ಕನ್ನಡ ಸಾಹಿತ್ಯ ಸಮ್ಮೇಳನ
Sahitya Sammelana: ಮಾ.20 ರಂದು ಸಾಗರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ವಿ.ಗಣೇಶ್ ಅಧ್ಯಕ್ಷತೆ
Sahitya Sammelana: ಹಿರಿಯ ಸಾಹಿತಿ ವಿ.ಗಣೇಶ್ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯುವ ತಾಲೂಕು ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಾಸಕ ಹಾಲಪ್ಪ ಅವರು ಉದ್ಘಾಟಿಸಲಿದ್ದಾರೆ.
ಸಾಗರ: ಇಲ್ಲಿನ ಶಿವಪ್ಪ ನಾಯಕ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು (Sahitya Sammelana) ಹಿರಿಯ ಸಾಹಿತಿ ವಿ.ಗಣೇಶ್ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ಮಾ. 20ರಂದು ಬೆಳಗ್ಗೆ 9 ರಿಂದ ಆಯೋಜಿಸಲಾಗಿದೆ.
ಬೆಳಗ್ಗೆ 8.45ಕ್ಕೆ ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅವರು ರಾಷ್ಟ್ರ ಧ್ವಜಾರೋಹಣ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ನಾಗೇಶ್ ಬ್ಯಾಲಾಳ ನಾಡ ಧ್ವಜವನ್ನು ಹಾಗೂ ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ ನಾಡ ಧ್ಜಜಾರೋಹಣ ನೆರವೇರಿಸುವರು.
ಬೆಳಗ್ಗೆ 9ಕ್ಕೆ ಶಿವಪ್ಪ ನಾಯಕ ನಗರ ಆಶ್ರಮ ಶಾಲೆಯಿಂದ ಸಮ್ಮೇಳಾಧ್ಯಕ್ಷರ ಮೆರವಣಿಗೆಯನ್ನು ಕಲಾ ತಂಡಗಳೊಂದಿಗೆ ಆಯೋಜಿಸಿದ್ದು ಬಿಇಒ ಯಮನೂರಪ್ಪ, ನಗರಸಭೆ ಸದಸ್ಯರಾದ ಸವಿತಾವಾಸು, ಮಧುಮಾಲತಿ, ಉಮೇಶ್ ಎ, ಸಬೀನಾ ತನ್ವೀರ್, ಬಿ.ಎಚ್.ಲಿಂಗರಾಜ್, ಗಜೇಂದ್ರ, ಡಿ.ಕೆ.ಮೋಳೆ ಮೊದಲಾದವರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: Rishab Shetty: ವಿಶ್ವಸಂಸ್ಥೆಯಲ್ಲಿ ಕನ್ನಡ ಭಾಷಣ ಪೂರ್ತಿಯಾಗಿ ಮಾಡಿದ್ರಾ ರಿಷಬ್?ವಿಡಿಯೊದಲ್ಲಿ ಏನಿದೆ?
ಬೆಳಗ್ಗೆ 10ಕ್ಕೆ ಶಾಸಕ ಎಚ್. ಹರತಾಳು ಹಾಲಪ್ಪ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸಾಹಿತಿ ಡಾ.ನಾ.ಡಿಸೋಜ ದಿಕ್ಸೂಚಿ ಮಾತುಗಳನ್ನಾಡುವರು. ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಆಶಯ ಭಾಷಣ ಮಾಡಲಿದ್ದಾರೆ. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ, ಉಪಾಧ್ಯಕ್ಷ ವಿ.ಮಹೇಶ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮೋಹನ್ ಮೂರ್ತಿ, ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್, ನಗರಸಭೆ ಸದಸ್ಯ ಬಿ.ಎಚ್.ಲಿಂಗರಾಜ್, ನೌಕರರ ಸಂಘದ ಅಧ್ಯಕ್ಷ ಪರಮೇಶ್ವರಪ್ಪ ಜಿ, ಪ್ರಮುಖರಾದ ಬಿ.ಆರ್.ಜಯಂತ್, ಗಣೇಶ್ ಪ್ರಸಾದ್, ಸೈಯದ್ ಜಾಕೀರ್, ವಿಜಯ ಕುಮಾರ್ ವಿ.ಕೆ, ಮೊದಲಾದವರು ಉಪಸ್ಥಿತರಿರುವರು.
