ರಾಮನಗರ: ಜಮೀನಿಗೆ ಹೋಗಿದ್ದ ಮಹಿಳೆಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ (Woman found dead). ಸೋಮವಾರ ಸಂಜೆ ಜಮೀನಿಗೆ ಹೋಗಿದ್ದ ಈ ಮಹಿಳೆ ರಾತ್ರಿಯಾದರೂ ಮನೆಗೆ ಮರಳಿ ಬಂದಿರಲಿಲ್ಲ. ಮಂಗಳವಾರ ಮುಂಜಾನೆ ಹೊಲದ ಹೊಂಡವೊಂದರಲ್ಲಿ ಆಕೆಯ ಶವ ಪತ್ತೆಯಾಗಿದೆ.
ರಾಮನಗರ ಜಿಲ್ಲೆಯ (Ramanagara News) ಚನ್ನಪಟ್ಟಣ ತಾಲೂಕಿನ ದ್ಯಾವಪಟ್ಟಣ ಗ್ರಾಮದಲ್ಲಿ ಘಟನೆ ನಡೆದಿದ್ದು, ಶ್ವೇತಾ ಸಿ.ಕೆ (33) ಎಂಬವರೇ ಕೊಲೆಯಾಗಿರುವ ಮಹಿಳೆ. ಅವರು ಸೋಮವಾರ ಸಂಜೆ ಜಮೀನಿಗೆಂದು ಹೋಗಿದ್ದರು. ರಾತ್ರಿಯಾದರೂ ಮನೆಗೆ ಮರಳಿ ಬಂದಿರಲಿಲ್ಲ. ರಾತ್ರಿಯೂ ಹುಡುಕಾಟ ನಡೆಸಲಾಗಿದ್ದು, ಬೆಳಗ್ಗೆ ಜಮೀನಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಅತ್ತೆ, ಮಾವನಿಂದಲೇ ಕೊಲೆ ಶಂಕೆ
ಈ ನಡುವೆ ಶ್ವೇತಾ ಅವರನ್ನು ಅತ್ತೆ ಮತ್ತು ಮಾವನೇ ಕೊಲೆ ಮಾಡಿ ಜಮೀನಿನ ಹೊಂಡಕ್ಕೆ ಹಾಕಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಶ್ವೇತಾ ಅವರಿಗೆ ಈ ಹಿಂದೆ ಹಲವು ಬಾರಿ ಅತ್ತೆ-ಮಾವನ ಜೊತೆ ಜಗಳ ಆಗಿತ್ತು ಎನ್ನಲಾಗಿದೆ.
ಸ್ಥಳಕ್ಕೆ ಅಕ್ಕೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಎಸ್ಪಿ ಬರುವವರೆಗೂ ಮೃತದೇಹ ಹೊರ ತೆಗೆಯದಂತೆ ಶ್ವೇತ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಅಂತೂ ಈ ಸಾವಿನ ಪ್ರಕರಣ ಸದ್ಯಕ್ಕೆ ಜಟಿಲವಾಗಿದೆ.
ಇದನ್ನೂ ಓದಿ: Bus Accident: ಖಾಸಗಿ ಶಾಲಾ ಬಸ್‌ನಿಂದ ಬಿದ್ದು 4ನೇ ತರಗತಿ ವಿದ್ಯಾರ್ಥಿ ಸಾವು
ರಾಮನಗರ: ಒಣಗಿದ ಮರ ಬಿದ್ದು ವಿದ್ಯಾರ್ಥಿನಿಗೆ ಗಾಯ
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಲಕ್ಕೇನಹಳ್ಳಿ ಗೇಟ್ ಬಳಿ ಒಣಗಿದ ಮರದ ಗೆಲ್ಲು ಬಿದ್ದು ವಿದ್ಯಾರ್ಥಿನಿಯೊಬ್ಬಳು ಗಾಯಗೊಂಡಿದ್ದಾಳೆ. ಪ್ರಗತಿ(14) ಗಾಯಗೊಂಡ ವಿದ್ಯಾರ್ಥಿನಿ.
ಪ್ರಗತಿ ಕುದೂರಿನ ಕರ್ನಾಟಕ ಪಬ್ಲಿಕ್ ಶಾಲೆಗೆ ತೆರಳುವಾಗ ನಡೆದುಕೊಂಡು ಹೋಗುತ್ತಿದ್ದ ಆಕೆಯ ಮೇಲೆಯೇ ಮರದ ಕೊಂಬೆ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಪ್ರಗತಿಯ ತಲೆ ಮತ್ತು ಸೊಂಟದ ಭಾಗಕ್ಕೆ ಗಂಭೀರ ಗಾಯಗಳಾಗಿವೆ.
ಕೂಡಲೇ ವಿದ್ಯಾರ್ಥಿನಿಯನ್ನು ಸ್ಥಳೀಯರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಈ ಭಾಗದಲ್ಲಿ ಇನ್ನೂ ಹಲವು ಮರಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು ಯಾವುದೇ ಕ್ಷಣ ಅಪಾಯ ಉಂಟಾಗಬಹುದು. ಹೀಗಾಗಿ ಒಣಮರಗಳ ತೆರವು ಮಾಡಿ ಅನಾಹುತ ತಪ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.