Site icon Vistara News

Ramanagar News : ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಹೂವಿನ ವ್ಯಾಪಾರಿ!

Ravichandhra and family Cryimg

ರಾಮನಗರ: ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದಲ್ಲಿ ವಿಷ ಸೇವಿಸಿ ಯುವಕನೊರ್ವ ಆತ್ಮಹತ್ಯೆಗೆ (Self Harming) ಶರಣಾಗಿದ್ದಾನೆ. ರವಿಚಂದ್ರ (35) ಆತ್ಮಹತ್ಯೆಗೆ ಶರಣಾದ ಯುವಕ.

ರವಿಚಂದ್ರ ಫುಟ್‌ಪಾತ್‌ನಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ. ಇತ್ತೀಚೆಗೆ ವ್ಯಾಪಾರದ ವಿಚಾರವಾಗಿ ಬಾಡಿಗೆ ಅಂಗಡಿಯವರಿಗೂ ರವಿಚಂದ್ರನಿಗೂ ಗಲಾಟೆ ನಡೆದಿತ್ತು.ಈ ಘಟನೆಯಿಂದ ಮನನೊಂದು ಶುಕ್ರವಾರ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕುಟುಂಬಸ್ಥರ ಆಕ್ರೋಶ

ಇತ್ತ ರಸ್ತೆಯಲ್ಲಿ ಮೃತ ಯುವಕನ ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ ನಡೆಸಿದ್ದಾರೆ. ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿರುವ ಘಟನೆ ಸಾತನೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: Assault Case : ಅಪ್ಪನ ಹಳೇ ದ್ವೇಷಕ್ಕೆ ಲಾಂಗು ಬೀಸಿದ ಮಗ; ವ್ಯಕ್ತಿಯ ಹೆಬ್ಬೆರಳು ಕಟ್‌!

ಸಾಯಲೆಂದೇ ಧರ್ಮಸ್ಥಳಕ್ಕೆ ಹೋಗಿದ್ದ ಆಕೆ ಮರಳಿ ಬಂದು ಕಟ್ಟಡದಿಂದ ಜಿಗಿದಳು!

ಆಕೆ ಸಾಯಲೆಂದೇ ನಿರ್ಧಾರ ಮಾಡಿದಂತಿದೆ. ಅದಕ್ಕಾಗಿ ಆಕೆ ಯಾರಿಗೂ ಹೇಳದೆ ಒಬ್ಬಂಟಿಯಾಗಿ ಧರ್ಮಸ್ಥಳಕ್ಕೂ (Dharmasthala Kshetra) ಹೋಗಿದ್ದಳು. ಆದರೆ, ಯಾವುದೋ ಕಾರಣಕ್ಕೆ ಆಗಿರಲಿಲ್ಲ. ಮರಳಿ ಬೆಂಗಳೂರಿಗೆ ಬಂದಿದ್ದ ಆಕೆ ಈಗ ದೊಡ್ಡ ಕಟ್ಟಡವೊಂದರಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾಳೆ (Girl ends life by jumping from Building). ಏನೋ ಹೇಳಲಾಗದ ನೋವು, ಯಾತನೆ, ಖಿನ್ನತೆ (Suffering from Depression) 17 ವರ್ಷ ಹುಡುಗಿಯ (17 year old girl) ಜೀವನವನ್ನು ಕಸಿದುಕೊಂಡಿದೆ (Self Harming).

ಹೀಗೆ ಆತ್ಮಹತ್ಯೆ ಮಾಡಿಕೊಂಡ 17 ವರ್ಷದ ವಿದ್ಯಾರ್ಥಿನಿಯ (17 year old girl) ಹೆಸರು ವಿಜಯಲಕ್ಷ್ಮಿ. ಪ್ರಥಮ ಪಿಯುಸಿ (PUC Student) ಓದುತ್ತಿದ್ದ ಆಕೆ ಈಗ ಹೆಣವಾಗಿದ್ದಾಳೆ.

ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು ಬ್ಯಾಟರಾಯನಪುರ ಬಳಿ ಇರುವ ಬ್ರೈಡ್ ಅಪಾರ್ಟ್ಮೆಂಟ್ ಕಟ್ಟಡದ ಮೇಲಿಂದ ಜಿಗಿದು. ಮುಂದೇನು ಎನ್ನುವ ಪ್ರಶ್ನೆ ಗಾಢವಾಗಿ ಕಾಡಿದಂತಿದ್ದ ಆಕೆ ಸಾವೇ ಎಂಬ ತೀರ್ಮಾನಕ್ಕೆ ಬಂದು ಈ ರೀತಿ ಮಾಡಿಕೊಂಡಂತಿದೆ.

ಕೆಲವು ದಿನಗಳ ಹಿಂದೆ ಹಿಂದೆ ಆಕೆ ಮನೆ ಬಿಟ್ಟು ಹೋಗಿದ್ದಳು. ಹದಿಹರೆಯದ ಮಗಳು ಒಮ್ಮೆಲೇ ಮಿಸ್ಸಿಂಗ್‌ ಅಂತ ಆದಾಗ ಆಕೆಯ ತಾಯಿ ಜ್ಞಾನ ಭಾರತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಒಂದಿಷ್ಟು ಖಿನ್ನತೆಯಲ್ಲಿ, ನೋವಿನಲ್ಲಿದ್ದಂತಿದ್ದಳು ಎಂದು ಮಗಳ ಬಗ್ಗೆ ಠಾಣೆಯಲ್ಲಿ ತಾಯಿ ಹೇಳಿಕೊಂಡಿದ್ದರು.

ಇತ್ತ ಮನೆಯಿಂದ ಕಣ್ಮರೆಯಾಗಿದ್ದ ವಿಜಯಲಕ್ಷ್ಮಿ ಬಹುಶಃ ಸಾಯುವ ಉದ್ದೇಶದಿಂದಲೇ ಧರ್ಮಸ್ಥಳಕ್ಕೆ ಹೋಗಿದ್ದಾರೆ. ಅಲ್ಲಿ ಸಾಯುವುದೆಲ್ಲಿ ಎಂದು ಹುಡುಕಾಟದಲ್ಲೇ ಕಾಲ ಕಳೆದಿದ್ದಾಳೆ. ಅದೊಂದು ಕಡೆಯಲ್ಲಿ ಆಕೆಯನ್ನು ಅನುಮಾನಾಸ್ಪದವಾಗಿ ನೋಡಿದ ವೃದ್ಧರೊಬ್ಬರು ಆಕೆಯನ್ನು ತಡೆದಿದ್ದರು. ಆಕೆ ತಾನು ಸಾಯಬೇಕು ಎನ್ನುವುದನ್ನು ಅವರ ಮುಂದೆ ಹೇಳಿಕೊಂಡಿದ್ದಳು. ಅವಳು ಆಕೆಗೆ ಬುದ್ಧಿವಾದ ಹೇಳಿದ್ದರು. ಯುವತಿಯ ಬಳಿಯಲ್ಲಿ ಫೋನ್‌ ನಂಬರ್‌ ಇರಲಿಲ್ಲ. ಹೀಗಾಗಿ ವೃದ್ಧರು ಏನೇ ಸಮಸ್ಯೆಯಾದರೂ ನನಗೆ ಫೋನ್‌ ಮಾಡು ಎಂದು ಆಕೆಗೆ ಚೀಟಿಯೊಂದರಲ್ಲಿ ತಮ್ಮ ನಂಬರ್‌ ಬರೆದುಕೊಟ್ಟಿದ್ದರು.