ಬೆಳಗ್ಗೆ 11.45 ಕ್ಕೆ ವರ್ತಮಾನದ ಸಾಹಿತ್ಯ ಮತ್ತು ಸಾಂಸ್ಕೃತಿಕ ತಲ್ಲಣಗಳು ಕುರಿತ ಗೋಷ್ಠಿಯ ಅಧ್ಯಕ್ಷತೆಯನ್ನು ಪತ್ರಕರ್ತ ಕೆ.ಎನ್.ವೆಂಕಟಗಿರಿ ವಹಿಸಲಿದ್ದು ಶಿವಮೊಗ್ಗ ಕಮಲಾ ನೆಹರೂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ಆರಡಿ ಮಲ್ಲಯ್ಯ ಕಟ್ಟೇರ ವಿಷಯ ಮಂಡಿಸಲಿದ್ದಾರೆ. ವೇದಿಕೆಯಲ್ಲಿ ಗಣಪತಿ ಮಂಡಗಳಲೆ, ಶಿವಾನಂದ ಕುಗ್ವೆ, ಪರಮೇಶ್ವರ ದೂಗೂರು, ಲಕ್ಷ್ಮಣ್ ಸಾಗರ್, ರವಿರಾಜ್ ಮಂಡಗಳಲೆ, ರಾಮಚಂದ್ರ ಸಾಗರ್, ಸಫ್ರಾಜ್ ಚಂದ್ರಗುತ್ತಿ, ಡಾ.ಕೆಳದಿ ವೆಂಕಟೇಶ್ ಜೋಯಿಸ್, ಸತೀಶ್ ಕೆ. ಉಪಸ್ಥಿತರಿರುವರು. ಮಧ್ಯಾಹ್ನ 12.45ರಿಂದ ನಡೆಯುವ ಎರಡನೇ ಗೋಷ್ಠಿ
ರಾಜಕೀಯ ಮತ್ತು ಮಹಿಳಾ ಪ್ರಾತಿನಿಧ್ಯ ಗೋಷ್ಠಿ ಅಧ್ಯಕ್ಷತೆಯನ್ನು ಹೆಸರಾಂತ ವೈದ್ಯೆ ಡಾ.ರಾಜನಂದಿನಿ ಕಾಗೋಡು ವಹಿಸಲಿದ್ದು ಸಾಹಿತಿ ಹಾಗೂ ಉಪನ್ಯಾಸಕಿ ಡಾ. ವಸುಮತಿ ಗೌಡ ವಿಷಯ ಮಂಡಿಸುವರು. ವೇದಿಕೆಯಲ್ಲಿ ಎನ್.ಲಲಿತಮ್ಮ, ಶರಾವತಿ ಸಿ.ರಾವ್, ರೋಹಿಣಿ ಶರ್ಮ, ಚೂಡಾಮಣಿ ರಾಮಚಂದ್ರ, ಸುಮಂಗಲ ರಾಮಕೃಷ್ಣ, ವೀಣಾ ನಾಯ್ಡು, ಕಸ್ತೂರಿ ಸಾಗರ್, ನಾದಿರ ಪರ್ವಿನ್ ಉಪಸ್ಥಿತರಿರುವರು.
ಮಧ್ಯಾಹ್ನ 2.15ಕ್ಕೆ ಸಮ್ಮೇಳನಾಧ್ಯಕ್ಷರ ಸಾಹಿತ್ಯಾವಲೋಕನ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಅಂಬ್ರಯ್ಯ ಮಠ ವಹಿಸಲಿದ್ದು, ಸಾಹಿತಿ ಡಾ.ಗುರುದತ್ತ ಶಿವಮೊಗ್ಗ ಇವರು ವಿಷಯ ಮಂಡಿಸಲಿದ್ದಾರೆ. ಗೋಷ್ಠಿಯಲ್ಲಿ ಕೃಷ್ಣಯ್ಯ, ತಿಮ್ಮಪ್ಪ ಕಲಸಿ, ಪ್ರೊ.ಮಹಾಬಲೇಶ್ವರ, ಶಕುಂತಲ ಹಿರೇಮಠ, ಈಳಿ ಶ್ರೀಧರ್, ಎಸ್.ಬಿ.ಮಹಾದೇವ್, ಬಿ.ಜಿ.ಮಂಜಪ್ಪ, ಮ.ಸ.ನಂಜುಂಡಸ್ವಾಮಿ, ದಿನೇಶ್ ಶಿರವಾಳ, ರಮೇಶ್ ಕೆಳದಿ, ಸತ್ಯನಾರಾಯಣ ಖಂಡಿಕಾ, ಬಿ.ಡಿ.ರವಿಕುಮಾರ್ ಉಪಸ್ಥಿತರಿರುವರು.
