Site icon Vistara News

Rajaji Nagar Election Results : ರಾಜಾಜಿನಗರದಲ್ಲಿ ಮಾಜಿ ಸಚಿವ ಸುರೇಶ್​ ಕುಮಾರ್​ಗೆ ಜಯ

Rajaji Nagar bangalore assembly election winner suresh kumar

#image_title

ಬೆಂಗಳೂರು: ನಗರ ಜಿಲ್ಲೆಯ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ (Rajaji Nagar Election Results) ಮಾಜಿ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಬಿಜೆಪಿಯಿಂದ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್​ ಪಕ್ಷದ ಪುಟ್ಟಣ್ಣ ವಿರುದ್ಧ ಗೆಲವು ಸಾಧಿಸಿದ್ದಾರೆ. 2018ರ ಚುನಾವಣೆಯಲ್ಲಿ ಬಿಜೆಪಿಯ ಸುರೇಶ್​ ಕುಮಾರ್ (suresh kumar) ಅವರು 56,271 ಮತ ಪಡೆದು ಗೆಲ್ಲುವ ಮೂಲಕ ಕಾಂಗ್ರೆಸ್​ನ ಪದ್ಮಾವತಿ ವಿರುದ್ಧ 9,453 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಜೆಡಿಎಸ್‌ನ ಎಚ್‌ ಎಂ ಕೃಷ್ಣಮೂರ್ತಿ 13,637 ಮತ ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದರು.

ಒಕ್ಕಲಿಗ ಸಮುದಾಯ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದೆ. ಆದರೆ ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಗೆ ಆದ್ಯತೆ. ಕ್ಷೇತ್ರದಲ್ಲಿ ಒಟ್ಟು 2,22,200 ಮತದಾರರು ಇದ್ದಾರೆ. ಅದರಲ್ಲಿ ಲಿಂಗಾಯತರು 51,000, ಒಕ್ಕಲಿಗ 45,000 ಇದ್ದರೆ, ಎಸ್‌ಸಿ-ಎಸ್‌ಟಿ ಮತದಾರರ ಸಂಖ್ಯೆ 38,000 ಇದೆ. ಇನ್ನುಳಿದಂತೆ ಬ್ರಾಹ್ಮಣ 23,000, ತಮಿಳು ಹಾಗೂ ತೆಲುಗು ಭಾಷಿಕರು 21,000, ಇತರೇ ಮತದಾರರು 15,500 ಇದ್ದರೆ, 7 ಸಾವಿರದಷ್ಟು ಮುಸ್ಲಿಂ ಮತದಾರರಿದ್ದಾರೆ.

2008, 2013 ಹಾಗೂ 2018ರ ಚುನಾವಣೆಯಲ್ಲಿ ಬಿಜೆಪಿಯ ಸುರೇಶ್‌ ಕುಮಾರ್‌ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ. ಮೂರರಲ್ಲೂ ಕಾಂಗ್ರೆಸ್​ ಭರ್ಜರಿ ಪೈಪೋಟಿ ಕೊಟ್ಟಿದೆ.

Read This : Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

Exit mobile version