Site icon Vistara News

Ramya Politics | ರಾಜಕೀಯ ಅಖಾಡಕ್ಕೆ ನಟಿ ರಮ್ಯಾ ರೀ ಎಂಟ್ರಿ?

Ramya Politics

ರಮ್ಯಾ ರಾಜಕೀಯ (Ramya Politics) ಅಖಾಡಕ್ಕೆ ಮರಳುತ್ತಾರಾ..? ಹೀಗೊಂದು ಪ್ರಶ್ನೆ ಕಳೆದ ಕೆಲ ದಿನಗಳಿಂದ ರಮ್ಯಾ ಅಭಿಮಾನಿ ಬಳಗವನ್ನು ಕಾಡುತ್ತಿದೆ. ಈ ರೀತಿ ಅಭಿಮಾನಿಗಳಿಗೆ ಅನುಮಾನ ಕಾಡಲು ಕಾರಣ ರಮ್ಯಾ ಮಾಡಿರುವ ಟ್ವೀಟ್. ಕೆಲ ದಿನಗಳಿಂದ ರಾಜ್ಯದ ಸಂಸದರು ಹಾಗೂ ಶಾಸಕರ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ರಮ್ಯಾ, ಅಭಿಮಾನಿಗಳಲ್ಲಿ ಹೊಸ ಕುತೂಹಲ ಕೆರಳುವಂತೆ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಾ ರಾಜಕೀಯ ರೀ ಎಂಟ್ರಿ ಕುರಿತು ಚರ್ಚೆ ಆರಂಭವಾಗಿದೆ.

ಈ ಹಿಂದೆ ಮಂಡ್ಯ ಸಂಸದೆ ಆಗಿದ್ದ ರಮ್ಯಾ ಹಲವು ವರ್ಷಗಳ ರಾಜಕೀಯ ಅಖಾಡದಲ್ಲೇ ಇದ್ದರು. ಕೆಲ ದಿನಗಳ ಹಿಂದಷ್ಟೇ ಸ್ವಂತ ಪ್ರೊಡಕ್ಷನ್ ಹೌಸ್ ಅನೌನ್ಸ್ ಮಾಡುವ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಆದರೂ ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಹಾಕುತ್ತಿರುವ ಪೋಸ್ಟ್​ಗಳು ಮತ್ತೆ ರಮ್ಯಾ ರಾಜಕೀಯಕ್ಕೆ ಹೋಗುತ್ತಾರಾ ಎಂಬ ಅನುಮಾನ ಹುಟ್ಟುಹಾಕಿದೆ. ಆದರೆ ರಮ್ಯಾ ಹೀಗೆ ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್ ಹಾಕುತ್ತಿರುವ ಉದ್ದೇಶ ಬೇರೆಯೇ ಆಗಿದೆ.

ಇದನ್ನೂ ಓದಿ: ರಮ್ಯಾ ‘ಪ್ರೊಡಕ್ಷನ್‌ ಹೌಸ್‌’ ಲಾಂಚ್‌; ನಿನ್ನೆಯೇ ಸುದ್ದಿ ಪ್ರಕಟಿಸಿದ್ದ ‘ವಿಸ್ತಾರ ನ್ಯೂಸ್’!

ರಮ್ಯಾ ಕ್ಲಾಸ್..!
ಭೀಕರ ಮಳೆಯಿಂದ ರಾಜ್ಯ ರಾಜಧಾನಿ ಬೆಂಗಳೂರು ಸಂಕಷ್ಟಕ್ಕೆ ಸಿಲುಕಿದೆ. ಕೆಲವು ಪ್ರದೇಶಗಳು ಅಕ್ಷರಶಃ ಮುಳುಗಿ ಹೋಗಿವೆ. ಹೀಗಾಗಿ ಬೆಂಗಳೂರಿನ ನಿವಾಸಿಗಳು ಪರದಾಡುತ್ತಿದ್ದಾರೆ. ಇದೇ ಹೊತ್ತಲ್ಲಿ ಸೋಷಿಯಲ್ ಮೀಡಿಯಾ ಮೂಲಕ ರಮ್ಯಾ ಆಕ್ರೋಶ ಹೊರಹಾಕುತ್ತಿದ್ದಾರೆ. ರಾಜಕಾರಣಿಗಳಿಗೆ ರಮ್ಯಾ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ ಇನ್ನುಮುಂದೆ ನೋಡಿ ಮತ ಹಾಕಿ ಎಂಬ ಸಂದೇಶ ನೀಡಿದ್ದಾರೆ. ಇದೆಲ್ಲಾ ನೋಡಿದರೆ ರಮ್ಯಾ ಮತ್ತೆ ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಡ್ತಾರಾ? ಎಂಬ ಡೌಟ್ ಅಭಿಮಾನಿಗಳನ್ನ ಕಾಡುತ್ತಿದೆ.