ಮಧ್ಯಾಹ್ನ 3ಕ್ಕೆ ನಡೆಯುವ ಕಾವ್ಯ ಕಲರವ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ.ಜಯಪ್ರಕಾಶ್ ಮಾವಿನಕುಳಿ ವಹಿಸಲಿದ್ದು, ಗೋಷ್ಠಿಯಲ್ಲಿ ಕುಸುಮ ಸುಬ್ಬಣ್ಣ, ಶಂಕರ್ ಅಳ್ವಿಕೋಡು, ತಸ್ರಿಫ್ ಇಬ್ರಾಹಿಂ ಉಪಸ್ಥಿತರಿರುವರು. ಕವಿಗೋಷ್ಠಿಯಲ್ಲಿ ಭಾಗೀರಥಿ, ಚಂದ್ರಶೇಖರ್ ಸಿರಿವಂತೆ, ಯೋಗೀಶ್ ಭಟ್, ಚಂದ್ರಮೌಳಿ, ವಿಷ್ಣುಮೂರ್ತಿ, ಆನಂದಪುರ, ಪಾಲಾಕ್ಷಪ್ಪ ಎಸ್.ಎನ್, ಗವಿಯಪ್ಪ ಎಲ್.ಟಿ., ಜಗನ್ನಾಥ ಕೆ, ಗಜಾನನ, ಡಾ.ಅನ್ನಪೂರ್ಣ, ಅರ್ಚನ ಪ್ರಸನ್ನ, ಅವಿನಾಶ್ ಜಿ, ಗಾರ್ಗಿ ಬಂದಗದ್ದೆ, ಭದ್ರಪ್ಪ ಗೌಡ, ವೆಂಕಟೇಶ್ ಸಂಪ, ಕವನ ವಾಚಿಸಲಿದ್ದಾರೆ, ಎಚ್.ಜಿ.ಸುಬ್ರಹ್ಮಣ್ಯ ಭಟ್, ಕೋದಂಡ ಸಾಗರ್, ದೀಪಕ್ ಸಾಗರ್, ಸಹನಾ ಜಿ ಭಟ್ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: World Sleep Day : ಉದ್ಯೋಗಿಗಳಿಗೆ ಸಾವಕಾಶ ನಿದ್ದೆ ಮಾಡಲು ರಜೆ ಘೋಷಿಸಿದ ಬೆಂಗಳೂರಿನ ವೇಕ್‌ಫಿಫ್ಟ್
ಸಂಜೆ 4ಕ್ಕೆ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಿದ್ದು ಶಾಸಕರಾದ ಎಚ್. ಹರತಾಳು ಹಾಲಪ್ಪ ಅಧ್ಯಕ್ಷತೆ ವಹಿಸಲಿದ್ದು ಸಂಸದರಾದ ಬಿ.ವೈ.ರಾಘವೇಂದ್ರ, ಮಾಜಿ ವಿಧಾನ ಸಭಾಧ್ಯಕ್ಷರಾದ ಕಾಗೋಡು ತಿಮ್ಮಪ್ಪ ಸಾಧಕರನ್ನು ಸನ್ಮಾನಿಸುವರು, ಈ ಸಂದರ್ಭದಲ್ಲಿ ಸಹಾಯಕ ಪೊಲೀಸ್ ಅಧಿಕಾರಿ ರೋಹನ್ ಜಗದೀಶ್, ಪ್ರಮುಖರಾದ ಅಶ್ವಿನಿ ಕುಮಾರ್, ಟಿ.ಡಿ.ಮೇಘರಾಜ್, ಐ.ಎನ್.ಸುರೇಶ್ ಬಾಬು, ಶ್ರೀನಿವಾಸ್ ಆರ್, ಟಿ.ವಿ.ಪಾಂಡುರಂಗ ಉಪಸ್ಥಿತರಿರುವರು, ಡಾ.ಎಚ್.ಎಸ್.ಮೋಹನ್-ಸಾಹಿತ್ಯ, ಮುನಾಫ್ ಶ್ರೀಧರನಗರ-ಕಾಯಕ, ಗಣಪತಿಯಪ್ಪ ಜಂಬೂರು ಮನೆ-ಕೃಷಿ, ಅಬಸೆ ದಿನೇಶ್ ಕುಮಾರ್ ಜೋಷಿ-ಸಮಾಜಸೇವೆ, ಎಂ.ಎಸ್.ಗೌಡರು —ಕಾನೂನು, ಫ್ರಾನ್ಸಿಸ್ ಪಿಯೂಸ್ ಫರ್ನಾಂಡಿಸ್-ಸಾಂಸ್ಕೃತಿಕ, ಡಿ.ಎಂ.ಗಜಾನನ-ಕಲೆ, ಮಂಜಣ್ಣ-ಶ್ರಮಜೀವಿ, ಸಾವಿತ್ರಿ-ಮಹಿಳಾ ಕ್ಷೇತ್ರ, ರೋಟರಿ ರಕ್ತನಿಧಿ-ಸಂಘ ಸಂಸ್ಥೆ, ಸರ್ಕಾರಿ ಉರ್ದು ಪ್ರೌಢಶಾಲೆ-ಶಿಕ್ಷಣ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಗುವುದು.
ಇದನ್ನೂ ಓದಿ: Shakib Al Hasan: ಜುವೆಲ್ಲರಿ ಶಾಪ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಲ್ಲೆಗೊಳಗಾದ ಬಾಂಗ್ಲಾ ಆಟಗಾರ; ವಿಡಿಯೊ ವೈರಲ್
ಸಂಜೆ 5.30ಕ್ಕೆ ಕ.ಸಾ.ಪ ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಸಾಹಿತಿ ಹಾಗೂ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಶುಭಾ ಮರವಂತೆ ಸಮಾರೋಪ ನುಡಿಗಳನ್ನಾಡುವರು. ವೇದಿಕೆಯಲ್ಲಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಅರವಿಂದ ರಾಯ್ಕರ್, ಹೈಕೋರ್ಟ್ ಹಿರಿಯ ನ್ಯಾಯವಾದಿ ಕೆ. ದಿವಾಕರ್, ಪೌರಾಯುಕ್ತ ಸಿ.ಚಂದ್ರಪ್ಪ, ಹೆಚ್.ಕೆ.ನಾಗಪ್ಪ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು, ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ಎಸ್.ವಿ.ಹಿತಕರ್ ಜೈನ್, ಆಟೋ ಚಾಲಕರ ಸಂಘದ ಅಧ್ಯಕ್ಷ ಜನಾರ್ಧನ ಪೂಜಾರಿ ಮೊದಲಾದವರು ಉಪಸ್ಥಿತರಿರುವರು.
