Site icon Vistara News

Ramanagar Politics: ರೀ ಮಂತ್ರಿಗಳೇ ನಿಂತ್ಕೊಳ್ರಿ ಎಂದ ಡಿ.ಕೆ. ಸುರೇಶ್‌: ಡಾ. ಸಿ.ಎನ್‌. ಅಶ್ವತ್ಥನಾರಾಯಣ್‌ ಜತೆ ಮತ್ತೆ ಜಟಾಪಟಿ

ramanagar-politics--dr-cn-ashwathnarayan-and-dk-suresh-conflict

#image_title

ರಾಮನಗರ: ಕಾರ್ಯಕ್ರಮಕ್ಕೆ ಆಹ್ವಾನಿಸುವ ಹಾಗೂ ಶಿಷ್ಟಾಚಾರ ಪಾಲನೆ ಕುರಿತಂತೆ ಸಂಸದ ಡಿ.ಕೆ. ಸುರೇಶ್‌ ಹಾಗೂ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ನಡುವೆ ಮತ್ತೊಮ್ಮೆ ಜಟಾಪಟಿ ನಡೆದಿದೆ.

ರಾಮನಗರ ಜಿಲ್ಲಾ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮಕ್ಕೂ ಮೊದಲು ಇಬ್ಬರೂ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು.

ಕಾರ್ಯಕ್ರಮಕ್ಕೆ ತಮ್ಮನ್ನು ಸರಿಯಾಗಿ ಆಹ್ವಾನಿಸಿಲ್ಲ ಎಂದು ಸಂಸದ ಡಿ.ಕೆ. ಸುರೇಶ್‌ ಆರೋಪಿಸಿದರು. ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಹಾಗೂ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಇಬ್ಬರೂ ಇದ್ದಾಗ ಮಾತನಾಡಿದರು. ಯಾರು ಅದು ಡಿಪ್ಯುಟಿ ಕಮಿಷನರ್‌? ಕರೀರಿ ಇಲ್ಲಿ ಎಂದರು. ಅತ್ತ ಹೋಗುತ್ತಿದ್ದ ಅಶ್ವತ್ಥನಾರಾಯಣ ಅವರನ್ನು ಕುರಿತು, ರೀ ಮಂತ್ರಿಗಳೇ ನಿಂತ್ಕೊಳ್ರಿ, ನಾನೂ ಇಲ್ಲಿ ಜನಪ್ರತಿನಿಧಿ. ಶಿಷ್ಟಾಚಾರ ನಿಮಗೊಬ್ಬರಿಗೇ ಇಲ್ಲಮ ನಮಗೂ ಇದೆ ಎಂದರು.

ನಿಮ್ಮನ್ನು ಕಾರ್ಯಕ್ರಮಕ್ಕೆ ಬರಬೇಡ ಎಂದು ಹೇಳಿದವರು ಯಾರು? ಎಂದು ಅಶ್ವತ್ಥನಾರಾಯಣ ಹೇಳಿದಾಗ ಸುರೇಶ್‌ ಬೆಂಬಲಿಗರು ವಾಗ್ದಾಳಿ ನಡೆಸಲು ಆರಂಭಿಸಿದರು. ಅವರನ್ನು ಸುಮ್ಮನಿರಿಸಿದ ಸುರೇಶ್‌, ಸರಿಯಾಗಿ ಆಹ್ವಾನಿಸಿಲ್ಲ. ರಾತ್ರಿ ಆಹ್ವಾನ ಪತ್ರಿಕೆ ಕಳಿಸಿ ಬೆಳಗ್ಗೆ ಕಾರ್ಯಕ್ರಮ ಮಾಡುತ್ತಿದ್ದೀರ ಎಂದರು. ಕೊನೆಗೆ ಆರೋಗ್ಯ ಸಚಿವ ಸುಧಾಕರ್‌ ಇಬ್ಬರನ್ನೂ ಸಮಾಧಾನಪಡಿಸಿ ಕಾರ್ಯಕ್ರಮದ ವೇದಿಕೆಗೆ ಕರೆದೊಯ್ದರು.

ಇದನ್ನೂ ಓದಿ: Karnataka Election | ಹಳೆ ಮೈಸೂರಿನಲ್ಲಿ ಬಿಜೆಪಿ ಅಬ್ಬರಕ್ಕೆ ಬೆದರಿದ ಕಾಂಗ್ರೆಸ್‌-ಜೆಡಿಎಸ್‌?: ಹೌದೆನ್ನುತ್ತವೆ ಘಟನಾವಳಿಗಳು

ಈ ಹಿಂದೆಯೂ ವೇದಿಕೆ ಮೇಲೆ ಇಬ್ಬರೂ ನಾಯಕರು ಜಟಾಪಟಿ ನಡೆಸಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲೇ ಇಬ್ಬರೂ ಏಕವಚನದಲ್ಲಿ ಬೈದಾಡಿಕೊಂಡಿದ್ದರು. ಆನಂತರವೂ ಅನೇಕ ಸಂದರ್ಭಗಳಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದೇ ಇದೆ.

Exit mobile version