ಬಳ್ಳಾರಿ: ರಾತ್ರಿಪೂರ್ತಿ ಸುರಿದ ಮಳೆಯಿಂದ (Rain news) ಮೋಕಾ ವಿದ್ಯುತ್ ವಿತರಣಾ ಕೇಂದ್ರ ಜಲಾವೃತಗೊಂಡಿದೆ. ಸೋಮವಾರ ರಾತ್ರಿಯಿಂದ ಶುರುವಾದ ಮಳೆಯ ಆರ್ಭಟ ಮಂಗಳವಾರವು ಮುಂದುವರಿದಿದ್ದು, ಮೋಕ ಗ್ರಾಮದಲ್ಲಿರುವ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಜಲಾವೃತದಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ.
ಮಳೆ ನೀರು ವಿದ್ಯುತ್ ಕೇಂದ್ರಕ್ಕೆ ನುಗ್ಗಿದ್ದರಿಂದ ಸುಮಾರು 4 ಅಡಿಯಷ್ಟು ಹೈವೊಲ್ಟೇಜ್ ಟ್ರಾನ್ಸ್‌ಫಾರ್ಮರ್‌ಗಳು ಮುಳುಗಿವೆ. ನೀರನ್ನು ಹೊರಹಾಕುವ ಕೆಲಸದಲ್ಲಿ ಸಿಬ್ಬಂದಿಗಳು ನಿರತರಾಗಿದ್ದಾರೆ. ಮುಂಜಾಗ್ರತಾ ದೃಷ್ಟಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ಮನೆಯೊಳಗೆ ನುಗ್ಗಿದ ನೀರು
ಮೋಕಾ ಹಾಗೂ ಚಾಗನೂರು ಗ್ರಾಮದಲ್ಲಿ ಹಲವು ಮನೆಗಳು ನೀರಿನಲ್ಲಿ ಅರ್ಧ ಮುಳಗಿ ಹೋಗಿವೆ. ಮನೆಯಲ್ಲಿನ ಸಾಮಾಗ್ರಿಗಳು ನೀರುಪಾಲಾಗಿದ್ದು, ನೀರು ಹೊರಹಾಕಲು ಜನರು ಹರಸಾಹಸ ಪಡುತ್ತಿದ್ದಾರೆ. ಜತೆಗೆ ಜಮೀನುಗಳೆಲ್ಲವೂ ಪುಟ್ಟ ಕೆರೆಯಂತಾಗಿದ್ದು, ನೀರು ನುಗ್ಗಿದ್ದರಿಂದ ಬೆಳೆ ಸಂಪೂರ್ಣ ಹಾಳಾಗಿದೆ. ಮಳೆ ಹಾನಿ ಪೀಡಿತ ಸ್ಥಳಗಳಿಗೆ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Rain news | ಮಳೆ ರಭಸಕ್ಕೆ ಕುಸಿದು ಬಿದ್ದ ಕುರಿ ಶೆಡ್ಡು; ಕುರಿ, ಮೇಕೆಗಳ ಸಾವು