Site icon Vistara News

ಗೋಮಾಳದಿಂದ ಒಕ್ಕಲೆಬ್ಬಿಸಿಬೇಡಿ ಎಂದು ರಾಮನಗರ ‌ಜಿಲ್ಲಾಧಿಕಾರಿ ಕಾಲಿಗೆ ಬಿದ್ದ ರೈತರು

ರಾಮನಗರ ‌

ರಾಮನಗರ: ಗೋಮಾಳ ಜಮೀನಿನಲ್ಲಿ ಕಳೆದ ಐವತ್ತು ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇವೆ, ದಯವಿಟ್ಟು ಒಕ್ಕಲೆಬ್ಬಿಸಬೇಡಿ ಎಂದು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಚಿಕ್ಕಕಲ್ಯಾ ಗ್ರಾಮದಲ್ಲಿ ರೈತರು ಜಿಲ್ಲಾಧಿಕಾರಿ ಕಾಲಿಗೆ ಬಿದ್ದು ಬೇಡಿಕೊಂಡಿದ್ದಾರೆ.

ಶೈಕ್ಷಣಿಕ ಉದ್ದೇಶಕ್ಕೆ ಗೋಮಾಳ ಬಳಿಸಿಕೊಳ್ಳಲು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಸಂಸದ ಡಿ‌.ಕೆ.ಸುರೇಶ್, ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಚಿಕ್ಕಕಲ್ಯಾ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ರೈತರು, ನಮಗೆ ಬೇರೆ ಭೂಮಿ, ಆದಾಯದ ಮೂಲಗಳಿಲ್ಲ. ಕಳೆದ ಐವತ್ತು ವರ್ಷಗಳಿಂದ ಗೋಮಾಳ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇವೆ. ಶೈಕ್ಷಣಿಕ ಉದ್ದೇಶ ಮುಂದಿಟ್ಟು ರೈತರನ್ನ ಒಕ್ಕಲೆಬ್ಬಿಸಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡು ಜಿಲ್ಲಾಧಿಕಾರಿ ಕಾಲಿಗೆ ಬಿದ್ದಿದ್ದಾರೆ.

ಈಗಾಗಲೇ ಹಕ್ಕುಪತ್ರಕ್ಕಾಗಿ ಫಾರ್ಮ್‌ 53 ಹಾಗೂ 57ರ ಅಡಿ ಅರ್ಜಿ ಕೂಡ ಹಾಕಿದ್ದೇವೆ ಎಂದು ಜಿಲ್ಲಾಧಿಕಾರಿ ಹಾಗೂ ಸಂಸದರ ಗಮನಕ್ಕೆ ತಂದ ರೈತರು, ಭೂ ರಹಿತ ಬಡವರಿಗೆ ಭೂಮಿ ಹಂಚಿಕೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಚಿಕ್ಕಕಲ್ಯಾ ಗ್ರಾಮ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ್ ಅವರ ಸ್ವಗ್ರಾಮವಾಗಿದೆ.

ಇದನ್ನೂ ಓದಿ | Rajakaluve Encroachment | ಬಡವರ ಮನೆ ಮೇಲೆ ಬಿಬಿಎಂಪಿ ಸಿಂಹ ಗರ್ಜನೆ; ಪ್ರಭಾವಿಗಳಿಗೆ ಮೃದು ಧೋರಣೆ!

Exit mobile version