ಗದಗ: ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಬಿದ್ದು ವೃದ್ಧೆ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ಗುರುವಾ ಬೆಳಗಿನ ಜಾವ ನಡೆದಿದೆ.
ಸುಮಾರು ೭೫ ವರ್ಷದ ಲಕ್ಷ್ಮವ್ವ ಮಾದರ ಮೃತ ದುರ್ದೈವಿ. ಇಬ್ಬರು ಮಕ್ಕಳು, ಮೊಮ್ಮಕ್ಕಳು ಪಕ್ಕದ ಹೊಸ ಮನೆಯಲ್ಲಿ ಮಲಗಿದ್ದರು. ಅಜ್ಜಿ ಲಕ್ಷ್ಮವ್ವ ಮಾತ್ರ ಈ ಹಳೆ ಮನೆಯಲ್ಲಿ ಮಲಗಿದ್ದರು.
ಬೆಳಗಿನ ಜಾವ ಏಕಾಏಕಿ ಮನೆಯ ಮೇಲ್ಚಾವಣಿ ಹಾಗೂ ಗೋಡೆ ಕುಸಿದಿದೆ. ನಂತರ ಸ್ಥಳಿಯರು, ಅಗ್ನಿಶಾಮಕ ದಳ ಸಿಬ್ಬಂದಿಗಳು ಮೃತದೇಹ ಹೊರ ತೆಗೆದಿದ್ದಾರೆ. ಸ್ಥಳಕ್ಕೆ ರೋಣ ತಹಸೀಲ್ದಾರ, ಸಿಪಿಐ ಹಾಗೂ ಕಂದಾಯ ನಿರೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಲವು ದಿನಗಳಿಂದ ವ್ಯಾಪಕವಾಗಿ ಸುರಿದ ಮಳೆಗೆ ಈ ದುರ್ಘಟನೆ ನಡೆದಿದೆ. ಈ ಕುರಿತು ಗದಗ ಜಿಲ್ಲೆ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Rain News: ರಾಜ್ಯಾದ್ಯಂತ ಮಳೆ, ಸಿಡಿಲ ಹೊಡೆತಕ್ಕೆ ಇಬ್ಬರು ಪೊಲೀಸರ ಸಹಿತ ಎಂಟು ಮಂದಿ ಬಲಿ