ಇತ್ತ ಯುವತಿ ಆ ವೃದ್ಧನ ಮಾತಿನಿಂದ ಸ್ವಲ್ಪ ಸಮಾಧಾನಗೊಂಡು ಮರಳಿ ಬೆಂಗಳೂರಿಗೆ ಬಂದಿದ್ದಳು. ಗುರುವಾರ ಬೆಳಗ್ಗೆ ಬೆಂಗಳೂರು ತಲುಪಿದ ಆಕೆ ಮನೆ ಕಡೆಗೆ ಹೊರಟಿದ್ದಳು.

ಅದೇನನಿಸಿತೋ ಏನೋ.. ತನ್ನ ತಂದೆಗೆ‌ ಯಾವುದೋ ಫೋನ್‌ ಬೂತ್‌ನ ಲ್ಯಾಂಡ್‌ ಲೈನ್‌ನಿಂದ ಕರೆ ಮಾಡಿದ್ದಾಳೆ. ಆದರೆ, ಏನನ್ನೂ ಮಾತನಾಡದೆ ಕಾಲ್‌ ಕಟ್‌ ಮಾಡಿದ್ದಾಳೆ. ತಂದೆಯ ಬಳಿ ಏನು ಹೇಳಬೇಕಾಗಿತ್ತೋ ಗೊತ್ತಿಲ್ಲ. ಆದರೆ ಏನೂ ಹೇಳಲು ಆಕೆಗೆ ಸಾಧ್ಯವಾಗಿಲ್ಲ. ಅಸಹಾಯಕಳಾಗಿ ಕರೆ ಕತ್ತರಿಸಿದ್ದಾರೆ. ಬಳಿಕ ಮತ್ತೆ ನಡೆಯುತ್ತಾ ಮುಂದೆ ಸಾಗಿದ್ದಾಳೆ. ಅಲ್ಲಿಂದ ಸ್ವಲ್ಪ ದೂರದಲ್ಲೇ ಇದೆ ಬ್ರೈಡ್‌ ಅಪಾರ್ಟ್‌ಮೆಂಟ್‌.

ಅದರ ಹತ್ತಿರ ಹೋಗುತ್ತಿದ್ದಂತೆಯೇ ಆಕೆಗೆ ಮತ್ತೆ ಸಾವಿನದೇ ನೆನಪಾಗಿದೆ. ಮನೆಯ ಹಾದಿಯನ್ನು ಬಿಟ್ಟು ಆಕೆ ಆ ಅಪಾರ್ಟ್‌ಮೆಂಟ್‌ ಹತ್ತಿದ್ದಾಳೆ. ಆ ಕಟ್ಟಡದ ಲಿಫ್ಟ್‌ ಮೂಲಕ ಕೊನೆಯ ಮಹಡಿಯನ್ನು ಹತ್ತಿ ನಿಂತಿದ್ದಾಳೆ. ಅಲ್ಲಿಂದ ಜಿಗಿದು ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಅನಾಥ ಶವವಾಗಿ ನೆಲಕ್ಕೆ ಉರುಳಿದ್ದಾಳೆ.

ಹುಡುಗಿಯೊಬ್ಬಳು ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದನ್ನು ತಿಳಿದು ಭಯಗೊಂಡ ಆ ಕಟ್ಟಡದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ನೋಡಿದಾಗ ಅಪರಿಚಿತ ಯುವತಿ ಎನ್ನುವುದು ಗೊತ್ತಾಗಿದೆ.

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಇಂಚಿಂಚಾಗಿ ಕೊಲ್ಲುವ ಖಿನ್ನತೆ, ಅದರಿಂದ ಹೊರಬರಲು ಇಲ್ಲಿವೆ ಸರಳ ಸೂತ್ರಗಳು

ಆಕೆಯ ಕೈಯಲ್ಲಿತ್ತು ಅದೊಂದು ನಂಬರ್‌

ಈ ನಡುವೆ, ಆಕೆಯ ಬಳಿ ಸಂಪರ್ಕ ಮಾಡುವ ಯಾವ ಕ್ಲೂಗಳೂ ಇರಲಿಲ್ಲ. ಆಕೆಯ ಕೈಯಲ್ಲಿ ಅದೊಂದು ಚೀಟಿಯಲ್ಲಿ ನಂಬರ್‌ ಇತ್ತು. ಅದಕ್ಕೆ ಕರೆ ಮಾಡಿದಾಗ ಧರ್ಮಸ್ಥಳದ ಅಜ್ಜ ಅಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಕಥೆ ಹೇಳಿದ್ದಾರೆ.