ಸಮ್ಮೇಳನಾಧ್ಯಕ್ಷರ ಪರಿಚಯ
ಸಾಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಸಾಹಿತ್ಯ ಭವನದಲ್ಲಿ ಮಾ. 20 ರಂದು ಆಯೋಜಸಿರುವ ತಾಲೂಕು ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ ವಿ.ಗಣೇಶ್ ಅವರು ಸಾಹಿತ್ಯ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ: Viral Video : ರಾಷ್ಟ್ರೀಯ ಹೆದ್ದಾರಿಯಲ್ಲಿ ಬರ್ತ್‌ಡೇ ಆಚರಿಸಿಕೊಂಡ ಯೂಟ್ಯೂಬರ್; ಪೊಲೀಸರಿಂದ ಭರ್ಜರಿ ಗಿಫ್ಟ್!
ಸಾಗರದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸುಮಾರು 38 ವರ್ಷಗಳ ಕಾಲ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಾ ಸಹಸ್ರಾರು ವಿದ್ಯಾರ್ಥಿಗಳಿಗೆ ಗಣಿತ ಮತ್ತು ಇಂಗ್ಲಿಷ್ ಎರಡನ್ನೂ ಬೋಧಿಸುತ್ತಾ ಮೆಚ್ಚಿನ ಶಿಕ್ಷಕರಾಗಿ ಅವರ ಬದುಕನ್ನು ಬೆಳಗುವುದರಲ್ಲಿ ಸಹಕಾರಿಯಾಗಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಸಾಗರದ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಿ ರಾಜ್ಯಕ್ಕೆ ಮಾದರಿ ಕಾಲೇಜನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ನಿವೃತ್ತಿ ನಂತರ ನಿಂತ ನೀರಾಗದೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲೂ ಪಾಂಡಿತ್ಯವನ್ನು ಹೊಂದಿರುವ ಗಣೇಶ್ ಅವರು ಎರಡೂ ಭಾಷೆಗಳಲ್ಲಿ ಕಥೆ, ಕಾದಂಬರಿ, ಕವನ, ಅನುವಾದ ಮುಂತಾದ ಎಲ್ಲ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ಮಕ್ಕಳ ಸಾಹಿತ್ಯ ಕುರಿತು ಹೆಚ್ಚಿನ ಕೃತಿ ರಚನೆ ಮಾಡಿದ್ದಾರೆ.
ಇದನ್ನೂ ಓದಿ: Puneeth Rajkumar: ರಾಘಣ್ಣನ ಕುಟುಂಬದಿಂದ ಅನ್ನದಾನ, ಸಸಿಗಳ ವಿತರಣೆ
ಸಾರ್ವಜನಿಕ ಕ್ಷೇತ್ರದಲ್ಲಿಯೂ ಸಾಕಷ್ಟು ಸೇವೆ ಸಲ್ಲಿಸುತ್ತಾ ಬಂದಿರುವ ವಿ.ಗಣೇಶ್, ಸುಗಮ ಸಂಗೀತ ಪರಿಷತ್, ಸಿರಿಗನ್ನಡ ವೇದಿಕೆ, ಸ್ಮಾರ್ತ ಬ್ರಾಹ್ಮಣ ಒಕ್ಕೂಟ, ಎಸ್.ವಿ.ಪಿ. ಕಾಲೋನಿ ರಾಮ ಮಂದಿರ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗೃಹ ನಿರ್ಮಾಣ ಸಂಘ ಸೇರಿದಂತೆ ವಿವಿಧ ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಸಾಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ನಿರ್ದೇಶಕರಾಗಿ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ.
ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನದ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರಮಟ್ಟದ ಸಹೃದಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಸುಮ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಾಗರದ ಶ್ರೀ ಶೃಂಗೇರಿ ಶಂಕರ ಮಠ, ನಿವೃತ್ತ ನೌಕರರ ಸಂಘ, ರಾಷ್ಟ್ರೋತ್ತಾನ ಪರಿಷತ್ತು, ಹೊಸಪೇಟೆಯ ಶಂಕರ ಸಾಹಿತ್ಯ ಪರಿಷತ್ತು,, ಜನ್ ಜೀವನ್ ಜಾಗೃತ್ ವೇದಿಕೆ ಮುಂತಾದ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿರುತ್ತಾರೆ. ಇತ್ತೀಚೆಗೆ ಶಿಕಾರಿಪುರದ ಹಳೆಯ ವಿದ್ಯಾರ್ಥಿಗಳ ಸಂಘವು ಶ್ರೀಯುತರನ್ನು ಗೌರವಿಸಿ ಪ್ರಸನ್ನವದನ ಪ್ರಥಿತರು ಎಂಬ ಅಭಿನಂದನಾ ಗ್ರಂಥವನ್ನು ಅರ್ಪಿಸಿರುತ್ತಾರೆ.
