ಚಿಕ್ಕೋಡಿ: ಮಳೆಗೆ ಮನೆ ಬಿದ್ದು (Rain News) ಜನರು ಬೀದಿಪಾಲಾಗಿದ್ದಾರೆ. ಮನೆಯಲ್ಲಿ ಸಂಗ್ರಹವಾಗಿದ್ದ ಅಕ್ಕಿ ಬೇಳೆ ಎಲ್ಲವೂ ನೀರುಪಾಲಾಗಿದೆ. ಹೊಟ್ಟೆ ಬಟ್ಟೆಗೆ ಸಂಕಷ್ಟ ಎದುರಾಗಿದೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಮಾಣಿಕವಾಡಿ ಗ್ರಾಮದ ವ್ಯಕ್ತಿಯೊಬ್ಬರು ಮೂಕಜೀವಿಗಳ ಹಸಿವು ನೀಗಿಸಿ ಮಾನವೀಯತೆ ಮೆರೆದಿದ್ದಾರೆ.
ಸೋಮವಾರ ರಾತ್ರಿಯಿಂದ ಆಹಾರವಿಲ್ಲದೇ ಶ್ವಾನ ಹಾಗೂ ಬೆಕ್ಕೊಂದು ಪರದಾಡುತ್ತಿತ್ತು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಪ್ಲಾಸ್ಟಿಕ್ ಹಾಳೆಯಲ್ಲಿ ಆಹಾರ ನೀಡಿದ್ದಾರೆ. ಮನೆ ಕಳೆದುಕೊಂಡು ನಿರಾಶ್ರಿತರಾದರೂ ಆ ವ್ಯಕ್ತಿ ಮೂಕ ಪ್ರಾಣಿಗಳ ರೋದನೆಗೆ ಸ್ಪಂದಿಸಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.
ಗೋಕಾಕ ತಾಲೂಕಿನ ಮಾಣಿಕವಾಡಿಯಲ್ಲಿ ಸೋಮವಾರ ರಾತ್ರಿಯಿಡೀ ಮಳೆ ಸುರಿದ ಪರಿಣಾಮ, ಹಲವು ಮನೆಗಳು ನೆಲಸಮವಾಗಿವೆ. ಸುಮಾರು 400ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.
ಇದನ್ನೂ ಓದಿ | ಮಾಣಿಕವಾಡಿಯ ಮಹಾಮಳೆ: ಒಂದೇ ಗಂಟೆಯಲ್ಲಿ 400 ಮನೆಗೆ ನುಗ್ಗಿದ ನೀರು, 12 ಮನೆಗಳು ಧರೆಗೆ