ ಬೆನಿಫಿಟ್ ಬರುವ ರೀತಿ ಕಂದಾಯ ಇಲಾಖೆ ಹೊಸ ಯೋಜನೆ ರೂಪಿಸಿದೆ ಎಂದರು.
ಕಾಂಗ್ರೆಸ್ ಕಾಲದಲ್ಲಿ ಗಂಜಿ ಕೇಂದ್ರ ಎಂದು ಮಾಡಿದ್ದರು. ಈಗ ನಾವದನ್ನು ಕಾಳಜಿ ಕೇಂದ್ರ ಎಂದು ಮಾಡಿದ್ದೇವೆ. ಆಗ ಅನ್ನ-ಸಾಂಬಾರ್ ಕೊಡುತ್ತಿದ್ದರು. ಈಗ ಚಪಾತಿ, ಮೊಟ್ಟೆ ಸೇರಿ ಪೌಷ್ಟಿಕ ಆಹಾರ ನೀಡುತ್ತಿದ್ದೇವೆ. ಮಳೆಯಿಂದ ಮನೆಯಲ್ಲಿನ ಸಾಮಗ್ರಿ ನೀರುಪಾಲಾಗಿದ್ದರೆ ಅಂತಹವರಿಗೆ ಹತ್ತು ದಿನಗಳಿಗೆ ಆಗುವಂತೆ ಆಹಾರ ಸಾಮಗ್ರಿ ಕಿಟ್ ಕೊಡಲಾಗುವುದು. ಕಾಳಜಿ ಕೇಂದ್ರಕ್ಕೆ ಬರಲು ಹಿಂಜರಿಯುವವರು ಸಂಬಂಧಿಕರ ಮನೆಗಳಿಗೆ ಹೋಗಿದ್ದರೆ ಅವರಿಗೂ ಕಿಟ್ ಕೊಡುತ್ತೇವೆ ಎಂದರು.
ಇದನ್ನೂ ಓದಿ | Rain News | ರಾಜ್ಯದಲ್ಲಿ ಮುಂದುವರಿದ ಧಾರಾಕಾರ ಮಳೆ; ಹಲವೆಡೆ ಪ್ರವಾಹ