ಬೆಂಗಳೂರು: ವರುಣಾರ್ಭಟದಿಂದ ತತ್ತರಿಸಿರುವ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲು ರಾಜ್ಯ ಸರಕಾರ ೨೦೦ ಕೋಟಿ ರೂ. ಬಿಡುಗಡೆ ಮಾಡಿದೆ. ಅತಿ ಹೆಚ್ಚು ಹಾನಿಗೆ ಒಳಗಾಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ೧೦ ಕೋಟಿ ರೂ. ನೀಡಲಾಗಿದೆ.
2022-23ನೇ ಸಾಲಿನ ಮುಂಗಾರು ಋತುವಿನಲ್ಲಿ ರಾಜ್ಯಾದ್ಯಂತ ಭಾರಿ ಪ್ರಮಾಣದಲ್ಲಿ ಮುಂಗಾರು ಮಳೆಯಾಗುತ್ತಿದ್ದು ಇದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿ ಮಾನವ ಜೀವ ಹಾನಿ, ಜಾನುವಾರು ಜೀವ ಹಾನಿ, ಬೆಳ ಹಾನಿ, ಮನೆ ಹಾನಿ ಹಾಗೂ ಸಾರ್ವಜನಿಕ ಮೂಲ ಸೌಕರ್ಯ ಹಾನಿಯಾಗಿರುವುದು ಜಿಲ್ಲೆಗಳಲ್ಲಿ ಕಂಡು ಬಂದಿದೆ. ಜುಲೈ ಹಾಗೂ ಆಗಸ್ಟ್ ಮೊದಲ ವಾರದಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಹೆಚ್ಚು ಬಿದ್ದ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದ್ದು, ಜಿಲ್ಲೆಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ತುರ್ತು ವರಿಹಾರ ಕಾರ್ಯಗಳನ್ನು ಕೈಗೊಳ್ಳಲು ತುರ್ತಾಗಿ ಅನುದಾನ ಬಿಡುಗಡೆಗೊಳಿಸುವಂತೆ, ಜಿಲ್ಲಾಧಿಕಾರಿಗಳು ಕೋರಿದ ಹಿನ್ನೆಲೆಯಲ್ಲಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ರೂ.200.00 ಕೋಟಿಗಳನ್ನು ಬಿಡುಗಡೆ ಮಾಡಲು ಸರ್ಕಾರವು ನಿರ್ಧರಿಸಿದೆ.
2022-23ನೇ ಸಾಲಿನ ಆಯವ್ಯಯದಲ್ಲಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ, ಕೇಂದ್ರ ಸರ್ಕಾರದ ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾರ್ಗಸೂಚಿಯನ್ನಯ ಪುಕೃತಿ ವಿಕೋಪ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರದ ಪಾಲು ರೂ.664,00 ಕೋಟಿ ಹಾಗೂ ರಾಜ್ಯ ಸರ್ಕಾರದ ಪಾಲು ರೂ.221.34 ಕೋಟಿಗಳನ್ನೊಳಗೊಂಡಂತೆ ಒಟ್ಟು ರೂ.885.34 ಕೋಟಿ ಹಂಚಿಕೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಯಾವುದಕ್ಕೆ ಬಳಸಬೇಕು?
-ಕೇಂದ್ರ ಸರ್ಕಾರದ ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ ಹಾಗೂ ರಾಜ್ಯ ಸರ್ಕಾರದಿಂದ ಕಾಲ-ಕಾಲಕ್ಕೆ ಹೊರಡಿಸುವ ಆದೇಶಗಳನ್ವಯ ವರಿಹಾರ ಕಾರ್ಯಗಳಿಗೆ ಬಳಸಬಹುದು.
-ಅನುದಾನವನ್ನು ಯಾವ ಉದ್ದೇಶಕ್ಕಾಗಿ ಒದಗಿಸಲಾಗಿದೆಯೋ ಅದೇ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು ಮತ್ತು ಅನುದಾನ ವೆಚ್ಚ ಮಾಡಿದ್ದಕ್ಕೆ, ಸಂಬಂಧಿಸಿದಂತೆ ಸೂಕ್ತ ಲೆಕ್ಕ ಪತ್ರ ಇಡಬೇಕು. ಹಣ ಬಳಕೆಗೆ ಪ್ರಮಾಣ ಪತ್ರ ಸಲ್ಲ ನ್ನು ಕಡ್ಡಾಯವಾಗಿ ಸರ್ಕಾರಕ ಸಲ್ಲಿಸತಕ್ಕದ್ದು.
– ಅನುದಾನ ಬಳಕೆ ವಿವರವನ್ನು ಗೃಹ ಮಂತ್ರಾಲಯದ NOMIS ಪೋರ್ಟರಲ್ಲಿ ನಮೂದಿಸಬೇಕು.
– ಹಣ ಬಳಕೆಯಲ್ಲಿ ಯಾವುದೇ ಲೋಪವಾದಲ್ಲಿ ಆಯಾ ಜಿಲ್ಲಾಧಿಕಾರಿಯವರನ್ನೇ ನೇರವಾಗಿ ಜವಾಬ್ದಾರರನ್ನಾಗಿ ಮಾಡಲಾಗುವುದು.
ಯಾವ ಜಿಲ್ಲೆಗೆ ಎಷ್ಟು ಅನುದಾನ?
ಬಳ್ಳಾರಿ- ೫ ಕೋಟಿ ರೂ, ಚಿಕ್ಕಮಗಳೂರು-೧೦ ಕೋಟಿ, ಚಿತ್ರದುರ್ಗ- ೫ ಕೋಟಿ ರೂ.
ದಕ್ಷಿಣ ಕನ್ನಡ-೨೦ ಕೋಟಿ, ದಾವಣಗೆರೆ-೧೫ ಕೋಟಿ, ಧಾರವಾಡ- ೫ ಕೋಟಿ ರೂ.
ಧಾರವಾಡ-೫ ಕೋಟಿ ರೂ, ಗದಗ – ೫ ಕೋಟಿ ರೂ, ಹಾಸನ- ೧೫ ಕೋಟಿ ರೂ.
ಹಾವೇರಿ- ೫ ಕೋಟಿ ರೂ, ಕೊಪ್ಪಳ- ೧೦ ರೂ., ಮಂಡ್ಯ- ೧೦ ಕೋಟಿ ರೂ.
ರಾಯಚೂರು- ೧೦ ಕೋಟಿ, ತುಮಕೂರು-೧೦ ಕೋಟಿ, ಶಿವಮೊಗ್ಗ-೧೦ ಕೋಟಿ
ಉಡುಪಿ- ೧೫ ಕೋಟಿ ರೂ. ಉತ್ತರ ಕನ್ನಡ-೧೦ ಕೋಟಿ, ವಿಜಯ ನಗರ- ೫ ಕೋಟಿ
ಮೈಸೂರು-೧೫ ಕೋಟಿ, ಚಾಮರಾಜ ನಗರ-೫ ಕೋಟಿ, ಕೋಲಾರ-೧೦ ಕೋಟಿ, ಚಿಕ್ಕಬಳ್ಳಾಪುರ-೧೫ ಕೋಟಿ ರೂ.
ಇದನ್ನೂ ಓದಿ | Rain News | ತಾಳಿಕೋಟೆ ಪಟ್ಟಣದ ಡೋಣಿ ನದಿಯಲ್ಲಿ ಮತ್ತೆ ಪ್ರವಾಹ, ಮನೆಗಳತ್ತವೂ ನೀರು!