ರಾಮನಗರ: ಊರಿನ ಜಾತ್ರೆಯ ಸಂದರ್ಭದಲ್ಲಿ ಕೊಂಡ ಹಾಯುವ ವೇಳೆಯಲ್ಲಿ ಅರ್ಚಕರೊಬ್ಬರು ಆಯ ತಪ್ಪಿ ಕೆಳಕ್ಕೆ ಬಿದ್ದು ಬೆಂಕಿಯಲ್ಲಿ ಸುಟ್ಟು ಗಾಯಗಳಾಗಿವೆ.
ಕನಕಪುರ ತಾಲೂಕು ಸಾತನೂರು ಹೋಬಳಿಯ ನಾಯಕನಹಳ್ಳಿ ಎಂಬ ಗ್ರಾಮದಲ್ಲಿ ಘಟನೆ ನಡೆದಿದೆ. ನಾಯಕನಹಳ್ಳಿಯ ಶ್ರೀ ವೀರಭದ್ರ ಸ್ವಾಮಿಯ ಜಾತ್ರಾ ಮಹೋತ್ಸವದ ಅಗ್ನಿ ಕೊಂಡೋತ್ಸವದಲ್ಲಿ ಈ ಅವಘಡ ನಡೆದಿದೆ.
ಗಾಯಗೊಂಡವರು ಅದೇ ಊರಿನ ಶ್ರೀ ವೀರಭದ್ರ ಸ್ವಾಮಿಯ ಅರ್ಚಕರಾಗಿದ್ದಾರೆ. ಕೆಂಡದ ಹಬೆಗೆ ಅರ್ಚಕರ ದೇಹ ಸಂಪೂರ್ಣವಾಗಿ ಗಾಯಗೊಂಡಿದೆ. ಅರ್ಚಕರನ್ನು ಗ್ರಾಮಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಿಕ್ಕಬಳ್ಳಾಪುರ: ಶ್ರೀನಿವಾಸಪುರದ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳು ಟ್ರೆಕ್ಕಿಂಗ್‌ಗೆ ಹೋಗಿದ್ದ ವೇಳೆ ಅವರ ಮೇಲೆ ಹೆಜ್ಜೇನು ದಾಳಿ (Honeybee attack) ಮಾಡಿದ್ದು, 80ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ನಗರದ ಖಾಸಗಿ ಬಿ.ಜಿ ವೇಣು ಶಾಲೆಯ ವಿದ್ಯಾರ್ಥಿಗಳು ಚಿಂತಾಮಣಿಯ ತಪಥೇಶ್ವರ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ಬಂದಿದ್ದರು.
ಮಕ್ಕಳು ಬೆಳಗ್ಗೆ ಹನ್ನೊಂದು ಗಂಟೆ ವೇಳೆ ಬೆಟ್ಟಕ್ಕೆ ಹತ್ತಿದ್ದರು. ಅಲ್ಲೆಲ್ಲ ಆಟವಾಡಿ, ಪ್ರಕೃತಿಯ ನಡುವೆ ಬೆರೆತು ಸಂಭ್ರಮಿಸಿ ಮಧ್ಯಾಹ್ನ ಮೂರು ಗಂಟೆಯ ವೇಳೆ ಬೆಟ್ಟದಿಂದ ಇಳಿಯಲು ಆರಂಭಿಸಿದ್ದರು. ಆಗ ಒಮ್ಮಿಂದೊಮ್ಮೆಗೆ ಹೆಜ್ಜೇನುಗಳು ದಾಳಿ ಮಾಡಿವೆ. ಹೆಜ್ಜೇನು ದಾಳಿಗೆ ಕಂಗಾಲಾಗಿ ಪರದಾಡಿದ ವಿದ್ಯಾರ್ಥಿಗಳ ರಕ್ಷಣೆಗೆ ಕೆಂದನಹಳ್ಳಿ ಗ್ರಾಮಸ್ಥರು ಧಾವಿಸಿದರು. ಕೂಡಲೇ ಆಸ್ಪತ್ರೆ, ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು.
ಕೂಡಲೇ ಅವರನ್ನು ಚಿಂತಾಮಣಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳು ಅದೃಷ್ಟವಶಾತ್ ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಮಕ್ಕಳ ನೋವಿಗೆ ಊರಿನವರು ಸ್ಪಂದಿಸಿದ ರೀತಿ ಅನನ್ಯವಾಗಿತ್ತು. ಆಂಬ್ಯುಲೆನ್ಸ್ ಬರುವುದು ತಡವಾದಾಗ ಕೆಲವರು ತಮ್ಮ ಬೈಕ್‌ಗಳಲ್ಲಿ ಮಕ್ಕಳನ್ನು ಕೂರಿಸಿಕೊಂಡು ಆಸ್ಪತ್ರೆಗೆ ದಾಖಲಿಸಿದರು. ಕೆಲವರಂತೂ ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಓಡಿದ್ದು ಕಂಡುಬಂತು.
ಇದನ್ನೂ ಓದಿ: Bellary News: ಸಿರುಗುಪ್ಪ ಬಳಿ ಬೊಲೆರೊ ವಾಹನದ ಟಯರ್ ಬ್ಲಾಸ್ಟ್, 37 ಜನರಿಗೆ ಗಾಯ