ರಾಮನಗರ: ತುಂಬಿರುವ ಮಂಚನಬೆಲೆ ಜಲಾಶಯದಿಂದ ನಿರಂತರ ನೀರು ಬಿಟ್ಟ ಹಿನ್ನೆಲೆಯಲ್ಲಿ ಜಲಾಶಯದ ಬಳಿ ಇರುವ ಸೇತುವೆ ಸಂಪೂರ್ಣ ಕುಸಿದಿದೆ. ಇದರಿಂದ ಮಾಗಡಿಯ ಹಲವು ಗ್ರಾಮಗಳಿಗೆ ಬೆಂಗಳೂರಿನ ಸಂಪರ್ಕ ಕಡಿತಗೊಂಡಿದೆ.
ಮಾಗಡಿ ತಾಲೂಕಿನ ಮಂಚನಬೆಲೆಯ ಜಲಾಶಯದ ಬಳಿ ಇರುವ ಸೇತುವೆ ನೀರಿನ ರಭಸಕ್ಕೆ ಕುಸಿದಿದೆ. ಬೆಂಗಳೂರು ಭಾಗದಲ್ಲಿ ಹೆಚ್ಚು ಮಳೆಯಾದ ಹಿನ್ನೆಲೆಯಲ್ಲಿ ಜಲಾಶಯ ತುಂಬಿದ್ದು, ಅದರಿಂದ ನಿರಂತರವಾಗಿ ಹೊರಹರಿವು ಇತ್ತು. ಹಳೆಯ ಕಾಲದ ಸೇತುವೆ ನೀರಿನ ರಭಸ ತಡೆಯಲಾಗದೆ ಪೂರ್ಣ ಕುಸಿದಿದೆ.
ಮಾಗಡಿಯ ಹಲವು ಗ್ರಾಮಗಳಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಸೇತುವೆಯ ಎರಡೂ ಬದಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಬದಲಿ ರಸ್ತೆ ಬಳಸುವಂತೆ ರಾಮನಗರ ಜಿಲ್ಲಾ ಪೊಲೀಸ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ | Rain News | ಮಾಗಡಿಯಲ್ಲಿ ಮಳೆ ನೀರಿಗೆ ಕೊಚ್ಚಿಹೋದ ಕುರಿಗಾಹಿ ಮಹಿಳೆ