Site icon Vistara News

Rain News | ಪಂಪ್‌ಸೆಟ್‌ ತರಲು ಹೋದ ಯುವಕ ಘಟಪ್ರಭಾ ನದಿಪಾಲು

ಬಾಗಲಕೋಟೆ ಘಟಪ್ರಭ

ಬಾಗಲಕೋಟೆ: ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿರುವ (Rain News) ಹಿನ್ನೆಲೆಯಲ್ಲಿ ನದಿಗಳು ತುಂಬಿ ಅಪಾಯಮಟ್ಟದಲ್ಲಿ ಹರಿಯುತ್ತಿವೆ. ಮುಧೋಳ ತಾಲೂಕಿನ ಒಂಟಗೋಡಿ ಗ್ರಾಮದ ಯುವಕನೊಬ್ಬ ಪಂಪ್‌ಸೆಟ್‌ ತರಲು ಹೋಗಿದ್ದಾಗ ಘಟಪ್ರಭಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಒಂಟಗೋಡಿ ಗ್ರಾಮ ವಿಜಯ್ ಬಿರಾದಾರ (೧೯) ಮೃತ ದುರ್ದೈವಿ. ಇವರು ಬೆಳಗ್ಗೆ ಒಂಟಗೋಡಿಯಿಂದ ದೊಡ್ಡಪ್ಪ ವೆಂಕಣ್ಣ ಜತೆ ಪಂಪ್‌ಸೆಟ್ ತರಲು ಹೊರಗೆ ತೆರಳಿದ್ದರು ಎನ್ನಲಾಗಿದೆ. ಆ ವೇಳೆ ಘಟಪ್ರಭಾ ನದಿಯಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾರೆ. ಅವರನ್ನು ರಕ್ಷಿಸಲು ದೊಡ್ಡಪ್ಪ ಮುಂದಾದರೂ ಸಾಧ್ಯವಾಗಲಿಲ್ಲ.

ತಕ್ಷಣವೇ ಸ್ಥಳೀಯರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಬಳಿಕ ಮುಧೋಳ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಘಟಪ್ರಭಾ ನದಿಯಲ್ಲಿ ಶೋಧ ನಡೆಸಿ ಮೃತದೇಹವನ್ನು ಪತ್ತೆ ಮಾಡಿ ಹೊರಗೆ ತೆಗೆಯಲಾಗಿದೆ. ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Rain News | ಬಾಗಲಕೋಟೆಯಲ್ಲಿ ಗುಡುಗು ಸಹಿತ ಭಾರಿ ಮಳೆ, ಸಿಡಿಲು ಬಡಿದು ರೈತ ಸಾವು

Exit mobile version