ಪತ್ನಿ ನಿರ್ಮಲಾ ಅವರೊಂದಿಗೆ ಸಾಗರದಲ್ಲಿ ವಾಸವಾಗಿರುವ ಗಣೇಶ್ ಅವರಿಗೆ ಸಾಫ್ಟ್ ವೇರ್ ಎಂಜಿನಿಯುರುಗಳಾಗಿ ಕೆಲಸ ಮಾಡುತ್ತಿರುವ ಆಕಾಶ್ ಮತ್ತು ಅವಿನಾಶ್ ಎಂಬ ಇಬ್ಬರು ಮಕ್ಕಳಿದ್ದಾರೆ. ಆಕಾಶ್ ಕೆನಡಾದಲ್ಲಿದ್ದರೆ, ಅವಿನಾಶ್ ಪತ್ನಿಯೊಂದಿಗೆ ಬೆಂಗಳೂರಿನಲ್ಲಿದ್ದಾರೆ. ಗಣೇಶ್ ಅವರ ಇಬ್ಬರು ಮಕ್ಕಳೂ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವುದು ವಿಶೇಷವಾಗಿದೆ.
ಕನ್ನಡ ಸಾಹಿತ್ಯ ಸಮ್ಮೇಳನ
ಕಸಾಪ ಸದಸ್ಯತ್ವದಿಂದ ಡಿಡಿ ಸಹಾಯಕ ನಿರ್ದೇಶಕಿ ನಿರ್ಮಲಾ ಸಿ. ಯಲಿಗಾರ್ ಅಮಾನತು, ಪ್ರಶಸ್ತಿ ವಾಪಸ್
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡೀಸೆಲ್ ವ್ಯವಸ್ಥೆ ಮಾಡಿಕೊಡದ್ದನ್ನು ಆಕ್ಷೇಪಿಸುವ ವೇಳೆ ಕನ್ನಡ ಸಾಹಿತ್ಯ ಪರಿಷತ್ ವಿರುದ್ಧ ಅಸಂಬದ್ಧವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ನಿರ್ಮಲಾ ಸಿ ಯಲಿಗಾರ್ ಅವರನ್ನು ಸಂಸ್ಥೆಯ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ.
ಬೆಂಗಳೂರು: ದೂರದರ್ಶನ ಚಂದನದ ಸಹಾಯಕ ನಿರ್ದೇಶಕಿಯಾಗಿರುವ ನಿರ್ಮಲಾ ಸಿ. ಯಲಿಗಾರ್ʼ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ ಮತ್ತು ಅವರಿಗೆ ಪ್ರಕಟಿಸಲಾಗಿದ್ದ ಶ್ರೀಮತಿ ಪಂಕಜಶ್ರೀ ಸಾಹಿತ್ಯ ದತ್ತಿ ಪ್ರಶಸ್ತಿಯ ಆಯ್ಕೆಯನ್ನು ಹಿಂಪಡೆಯಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಅಸಂಬದ್ಧವಾಗಿ ನಡೆದುಕೊಂಡಿದ್ದಲ್ಲದೆ, ಕನ್ನಡ ಸಾಹಿತ್ಯ ಪರಿಷತ್ ವಿರುದ್ಧ ಮೌನಾಚರಣೆಯ ಪ್ರತಿಭಟನೆ ದಾಖಲಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಾಹಿತ್ಯ ಪರಿಷತ್‌ನ ಮಾಧ್ಯಮ ಸಲಹೆಗಾರರಾದ ಶ್ರೀನಾಥ್ ಜೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರ್ಮಲಾ ಸಿ. ಯಲಿಗಾರ್ ಮೇಲಿನ ಆರೋಪವೇನು?
1. ಈ ವರ್ಷದ ಜನವರಿ 6,7 ಮತ್ತು 8ರಂದು ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಕ್ರಮಗಳ ನೇರ ಪ್ರಸಾರ ಹಾಗೂ ವರದಿಗಾಗಿ ಬಂದಿದ್ದ ನಿರ್ಮಲಾ ಸಿ. ಯಲಿಗಾರ್ ಅವರು ತಮ್ಮ 31 ಸಿಬ್ಬಂದಿಗಳಿಗೆ ವಸತಿ ಮತ್ತು ಕಾರ್ಯಕ್ರಮಗಳ ಪ್ರಸಾರಕ್ಕೆ 65/35 ಕೆವಿಎ ಡಿಸೇಲ್ ಜನರೇಟರ್ ಅನ್ನು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನೀಡಲಿಲ್ಲ, ಎಂಬ ಕಾರಣಕ್ಕಾಗಿ ಜನವರಿ 6ರಂದು ಮಾಧ್ಯಮಗಳ ಎದುರು ಹಾಗೂ ಜನಸಾಮಾನ್ಯರ ಎದುರು ಅಸಂಬದ್ಧವಾಗಿ ಮಾತನಾಡಿದ್ದರು.
