Site icon Vistara News

Ramanagara News: ಮೃತ ವ್ಯಕ್ತಿಗೆ ಮರುಜೀವ ಬಂದು ಸಾವು; ಮತ್ತೆ ಬದುಕಬಹುದೆಂದು ಕಾದು ಕುಳಿತ ಜನ!

Ramanagara News

ರಾಮನಗರ: ಮೃತಪಟ್ಟಿದ್ದ ವ್ಯಕ್ತಿಯೊಬ್ಬರಿಗೆ ಮರು ಜೀವ ಬಂದು ನಂತರ ಸ್ವಲ್ಪ ಸಮಯದ ಬಳಿಕ ಪ್ರಾಣ ಹೋಗಿರುವ ಅಚ್ಚರಿಯ ಘಟನೆ ಜಿಲ್ಲೆಯ (Ramanagara News) ಚನ್ನಪಟ್ಟಣ ತಾಲೂಕಿನ ಹುಚ್ಚಯ್ಯನದೊಡ್ಡಿಯಲ್ಲಿ ನಡೆದಿದೆ. ಮರು ಜೀವ ಬಂದಾಗ ವೈದ್ಯರು ಪರೀಕ್ಷಿಸಿದ ನಂತರ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ವ್ಯಕ್ತಿ ಮೃತಪಟ್ಟಿದ್ದಾನೆ.

ಕೂಲಿ ಕಾರ್ಮಿಕ ಶಿವರಾಮು (55) ಎಂಬುವವರು ಸೋಮವಾರ ಬೆಳಗ್ಗೆ 6.30ಕ್ಕೆ ಮೃತಪಟ್ಟಿದ್ದರು. ಅವರಿಗೆ ಮಧ್ಯಾಹ್ನ 12 ಗಂಟೆಗೆ ಮರುಜೀವ ಬಂದಿದೆ. ಬಳಿಕ ಮಧ್ಯಾಹ್ನ 12.45ಕ್ಕೆ ಮತ್ತೆ ಮೃತಪಟ್ಟಿದ್ದಾರೆ.

ಬೆಳಗ್ಗೆ ಶಿವರಾಮು ಅವರು ಕುಸಿದುಬಿದ್ದಿದ್ದರು. ಹೀಗಾಗಿ ವೈದ್ಯರನ್ನು ಕರೆಸಿ ತಪಾಸಣೆ ಮಾಡಿದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ತಿಳಿಸಿದ್ದರು. ನಂತರ ಶವಸಂಸ್ಕಾರಕ್ಕೆ ಮೃತದೇಹವನ್ನು ಕೊಂಡೊಯ್ಯುವಾಗ ಶಿವರಾಮು ಎದ್ದು ಕುಳಿತಿದ್ದಾರೆ. ಇದರಿಂದ ಜನ ಗಾಬರಿಯಾಗಿದ್ದಾರೆ.

ಶಿವರಾಮುಗೆ ಮತ್ತೆ ಜೀವ ಬಂದಿದ್ದರಿಂದ ಕುಟುಂಬಸ್ಥರು ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ವೈದ್ಯರು ಶಿವರಾಮುರನ್ನು ಪರೀಕ್ಷಿಸಿ ಹೃದಯಾಘಾತ ಆಗುತ್ತಿದೆ, ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಹೀಗಾಗಿ ವ್ಯಕ್ತಿಯನ್ನು ಜಯದೇವ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ಮಾರ್ಗಮಧ್ಯೆ ಮತ್ತೆ ಜೀವ ಹೋಗಿದೆ.

ಇದನ್ನೂ ಓದಿ | Drowns in River: ಕೃಷ್ಣಾ ನದಿಗೆ ಸ್ನಾನ ಮಾಡಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲು

ಹೀಗಾಗಿ ಶಿವರಾಮು ಮೃತದೇಹವನ್ನು ಮತ್ತೆ ಹುಚ್ಚಯ್ಯನದೊಡ್ಡಿಗೆ ಸಂಬಂಧಿಕರು ತಂದಿದ್ದು, ಮತ್ತೆ ಜೀವಬರಬಹುದೆಂದು ಮನೆ ಬಳಿ ಶವವಿಟ್ಟು ಸಂಬಂಧಿಕರು ಕಾಯುತ್ತಿದ್ದಾರೆ. ಮತ್ತೊಂದೆಡೆ ಗ್ರಾಮಸ್ಥರು ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿದ್ದಾರೆ.

ಕೃಷ್ಣಾ ನದಿಗೆ ಸ್ನಾನ ಮಾಡಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲು

ವಿಜಯಪುರ: ದೇವರ ಪಲ್ಲಕ್ಕಿಯೊಂದಿಗೆ ಕೃಷ್ಣಾ ನದಿಗೆ ಸ್ನಾನ ಮಾಡಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾಗಿರುವ ಘಟನೆ (Drowns in River) ಜಿಲ್ಲೆಯ ಕೊಲ್ಹಾರ ಬಳಿ ನಡೆದಿದೆ. ಯುಗಾದಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಲ್ಲಕ್ಕಿಯಲ್ಲಿ ದೇವಿಯ ವಿಗ್ರಹವನ್ನು ತೆಗೆದುಕೊಂಡು ಸ್ನಾನ ಮಾಡಿಸಲು ನದಿಗೆ ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ.

ಕಾರಜೋಳ ಗ್ರಾಮದ ಸುದೀಪ(ಪಪ್ಪು) ದೊಡ್ಡಮನಿ (12), ಶ್ರೀಧರ ದೊಡ್ಡಮನಿ (10) ಮೃತರು. ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ಹುಚ್ಚಮ್ಮ ದೇವಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ದೇವಿ ವಿಗ್ರಹಗಳಿಗೆ ಸ್ನಾನ ಮಾಡಿಸಲು ನದಿಗೆ ಗ್ರಾಮಸ್ಥರು ತೆರಳಿದ್ದರು. ಈ ವೇಳೆ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಇಬ್ಬರು ಬಾಲಕರ ಮೃತದೇಹ ಹೊರತೆಗೆದಿದ್ದಾರೆ.

Exit mobile version