Site icon Vistara News

Nirmala Tayi Gokhale: ರಾಷ್ಟ್ರ ಸೇವಿಕಾ ಸಮಿತಿಯ ನಿರ್ಮಲಾ ತಾಯಿ ಗೋಖಲೆ ಇನ್ನಿಲ್ಲ

Rashtra Sevika Samiti's Nirmala tayi Gokhale passes away

#image_title

ಧಾರವಾಡ: ರಾಷ್ಟ್ರ ಸೇವಿಕಾ ಸಮಿತಿಯ ಹಿರಿಯ ಕಾರ್ಯಕರ್ತೆ ನಿರ್ಮಲಾ ತಾಯಿ ಗೋಖಲೆ ಅವರು (Rashtra Sevika Samiti’s Nirmala tayi Gokhale passes away) ವಯೋಸಹಜ ಕಾಯಿಲೆಯಿಂದ ಗುರುವಾರ ನಿಧನರಾದರು.

ನಿರ್ಮಲಾ ತಾಯಿಜೀ ಅವರು ಮೂಲತಃ ರತ್ನಾಗಿರಿಯವರು. ರಾಷ್ಟ್ರ ಸೇವಿಕಾ ಸಮಿತಿಯ ಸ್ಥಾಪಕ ವಂ. ಮೌಶಿಜೀಯವರೊಂದಿಗೆ ಹತ್ತಿರದ ಒಡನಾಟದಿಂದ ಬಾಲ ಸೇವಿಕಾ ಸಮಿತಿ ಕಾರ್ಯ ಬೆಳೆಸುವ ಅವಕಾಶ ದೊರಕಿತ್ತು. ಪುಣೆಯ ಕಿಶನ್‌ ರಾವ್‌ ಗೋಖಲೆ ಅವರೊಂದಿಗೆ ವೈವಾಹಿಕ ಜೀವನ ಪ್ರಾರಂಭಿಸಿ, 1984ರಲ್ಲಿ ಕರ್ನಾಟಕಕ್ಕೆ ಆಗಮಿಸಿದರು. ಧಾರವಾಡದಲ್ಲಿ ನೆಲೆಸಿದ ನಿರ್ಮಲಾ ತಾಯಿಜೀ ಅವರು ಕರ್ನಾಟಕದಲ್ಲಿ ಸಮಿತಿ ಕಾರ್ಯಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಉತ್ತರ ಕರ್ನಾಟಕದಲ್ಲಿ ಸಮಿತಿ ಸ್ಥಾಪಿಸಿರುವ ಕಾರ್ಯದಲ್ಲಿ ಇವರ ಪಾತ್ರ ಹಿರಿದು.

ಗೃಹಸ್ಥ ಜೀವನದ ಜವಾಬ್ದಾರಿಯ ಜೊತೆಯಲ್ಲಿ ಸಮಿತಿ ಕಾರ್ಯ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕದ ಉದ್ದಗಲಕ್ಕೆ ಪ್ರವಾಸ ಮಾಡಿ ಅನೇಕ ಮಹಿಳೆಯರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಇವರ ಸಮಾಜ ಕಾರ್ಯದ ನಿಷ್ಠೆ ತಮ್ಮ ಕುಟುಂಬದಲ್ಲೂ ಪ್ರಭಾವ ಬೀರಿತ್ತು.

ಇದನ್ನೂ ಓದಿ | Sahitya Sammelana: ಮಾ.20 ರಂದು ಸಾಗರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ವಿ.ಗಣೇಶ್ ಅಧ್ಯಕ್ಷತೆ

ಗೋಖಲೆ ದಂಪತಿಗೆ ನಾಲ್ವರು ಮಕ್ಕಳು. ನಾಲ್ವರೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಿರ್ಮಲಾ ತಾಯಿಯವರ ಪುತ್ರ ದಿವಂಗತ ರಾಜೇಂದ್ರ ಗೋಖಲೆ ಅವರು ಅರುಣಾಚಲ ಪ್ರದೇಶದಲ್ಲಿ ವಿದ್ಯಾರ್ಥಿ ಪರಿಷತ್ ಪೂರ್ಣಕಾಲೀನ ಕಾರ್ಯಕರ್ತರಾಗಿದ್ದರು. ನಿರ್ಮಲಾ ತಾಯಿಯವರ ಮಗಳು ಅಲಕಾ ಇನಾಮದಾರ ಅವರು ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತೀಯ ಸಹ ಕಾರ್ಯವಾಹಿಕಾ ಆಗಿದ್ದಾರೆ.

ತಾಯಿಯ ಹಾಗೆ ಅಲಕಾ ಅವರು ಗೃಹಸ್ಥ ಜೀವನದ ಜತೆಯಲ್ಲಿ ಸಮಿತಿಯ ಕಾರ್ಯ ಭಾರತದಾದ್ಯಂತ ಹಾಗೂ ವಿಶ್ವ ವಿಭಾಗದ ಜವಾಬ್ದಾರಿಯಿಂದ ವಿದೇಶದಲ್ಲೂ ನಿರಂತರ ಪ್ರವಾಸದಲ್ಲಿರುತ್ತಾರೆ. ಇನ್ನಿಬ್ಬರು ಪುತ್ರರು ಮಿಲಿಂದ ಗೋಖಲೆ ಹಾಗೂ ಮುಕುಂದ ಗೋಖಲೆ ಇವರೂ ಸಮಾಜ ಕಾರ್ಯದಲ್ಲಿ ತೊಡಗಿದ್ದಾರೆ. ಒಂದು ಮಹಿಳೆ ತಾನು ತನು, ಮನ, ಧನದಿಂದ ಸಮಾಜ ಹಾಗೂ ರಾಷ್ಟ್ರ ಕಾರ್ಯಕ್ಕೆ ಮುಂದಾದಾಗ ತನ್ನ ಇಡೀ ಕುಟುಂಬಕ್ಕೆ ದೇಶ ಸೇವೆಗೆ ಸಿದ್ಧ ಪಡಿಸುತ್ತಾಳೆ. ತನ್ನ ಮಕ್ಕಳಿಗೆ ಸಂಸ್ಕಾರ ನೀಡುವುದರೊಂದಿಗೆ ಅನೇಕ ಕುಟುಂಬಗಳಿಗೆ ಸಂಸ್ಕಾರ ನೀಡಬಹುದೆನ್ನುವುದನ್ನು ನಿರ್ಮಲಾ ತಾಯಿಜೀ ನಿರೂಪಿಸಿದರು.

Exit mobile version