2. ನಿರ್ಮಲಾ ಸಿ. ಯಲಿಗಾರ್ ಅವರು ಜನವರಿ 8ರಂದು ದೂರದರ್ಶನ ಕೇಂದ್ರದಲ್ಲಿ ಸಾಹಿತ್ಯ ಪರಿಷತ್ ವಿರುದ್ಧ ಒಂದು ನಿಮಿಷದ ಮೌನಾಚರಣೆ ಮಾಡಿದ್ದಾರೆ. ಮತ್ತು ಇದನ್ನು ಸಾಮಾಜಿಕ ಜಾಲ ತಾಣದಲ್ಲೂ ಪ್ರಕಟಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಆಕ್ಷೇಪವೇನು?
1. ಕನ್ನಡ ಸಾಹಿತ್ಯ ಪರಿಷತ್ ಬಗ್ಗೆ ಸಾರ್ವಜನಿಕವಾಗಿ ಆಕ್ಷೇಪಾರ್ಹ ರೀತಿಯಲ್ಲಿ ಮಾತನಾಡಿದ್ದು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಗೆ ಮಾಡಿದ ಅಪಮಾನ.
2. ಈ ರೀತಿ ಮೌನಾಚರಣೆ ಮಾಡುವುದು ಯಾರಾದರು ಮೃತ ಹೊಂದಿದ ಸಂದರ್ಭದಲ್ಲಿ. ಕನ್ನಡ ಸಾಹಿತ್ಯ ಪರಿಷತ್ತು ಮೃತ ಹೊಂದುವ ಸಂಸ್ಥೆಯಲ್ಲ. ಸೂರ್ಯ ಚಂದ್ರರಿರುವವರೆಗೂ ಹಾಗೂ ಕನ್ನಡಿಗರು ಈ ಭೂಮಿಯಲ್ಲಿ ಇರುವವರೆಗೂ ಪರಿಷತ್ತು ಜೀವಂತವಾಗಿರುವ ಸಂಸ್ಥೆ.
3. ನಿರ್ಮಲಾ ಯಲಿಗಾರ್ ಅವರಿಗೆ ಫೆಬ್ರವರಿ 7ರಂದು ನೀಡಿದ್ದ ಕಾನೂನು ತಿಳುವಳಿಕೆ ಪತ್ರಕ್ಕೆ 15 ದಿನದಲ್ಲು ವಿವರಣೆ ಕೋರಿದ್ದರೂ ಅದನ್ನು ನೀಡಿಲ್ಲ. ಹೀಗಾಗಿ ಅವರನ್ನು ಸದಸ್ಯತ್ವದಿಂದ ವಜಾ ಮಾಡಲಾಗಿದೆ.
ಪಂಕಶ್ರೀ ಸಾಹಿತ್ಯ ಪ್ರಶಸ್ತಿ ವಾಪಸ್
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 6ರಂದು ಪರಿಷತ್ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಮಲಾ ಸಿ. ಯಲಿಗಾರ್ ಅವರಿಗೆ ನೀಡಿದ ʻಶ್ರೀಮತಿ ಪಂಕಜಶ್ರೀ ಸಾಹಿತ್ಯ ಪ್ರಶಸ್ತಿʼ ಆಯ್ಕೆಯನ್ನು ಹಿಂಪಡೆಯಲು ನಿರ್ಧರಿಸಲಾಯಿತು.
ಇದನ್ನೂ ಓದಿ : BKS Varma Death | ಬಿ.ಕೆ.ಎಸ್. ವರ್ಮ ಅವರಿಗೆ ಕೊನೆಗೂ ಗೌರವ ನೀಡಿತ್ತು ಕನ್ನಡ ಸಾಹಿತ್ಯ ಪರಿಷತ್ತು
ಕನ್ನಡ ಸಾಹಿತ್ಯ ಸಮ್ಮೇಳನ
Sahitya Sammelana: ಜಾತಿ, ಧರ್ಮ ಮೀರಿರುವುದೇ ಸಾಹಿತ್ಯ: ಎಸ್.ಜಿ. ಸಿದ್ದರಾಮಯ್ಯ
Sahitya Sammelana: ಶಿವಮೊಗ್ಗ ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿದೆ. ಸಾಹಿತ್ಯವು ಸೋತವರಿಗೆ ಸಾಂತ್ವನ ನೀಡುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಶಿವಮೊಗ್ಗ: ಸಾಹಿತ್ಯವೆಂಬುದು (Sahitya Sammelana) ಜಾತಿ ಧರ್ಮಗಳನ್ನು ಮೀರಿದೆ. ನೋವುಂಡವರ ನೆಲೆಗೆ ಹತ್ತಿರವಾಗಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಶಿವಮೊಗ್ಗ ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಹಿತ್ಯಕ್ಕೆ ಭಾಷೆ ಎಂಬುದು ನೆಪ. ಅದರೊಳಗಿರುವ ವಿಶ್ವಕ್ಕೆ ಯಾವುದೇ ಅಡತಡೆಗಳಿಲ್ಲ. ಅದಕ್ಕಾಗಿಯೇ ವಾಲ್ಮೀಕಿ, ಟಾಲ್‌ಸ್ಟಾಯ್ ತಮ್ಮ ಸಾಹಿತ್ಯದ ಮೂಲಕ ಹತ್ತಿರವಾಗುತ್ತಾರೆ. ಸಾಹಿತ್ಯವು ಸೋತವರಿಗೆ ಸಾಂತ್ವನ ನೀಡುತ್ತದೆ. ಸಂಸ್ಕೃತಿ, ಸಾಹಿತ್ಯ, ಕ್ರೀಡೆ ಎಲ್ಲರನ್ನೂ ಒಳಗೊಳ್ಳುವ ಶಕ್ತಿಯನ್ನು ಹೊಂದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕೆಲವರಿಗೆ ಸೀಮಿತವಾಗಿದ್ದ ಸಾಹಿತ್ಯವನ್ನು, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯ ಮೂಲಕ ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವ ಸಾಕ್ಷಿ ಪ್ರಜ್ಞೆ ಮೂಡಿಸಿದರು ಎಂದರು.
