Site icon Vistara News

ಸಿಎಂ ಬೊಮ್ಮಾಯಿ ಮಂಡಿ ನೋವನ್ನು ಅಣಕಿಸಿದರೇ ಕಾಂಗ್ರೆಸ್‌ ಉಸ್ತುವಾರಿ ಸುರ್ಜೆವಾಲ?

Cant stop Congress by killing one Siddaramaiah says Surjewala Karnataka Election 2023 updates

ಬೆಂಗಳೂರು: ರಾಜ್ಯ ಸರ್ಕಾರವನ್ನು ಟೀಕಿಸುವ ಭರದಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರ ಅನಾರೋಗ್ಯದ ಕುರಿತು ಕಮೆಂಟ್‌ ಮಾಡಿದ್ದಾರೆಯೇ ಎಂಬ ಪ್ರಶ್ನೆಗಳೆದ್ದಿವೆ.

ರಾಜ್ಯ ಸರ್ಕಾರದ ಸಚಿವ ಜೆ.ಸಿ. ಮಾಧುಸ್ವಾಮಿ ಇತ್ತೀಚೆಗೆ ಮಾತನಾಡಿರುವ ಆಡಿಯೊ ವೈರಲ್‌ ಆಗಿತ್ತು. ರಾಜ್ಯದಲ್ಲಿ ಸರ್ಕಾರ ನಡೆಯುತ್ತಿಲ್ಲ, ಸುಮ್ಮನೆ ಮ್ಯಾನೇಜ್‌ ಮಾಡುತ್ತಿದ್ದೇವೆ ಎಂದು ಮಾಧುಸ್ವಾಮಿ ಹೇಳಿದ್ದರು ಎಲ್ಲೆಡೆ ಹರಿದಾಡಿ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟುಮಾಡಿತ್ತು. ಈ ಕುರಿತು ಸುದ್ದಿವಾಹಿನಿಯೊಂದರ ಸುದ್ದಿಯನ್ನು ಸುರ್ಜೆವಾಲ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಇಂಗ್ಲಿಷ್‌ನಲ್ಲಿ ಕಮೆಂಟ್‌ ಮಾಡುತ್ತ, ʻA weak kneed CM Bommai & apology of BJP Govt in #karnataka stands exposed for what it is – a sinking ship. Kannadigas are waiting to throw out the BJP Govt on an sos basisʼ ಎಂದಿದ್ದಾರೆ.

weak kneed ಎಂದರೆ, ದುರ್ಬಲ ವ್ಯಕ್ತಿ, ಅಶಕ್ತ ವ್ಯಕ್ತಿ ಎಂಬ ಅರ್ಥವನ್ನು ನೀಡುತ್ತದಾದರೂ, ಅಕ್ಷರಶಃ ನೋಡಿದರೆ ದುರ್ಬಲ ಮಂಡಿಯನ್ನು ಹೊಂದಿರುವವರು ಎಂದಾಗುತ್ತದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು 2021ರಿಂದಲೂ ಮಂಡಿ ನೋವಿನಿಂದ ಬಳಲುತ್ತಿದ್ದಾರೆ.

ಈ ಸಮಸ್ಯೆಗೆ ವಿವಿಧೆಡೆ ಚಿಕಿತ್ಸೆ ಪಡೆದಿದ್ದಾರೆ. ಬೆಳಗಾವಿಯ ಅಧಿವೇಶನದ ಸಮಯದಲ್ಲಿ ನಾಟಿ ಚಿಕಿತ್ಸೆಯನ್ನೂ ಪಡೆದಿದ್ದರು. ಆದರೂ ಇಂದಿಗೂ ಸಂಪೂರ್ಣ ಗುಣಮುಖರಾಗಿಲ್ಲ. ಎಲ್ಲ ಕಡೆಯೂ ಕುಂಟುತ್ತ ನಡೆಯುವುದು ಎದ್ದು ಕಾಣುತ್ತದೆ.

ರಾಜಕೀಯ ಹೇಳಿಕೆ ನೀಡುವ ಭರದಲ್ಲಿ ರಣದೀಪ್‌ಸಿಂಗ್‌ ಸುರ್ಜೆವಾಲ ಅವರು ಸಿಎಂ ಬೊಮ್ಮಾಯಿ ಅವರ ಅನಾರೋಗ್ಯದ ಕುರಿತು ಗೇಲಿ ಮಾಡಿದ್ದಾರೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಇದನ್ನೂ ಓದಿ | ಚುನಾವಣೆಗೆ ಕಾಂಗ್ರೆಸ್‌ ರಣಕಹಳೆ: ಪ್ರಚಾರ ಸಮಿತಿಗೆ ಚಾಲನೆ, ಸರ್ಕಾರದ ವಿರುದ್ಧ ಜಂಟಿ ವಾಗ್ದಾಳಿ

Exit mobile version