ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಶನಿವಾರ ರಾತ್ರಿ ಭಾರಿ ಮಳೆ ಸುರಿದು ಹಲವು ಕಡೆ ಅನಾಹುತಗಳು ಸಂಭವಿಸಿವೆ. ಬೆಂಗಳೂರಿನ ಯಶವಂತಪುರ ಸರ್ಕಲ್ ಬಳಿ ಧರೆಗುರಿಳಿದ ಭಾರಿ ಗಾತ್ರದ ಮರ ಉರುಳಿ ಬಿದ್ದಿದೆ. ಆದರೆ, ವಾಹನಗಳ ಸಂಖ್ಯೆ ಕಡಿಮೆ ಇದ್ದುದರಿಂದ ದೊಡ್ಡ ಅನಾಹುತ ತಪ್ಪಿದೆ. ನ್ನೆಲೆ ತಪ್ಪಿದ ಅನಾಹುತ
ಗೊರಗುಂಟೆಪಾಳ್ಯದಿಂದ ಯಶವಂತಪುರ ಸರ್ಕಲ್ ಕಡೆ ಬರುವ ರಸ್ತೆಯಲ್ಲಿ ಈ ಭಾರಿ ಗಾತ್ರದ ಮರ ಉರುಳಿ ಬಿದ್ದಿದೆ. ಮಹಾಲಕ್ಷ್ಮಿ ಲೇಔಟ್ ರಾಜೇಂದ್ರ ಟೆಕ್ಸ್ ಟೈಲ್ಸ್ ಸ್ಲಂ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ೧೦ಕ್ಕೂ ಹೆಚ್ಚು ಮನೆಗಳಿಗೆ ತೊಂದರೆಯಾಗಿದೆ. ರಾತ್ರಿಯಿಂದಲೇ ಜನರು ನೀರನ್ನು ಹೊರಹಾಕುವ ಕೆಲಸ ಮಾಡುತ್ತಿದ್ದಾರೆ.
ಬೆಂಗಳೂರಿನ ರಾಜಾಜಿನಗರದ ರಾಮ ಮಂದಿರ ಬಳಿಯೂ ಮರವೊಂದು ರಸ್ತೆಗೆ ಉರುಳಿ ಬಿದ್ದಿದ್ದು, ಫುಟ್‌ಪಾತ್‌ಗೆ ಅಳವಡಿಸಲಾದ ವಿಭಜಕಗಳು ಮುರಿದು ಹೋಗಿವೆ.
ಆನೇಕಲ್, ಗೋವಿಂದ ರಾಜನಗರ ಸೇರಿದಂತೆ ನಗರದ ಹೆಚ್ಚಿನ ಪ್ರದೇಶಗಳಲ್ಲಿ ಮಳೆ ಅವಾಂತರವನ್ನೇ ಸೃಷ್ಟಿಸಿದೆ.
ತುಮಕೂರಿನಲ್ಲೂ ಅಬ್ಬರ
ತುಮಕೂರಿನಲ್ಲಿ ರಾತ್ರೋರಾತ್ರಿ ಸುರಿದ ಮಳೆಯಿಂದ ಹಲವು ಮನೆಗಳಿಗೆ ನೀರು ನುಗ್ಗಿದೆ. ಸದಾಶಿವ ನಗರ ಭಾಗದಲ್ಲಿ ಮನೆಗೆ ನೀರು ನುಗ್ಗಲು ಮಳೆ ನೀರನ್ನು ರಾಜಕಾಲುವೆಗೆ ಸಂಪರ್ಕಿಸದೆ ಬಿಟ್ಟಿದ್ದೇ ಕಾರಣ ಎಂದು ಆರೋಪಿಸಲಾಗಿದೆ.
ಶಾರ್ಟ್ ಸರ್ಕಿಟ್‌ಗೆ ಒಬ್ಬ ಬಲಿ: ಇಲ್ಲಿನ ದೇವನೂರು ಚರ್ಚ್ ಬಳಿ ಮನೆಗೆ ಮಳೆ ನೀರು ನುಗ್ಗಿದ್ದರ ಪರಿಣಾಮ, ವಿದ್ಯುತ್ ಶಾರ್ಟ್ ಸರ್ಕಿಟ್ ಆಗಿ ಕೆ.ಸಿ. ವೀರಣ್ಣ (೭೫) ಎಂಬವರು ಮೃತಪಟ್ಟಿದ್ದಾರೆ.