ಇದನ್ನೂ ಓದಿ: Crocodile attack: ರಾಯಚೂರಿನಲ್ಲಿ ಬಾಲಕನ ಮೇಲೆ ಮೊಸಳೆ ದಾಳಿ; ಸ್ಥಳೀಯರ ಸಮಯಪ್ರಜ್ಞೆಯಿಂದ ಬಚಾವ್
ದುಸ್ತರ ಕಾಲಘಟ್ಟದಲ್ಲಿ ಅದನ್ನು ಎದುರಿಸುವ ಮನಸ್ಸುಗಳನ್ನು ಬೆಂಬಲಿಸದಿದ್ದಲ್ಲಿ ಅದು ನಾವು ಮಾಡಿದ ದ್ರೋಹದಂತಾಗುತ್ತದೆ. ಜಾಗತಿಕ ನೆಲೆಯೊಳಗೆ ಎದುರಿಸುತ್ತಿರುವ ಕನ್ನಡದ ಸಮಸ್ಯೆಗಳ ಬಗ್ಗೆ ಮುಖಾಮುಖಿ ಚರ್ಚೆಗಳ ಅವಶ್ಯಕತೆಯಿದೆ. ಗಂಭೀರವಾದ ವಿಚಾರಗಳ ಚರ್ಚೆ ಸಾಹಿತ್ಯ ಸಮ್ಮೇಳನದ ಘನತೆ ಹೆಚ್ಚಿಸಿದೆ. ಅಧ್ಯಾಪಕರು ಶಿಕ್ಷಣದ ಬಗ್ಗೆ ಚರ್ಚಿಸುವ ಗೋಷ್ಠಿಗಳಲ್ಲಿ ಹೆಚ್ಚು ಭಾಗವಹಿಸಬೇಕಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಿಭಾಯಿಸಬೇಕಾದ ಕೌಶಲ್ಯತೆ ರೂಢಿಸಿಕೊಳ್ಳಬೇಕಿದೆ. ಸಾಹಿತ್ಯ ಸಮ್ಮೇಳನದ ಚರ್ಚಿತ ವಿಚಾರಗಳನ್ನು ಕನ್ನಡದ ಮನಸ್ಸುಗಳು ಆತ್ಮಾವಲೋಕನ ನಡೆಸಬೇಕಿದೆ ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷ ಲಕ್ಷ್ಮಣ್ ಕೊಡಸೆ ಮಾತನಾಡಿ, ಸಾಹಿತ್ಯ ಸಮ್ಮೇಳನ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಶಿವಮೊಗ್ಗ ಜಿಲ್ಲೆಯ ಸಾರಸ್ವತ ಲೋಕದಿಂದ ಅನೇಕ ಗೌರವ ಪಡೆಯುವಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಖ್ಯ ಕಾರಣ ಎಂದು ಹೇಳಿದರು.
ಇದನ್ನೂ ಓದಿ: Karnataka Election: ವಿಧಾನಸಭೆಗೆ ಸ್ಪರ್ಧಿಸುವೆನೆಂದು ಪತ್ರ ಬರೆದ ಎಂಎಲ್‌ಸಿ ಆಯನೂರು ಮಂಜುನಾಥ್; ಈಶ್ವರಪ್ಪಗೆ ಅಡ್ಡಗಾಲು?