ರಿಯಲ್ ಎಸ್ಟೇಟ್..!
ಬೆಂಗಳೂರಲ್ಲಿ ಭೀಕರ ಮಳೆಯಿಂದ ಎದುರಾಗಿರುವ ನೆರೆ ಸಮಸ್ಯೆಗೆ ಒತ್ತುವರಿ ಕೂಡ ಕಾರಣ. ಅದರಲ್ಲೂ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ದೊಡ್ಡದಾಗಿ ಬೆಳೆದಿದೆ. ಇದೇ ವಿಚಾರವನ್ನ ಪ್ರಸ್ತಾಪ ಮಾಡಿದ್ದ ನಟಿ ರಮ್ಯಾ, ರಾಜ್ಯದಲ್ಲಿ ಎಷ್ಟು ಎಂಎಲ್‌ಎ & ಎಂಪಿಗಳು ರಿಯಲ್‌ ಎಸ್ಟೇಟ್ ಬ್ಯುಸಿನೆಸ್​ ಮಾಡುತ್ತಿದ್ದಾರೆ ಅನ್ನೋದು ನಿಮಗೆ ಗೊತ್ತಿದೆಯೇ..? 28 ಎಂಎಲ್‌ಎಗಳ ಪೈಕಿ 26 ಶಾಸಕರು ರಿಯಲ್‌ ಎಸ್ಟೇಟ್​ನಲ್ಲಿ ತೊಡಗಿದ್ದಾರೆ ಎಂದು ಯಾರೋ ಹೇಳಿದ್ದರು. ಇದು ದಿಗ್ಭ್ರಮೆಗೊಳಿಸುತ್ತದೆ ಎಂದು ಟ್ವೀಟ್ ಮಾಡಿದ್ದರು ನಟಿ ರಮ್ಯಾ. ಜೊತೆಗೆ ಯೋಚನೆ ಮಾಡಿ ಮತ ಹಾಕಿ ಎಂಬ ಸಂದೇಶ ನೀಡಿದ್ದರು.

ಒಟ್ಟಾರೆ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಸಾಮಾನ್ಯರ ಜೀವನವನ್ನು ಸಂಕಷ್ಟಕ್ಕೆ ದೂಡಿದೆ. ಜೊತೆಗೆ ಶ್ರೀಮಂತರ ಬಂಗಲೆ, ವಿಲ್ಲಾಗೂ ಮಳೆ ನೀರು ನುಗ್ಗಿ ಸಾಕಷ್ಟು ಹಾನಿ ಮಾಡಿದೆ. ಇದೇ ಕಾರಣಕ್ಕೆ ಸೆಲೆಬ್ರಿಟಿಗಳು ಕೂಡ ರೊಚ್ಚಿಗೆದ್ದಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಈ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ. ಆದರೆ ರಮ್ಯಾ ಮಾಡುತ್ತಿರುವ ಪೋಸ್ಟ್​ ಹಿಂದೆ ರಾಜಕೀಯ ಎಂಟ್ರಿ ಸುಳಿವು ಇದೆಯಾ ಎಂಬ ಅನುಮಾನ ಅಭಿಮಾನಿಗಳನ್ನ ಕಾಡುತ್ತಿದೆ. ಇನ್ನೂ ನಟಿ ರಮ್ಯಾ ಈ ಚರ್ಚೆಯ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಇದನ್ನೂ ಓದಿ: Ramya Production House | ದೊಡ್ಡ ಗ್ಯಾಪ್‌‌ ಬಳಿಕ ‘ಚಂದನವನ’ಕ್ಕೆ ರಮ್ಯಾ ಗ್ರ್ಯಾಂಡ್‌ ಕಮ್​ ಬ್ಯಾಕ್​ !

Exit mobile version