Site icon Vistara News

Ranibennur Election Results: ರಾಣೆಬೆನ್ನೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಕಾಶ್‌ ಕೋಳಿವಾಡ್‌ಗೆ ವಿಜಯ

ranibennuru assembly winner congress prakash koliwad

ಹಾವೇರಿ: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಕಾಶ್‌ ಕೆ. ಕೋಳಿವಾಡ್‌ ಅವರು ಗೆಲುವು ಸಾಧಿಸಿದ್ದಾರೆ.

71,830 ಮತಗಳನ್ನು ಪಡೆದ ಕೋಳಿವಾಡ್‌, ಬಿಜೆಪಿಯ ಅಭ್ಯರ್ಥಿ ಅರುಣಕುಮಾರ್‌ ಪೂಜಾರ್‌ ಅವರನ್ನು (62,030 ಮತ) ಎರಡನೇ ಸ್ಥಾನಕ್ಕೆ ತಳ್ಳಿದ್ದಾರೆ. ಈ ಬಾರಿ ಇಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಮಂಜುನಾಥ್‌ ಗೌಡರ್, ಆಪ್‌ನಿಂದ ಹನುಮಂತಪ್ಪ ಕಬ್ಬಾರ ಕಣದಲ್ಲಿದ್ದರು.

2019ರಲ್ಲಿ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅರುಣ್ ಕುಮಾರ್ ಪೂಜಾರಿ 95,438 ಮತ ಪಡೆದು ಗೆಲುವು ಸಾಧಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಕೆ. ಬಿ ಕೋಳಿವಾಡ 23222 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. 1999ರಿಂದ ನಾಲ್ಕು ಚುನಾವನೆಗಳಲ್ಲಿ ಇಲ್ಲಿ ಸತತವಾಗಿ ಕೋಳಿವಾಡ ಗೆಲ್ಲುತ್ತಾ ಬಂದಿದ್ದರು. 2018ರ ಚುನಾವಣೆಯಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯ ಆರ್.ಶಂಕರ್‌ ಇವರಿಗೆ ಸೋಲುಣಿಸಿದ್ದರು.

ಇಲ್ಲಿ ಇರುವ ಒಟ್ಟು ಮತಗಳು 223,209. ಪುರುಷರ ಸಂಖ್ಯೆ 114,468 ಹಾಗೂ ಸ್ತ್ರೀಯರು 108,729.

ಇದನ್ನೂ ಓದಿ: Chikkaballapur Election Results : ಚಿಕ್ಕಬಳ್ಳಾಪುರದಲ್ಲಿ ಡಾ. ಕೆ ಸುಧಾಕರ್‌ರನ್ನು ಹೀನಾಯವಾಗಿ ಸೋಲಿಸಿದ ಪ್ರದೀಪ್‌ ಈಶ್ವರ್‌

Exit mobile version