Site icon Vistara News

Ramanagara Jail : ರಾಮನಗರ ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರ ರೇಡ್‌, ಮೊಬೈಲ್‌, ಸಿಗರೇಟ್‌, ಗಾಂಜಾ ಪತ್ತೆ

Ramanaga jail

ರಾಮನಗರ : ರಾಮನಗರದ ಜಿಲ್ಲಾ ಕಾರಾಗೃಹದ ಮೇಲೆ ಬೆಳ್ಳಂಬೆಳಗ್ಗೆ ಖಾಕಿ ದಾಳಿ ನಡೆದಿದೆ. 50ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳ ತಂಡ ಜೈಲಿನ ಮೇಲೆ ದಾಳಿ ನಡೆಸಿದೆ. ಎಸ್ಪಿ‌ ಕಾರ್ತಿಕ್ ರೆಡ್ಡಿ ಆದೇಶದ ಮೇರೆಗೆ ರೇಡ್ ನಡೆದಿದೆ.

ಈ ದಾಳಿಯ ವೇಳೆಯಲ್ಲಿ, ಮೊಬೈಲ್, ಸಿಗರೇಟ್, ಗಾಂಜಾ ಪತ್ತೆಯಾಗಿದೆ ಎಂದು ವರದಿಯಾಗಿದೆ. ಪ್ರತಿ ಬಾರಿ ರೇಡ್ ವೇಳೆ ಮೊಬೈಲ್, ಸಿಗರೇಟ್, ಗಾಂಜಾ ಪತ್ತೆಯಾಗುತ್ತಿದೆ. ಜೈಲು ಸಿಬ್ಬಂದಿಗಳ ಸಹಕಾರದಿಂದಲೇ ಜೈಲಿನಲ್ಲಿ ಮಾದಕ ವಸ್ತುಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲಾ ಕಾರಾಗೃಹದಲ್ಲಿ ಈ ಹಿಂದೆ ಹುಟ್ಟುಹಬ್ಬ ಆಚರಣೆ (Birthday Celebration) ಹಾಗೂ ಅನಧಿಕೃತವಾಗಿ ಮೊಬೈಲ್‌ ಬಳಕೆ ಪ್ರಕರಣದಲ್ಲಿ ಐವರು ವಿಚಾರಣಾಧೀನ ಕೈದಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.

‌ಕೊಲೆ ಪ್ರಕರಣ ಹಾಗೂ ಡಕಾಯಿತಿ ಪ್ರಕರಣದಲ್ಲಿ ಬಂಧನವಾಗಿರುವ ರೌಡಿಶೀಟರ್ ಕಿರಣ್ ಅಲಿಯಾಸ್ ತಮಟೆ ಎಂಬಾತನ ಹುಟ್ಟುಹಬ್ಬವನ್ನು ಕಳೆದ ಜ.14ರಂದು ಆಚರಿಸಲಾಗಿತ್ತು. ಜೈಲಿನೊಳಗೇ ಇದ್ದುಕೊಂಡು ಹುಟ್ಟಹಬ್ಬ ಆಚರಣೆ ಮಾಡಿದ್ದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕೈದಿಗಳು ಫೋಟೊಗಳನ್ನು ಶೇರ್‌ ಮಾಡಿದ್ದರು. ಇದು ವೈರಲ್ ಆಗಿದ್ದರಿಂದ ಜಿಲ್ಲಾ ಕಾರಾಗೃಹಕ್ಕೆ ರಾಮನಗರ ಎಸ್‌ಪಿ ಸಂತೋಷ್ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಕೈದಿಗಳಿಂದ ಎರಡು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು

Exit mobile version