Site icon Vistara News

Rajasthan murder | ರಾಜ್ಯದೆಲ್ಲೆಡೆ ʼಕತ್ತು ಸೀಳಬೇಡಿʼ ಅಭಿಯಾನ

Rajsthan murder

ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಟೇಲರ್‌ ಕನ್ಹಯ್ಯ ಲಾಲ್‌ ಅವರ ಹತ್ಯೆ ಖಂಡಿಸಿ ರಾಜ್ಯದಲ್ಲಿ ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಬೀದಿ ಬದಿ ವ್ಯಾಪಾರಿಗಳು ನಾಮಫಲಕವನ್ನು ಹಿಡಿದು ವಿಭಿನ್ನ ಅಭಿಯಾನ ಆರಂಭಿಸಿದ್ದಾರೆ.

ʻನಾನು ಬಡವ ನನ್ನ ಕತ್ತು ಸೀಳಬೇಡಿʼ ಎಂಬ ಫಲಕಗಳನ್ನು ಸೋಷಿಯಲ್‌ ಮೀಡಿಯಾ ಮೂಲಕ ಪೋಸ್ಟ್‌ ಮಾಡುತ್ತಿದ್ದಾರೆ. ʼನಾನು ಸತ್ಯ ಹೇಳಲ್ಲ; ಹೇಳಿದವರ ಪರ ನಿಲ್ಲುವುದೂ ಇಲ್ಲ. ನಾನು ಬಡವ, ನನ್ನ ಕುಟುಂಬ ನನ್ನನ್ನೇ ನಂಬಿಕೊಂಡಿದೆ. ನನ್ನ ಕತ್ತನ್ನು ಸೀಳಬೇಡಿ.ʼ ಎಂದು ಕ್ಯಾಪ್ಷನ್‌ ನೀಡಿ ಜನರು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ | Rajsthan murder: ಕನ್ಹಯ್ಯ ಲಾಲ್‌ ಹಂತಕರಿಗೆ ಪಾಕಿಸ್ತಾನ ಲಿಂಕ್‌, 45 ದಿನ ಜಿಹಾದಿ ಟ್ರೇನಿಂಗ್‌!

ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಅವರರು ಹೇಳಿದ ಮಾತಿಗೆ ಹಿಂದುಗಳು ಬೆಂಬಲ ನೀಡಲಿಲ್ಲ ಎಂಬ ನೋವು ಈ ಫಲಕದ ಮೊದಲ ಎರಡು ಸಾಲಿನಲ್ಲಿದೆ. ಇನ್ನೊಂದು ಕಡೆ ಈ ರೀತಿಯ ಘಟನೆಗಳಿಗೆ ಹಿಂದೂಗಳು, ಸಂಘಟನೆಗಳು, ಸರ್ಕಾರಗಳು ಬೆಂಬಲ ನೀಡಿಲ್ಲ, ನಾವು ಅಸಹಾಯಕರು ಎಂಬ ಸಂದೇಶವೂ ಇದೆ. ಮೂರನೆಯದಾಗಿ, ರಾಜಸ್ಥಾನದ ದುರ್ಘಟನೆಯ ಖಂಡನೆಯನ್ನೂ ಮಾಡಲಾಗುತ್ತಿದೆ.

ಜೂನ್‌ ೨೮ರ ಸಂಜೆಯ ಹೊತ್ತು ಕನ್ಹಯ್ಯ ಲಾಲ್‌ ಅಂಗಡಿಯಲ್ಲಿ ಒಬ್ಬರೇ ಇದ್ದರು. ಆಗ ಒಳಪ್ರವೇಶಿಸಿದ ದುಷ್ಕರ್ಮಿ ಒಂದು ಜುಬ್ಬಾ ಹೊಲಿಸಬೇಕಿತ್ತು ಎಂದು ಹೇಳುತ್ತಾ ಅಂಗಡಿಗೆ ಕಾಲಿಟ್ಟಿದ್ದ. ಕನ್ಹಯ್ಯ ಲಾಲ್‌ ಜುಬ್ಬಾದ ಅಳತೆ ತೆಗೆಯಲೆಂದು ಬಾಗುತ್ತಿದ್ದಂತೆಯೇ ಹರಿತವಾದ ಆಯುಧದಿಂದ ಗೋಣನ್ನೇ ಕತ್ತರಿಸಿ ಬಿಟ್ಟಿದ್ದ ಮೊಹಮ್ಮದ್‌ ಅಖ್ತಾರಿ. ಮುಂದೆ ಬೆನ್ನು ಬೆನ್ನಿಗೆ ೨೬ ಬಾರಿ ಕತ್ತರಿಸುವ ಹೊತ್ತಿಗೆ ರುಂಡ ಮುಂಡ ಬೇರೆ ಬೇರೆಯಾಗಿತ್ತು. ಇದೆಲ್ಲವನ್ನೂ ವಿಡಿಯೊ ಮಾಡಿದ್ದವನು ಘೋಷ್‌ ಮೊಹಮ್ಮದ್‌.

ರಾಜಸ್ಥಾನದ ಉದಯಪುರದಲ್ಲಿ ಅಮಾಯಕ ದರ್ಜಿ ಕನ್ಹಯ್ಯ ಲಾಲ್‌ ಅವರನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ (Rajsthan murder) ಮೊಹಮ್ಮದ್‌ ರಿಯಾಜ್‌ ಮತ್ತು ಮೊಹಮ್ಮದ್‌ಗೆ ಪಾಕಿಸ್ತಾನದ ಸಂಪರ್ಕ ಇರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ | Rajasthan murder: ಜೈಪುರದಲ್ಲಿ ಸರಣಿ ಸ್ಫೋಟಕ್ಕೆ ಸ್ಕೆಚ್‌ ಹಾಕಿದ್ದ ಕನ್ಹಯ್ಯ ಲಾಲ್‌ ಹಂತಕರು, NIA ತನಿಖೆ ವೇಳೆ ಬಯಲು

Exit mobile version