ವಿಜಯನಗರ: ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಹಂಪಿ ಸ್ಮಾರಕಗಳು ಮುಳುಗುವ ಹಂತದಲ್ಲಿವೆ. ಈಗಾಗಲೇ ರಾಮ ಲಕ್ಷ್ಮಣ ದೇವಸ್ಥಾನಕ್ಕೆ ಹೋಗುವ ದಾರಿ ಮುಳುಗಡೆ ಆಗಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟರೆ ಪುರಂದರ ಮಂಟಪ ಸೇರಿದಂತೆ ರಾಮದೇವರ ಪಾದಕ್ಕೆ ನೀರು ನುಗ್ಗುವ ಸಾಧ್ಯತೆ ಇದೆ.
ಹಂಪಿಯಲ್ಲಿ ಧಾರ್ಮಿಕ ವಿಧಿವಿಧಾನ ಮಂಟಪ ಜಲಾವೃತಗೊಂಡಿದೆ. ಬೋಟ್‌ಗಳನ್ನು ನದಿಯ ತಡದಲ್ಲಿ ಲಂಗರು ಹಾಕಿ ನಿಲುಗಡೆ ಮಾಡಲಾಗಿದೆ. ಇನ್ನೂ ಒಂದು ಲಕ್ಷ ಕ್ಯೂಸೆಕ್ ನೀರು ಹರಿಬಿಡುವ ಸಾಧ್ಯತೆ ಇದ್ದು, ನದಿಪಾತ್ರದ ಜನರಿಗೆ ನೀರಿನ ಸಮೀಪಕ್ಕೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ | ಗುಜರಾತ್ನಲ್ಲಿ ಭೀಕರ ಮಳೆ: ಗೋಡೆ ಕುಸಿದು 8 ಮಂದಿ ಸಾವು, ಇನ್ನೂ 2 ದಿನ ವರುಣಾರ್ಭಟ ಸಾಧ್ಯತೆ