ಇತ್ತ ಜ್ಞಾನಭಾರತಿ ಠಾಣೆಗೆ ಈ ವಿಷಯ ತಲುಪಿದಾಗ ಅವರು ವಿಜಯಲಕ್ಷ್ಮಿಯ ಅಮ್ಮ ಕೊಟ್ಟ ಫೋಟೊವನ್ನು ಚೆಕ್‌ ಮಾಡಿದ್ದಾರೆ. ಹೌದು ಅವಳೇ ಇವಳು ಅನಿಸಿದಾಗ ಹೆತ್ತವರನ್ನು ಬರಲು ಹೇಳಿದ್ದಾರೆ. ಆಗ ಓಡೋಡಿ ಬಂದ ಹೆತ್ತವರಲ್ಲಿ ಅಪ್ಪ, ನನಗೊಂದು ಮಿಸ್‌ ಕಾಲ್‌ ಬಂದಿತ್ತು ಎಂದು ಹೇಳಿದರು. ನೋಡಿದರೆ ಅದು ಬ್ರೈಡ್‌ ಅಪಾರ್ಟ್‌ಮೆಂಟ್‌ನ ಪಕ್ಕದ ಒಂದು ನಂಬರ್‌ ಆಗಿತ್ತು. ಆಗ ಸ್ಪಷ್ಟವಾಯಿತು, ಮಗಳು ಕೊನೆಯ ಬಾರಿಗೆ ಅಪ್ಪನಿಗೆ ಕರೆ ಮಾಡಿದ್ದಾಳೆ. ಆದರೆ ಏನೂ ಹೇಳಲಾಗದೆ ಕಟ್‌ ಮಾಡಿದ್ದಾಳೆ.

ಆ ಒಂದು ಫೋನ್‌ ಕರೆಯಲ್ಲಿ ಮಗಳು ಒಂದು ಮಾತು ಆಡಿದ್ದರೆ ನಾನು ಅವಳನ್ನು ಬದುಕಿಸಿಕೊಳ್ಳುತ್ತಿದ್ದೆನಾ ಎಂದು ಈಗ ತಂದೆ ಪರಿತಪಿಸುತ್ತಿದ್ದಾರೆ. ಅತ್ತ ಧರ್ಮಸ್ಥಳದ ಅಜ್ಜನಿಗೂ ಅದೇ ಸಂಕಟ. ನಾನು ಆಕೆಯನ್ನು ಇಲ್ಲೇ ಉಳಿಸಿಕೊಂಡು ಹೆತ್ತವರಿಗೆ ತಿಳಿಸಿದ್ದರೆ ಆಕೆ ಬದುಕಿ ಉಳಿಯುತಿದ್ದಳಾ? ಖಿನ್ನತೆ ಎಂಬ ಭೂತ ಆಕೆಯನ್ನು ಆವರಿಸಿ ಪ್ರಾಣ ಕಳೆಯಿತಾ? ಅಥವಾ ಯಾರಿಗೂ ಹೇಳಲಾಗದ ನೋವು ಅವಳನ್ನು ಕಾಡುತ್ತಿತ್ತಾ? ಉತ್ತರ ಹೇಳಲು ಅವಳಿಲ್ಲ. ಈಗ ಉಳಿದಿರುವುದು ವಯಸ್ಸಿಗೆ ಬಂದ ಮಗಳನ್ನು ಕಳೆದುಕೊಂಡ ಹೆತ್ತವರ ಕಣ್ಣೀರು ಮಾತ್ರ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಂಡು ತನಿಖೆ ಮಾಡುತ್ತಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version