ಮುಖ್ಯ ಅತಿಥಿ ಅರಣ್ಯ ಇಲಾಖೆಯ ನೌಕರರ ಮಹಾಮಂಡಲದ ರಾಜ್ಯಾಧ್ಯಕ್ಷ ರಘುರಾಮ ದೇವಾಡಿಗ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಅವರು ಸಮ್ಮೇಳನಾಧ್ಯಕ್ಷ ಲಕ್ಷ್ಮಣ್ ಕೊಡಸೆ ಅವರನ್ನು ಸನ್ಮಾನಿಸಿದರು. ಶಿವಮೊಗ್ಗ ತಾಲೂಕು ಕಸಾಪ ಅಧ್ಯಕ್ಷೆ ಮಹಾದೇವಿ, ಶಿಕಾರಿಪುರ ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ರಘು, ಹೊಸನಗರ ತಾಲೂಕು ಕಸಾಪ ಅಧ್ಯಕ್ಷ ತಾ.ಮ.ನರಸಿಂಹ, ಭದ್ರಾವತಿ ತಾಲೂಕು ಕಸಾಪ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
ಉತ್ತರ ಕನ್ನಡ
Siddapura News: ಇಂದು ಪಟ್ಟಣದಲ್ಲೂ ಪುಸ್ತಕದ ಅಂಗಡಿಗಳಿಲ್ಲ; ಸರಕಾರಕ್ಕೆ ಸಾಹಿತ್ಯದ ಬಗ್ಗೆ ಆಸಕ್ತಿ ಇಲ್ಲ: ಸಾಹಿತಿ ನಾಗೇಶ್ ಹೆಗಡೆ
Siddapura News: ಇಂದಿನ ಬದುಕಿಗೆ ಎಂತಹ ಸಾಹಿತ್ಯಗಳು ಬೇಕು ಎನ್ನುವುದನ್ನು ಚರ್ಚಿಸುವ ಅಗತ್ಯ ಇದೆ ಎಂದು ಸಾಹಿತಿ ನಾಗೇಶ್ ಹೆಗಡೆ ಬಕ್ಕೆಮನೆ ಹೇಳಿದರು.
ಸಿದ್ದಾಪುರ: ಹೊರಗಿನ ಜ್ಞಾನ ನಮ್ಮಲ್ಲಿ ಪ್ರಜ್ವಲಿಸಬೇಕು. ನಮ್ಮಲ್ಲಿರುವ ಪ್ರತಿಭೆಗಳನ್ನು ಹೊರ ಜಗತ್ತಿಗೆ ತೋರಿಸಬೇಕು. ಇಲ್ಲಿನ ಸುಸ್ಥಿರ ಬದುಕಿನ ಜೀವನವನ್ನು ಪ್ರಪಂಚಕ್ಕೆ ಸಾಹಿತ್ಯದ ಮೂಲಕ ಸಾರುವ ಕೆಲಸ ಆಗಬೇಕು ಎಂದು ಸಾಹಿತಿ ನಾಗೇಶ್ ಹೆಗಡೆ ಬಕ್ಕೆಮನೆ ಹೇಳಿದರು.
ಪಟ್ಟಣದ ಶಂಕರ ಮಠದಲ್ಲಿ ಭಾನುವಾರ (ಜ.೨೯) ನಡೆದ 6ನೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಬದುಕಿಗೆ ಎಂತಹ ಸಾಹಿತ್ಯಗಳು ಬೇಕು ಎನ್ನುವುದನ್ನು ಚರ್ಚಿಸುವ ಅಗತ್ಯ ಇದೆ. ನಮ್ಮಲ್ಲಿ ನಿಸರ್ಗ ಸಂಪತ್ತು ಮತ್ತು ಅಕ್ಷರ ಸಂಪತ್ತು ಅಗಾಧವಾಗಿದೆ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ನಿಸರ್ಗ ಸಂರಕ್ಷಣೆಯ ಹೋರಾಟದವರೆಗೆ ನಮ್ಮವರು ಅನನ್ಯವಾದ ಕೊಡುಗೆ ನೀಡಿದ್ದಾರೆ. ಪ್ರತಿ ಮನೆಯ ಕಪಾಟುಗಳಲ್ಲಿಯೂ ಪುಸ್ತಕಗಳು ಇರಬೇಕು. ಆದರೆ ಇಂದು ಪಟ್ಟಣದಲ್ಲೂ ಪುಸ್ತಕದ ಅಂಗಡಿಗಳೇ ಇಲ್ಲವಾಗಿದೆ. ಸರಕಾರಕ್ಕೆ ಸಾಹಿತ್ಯದ ಬಗ್ಗೆ ಆಸಕ್ತಿ ಇಲ್ಲವಾಗಿದೆ ಎಂದರು.
ಇದನ್ನೂ ಓದಿ | RBI Repo Rate : ಆರ್‌ಬಿಐ ರೆಪೊ ದರ 0.25% ಏರಿಕೆ ಸಾಧ್ಯತೆ: ಸಮೀಕ್ಷೆ
ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ʻʻನಮ್ಮ ಭಾಷೆಗೆ ಸಂಸ್ಕಾರ ಕೊಡುವಂತಹ ಸಂಸ್ಕಾರವನ್ನು ಪರಿಚಯಿಸುವಂತಹ ಅಗಾಧವಾದ ಶಕ್ತಿ ಇದೆ. ಹಾಗಾಗಿ ಭಾಷೆಯನ್ನು ನಾವು ರಕ್ಷಿಸಿಕೊಳ್ಳಬೇಕು ಅದು ಇಂದಿನ ದಿನಗಳಲ್ಲಿ ಅತ್ಯಂತ ಅಗತ್ಯವಾಗಿದೆ. ಆದರೆ ಸವಾಲುಗಳು ಕೂಡ ಅಷ್ಟೇ ಇವೆ. ಇಂದಿನ ಆಧುನಿಕ ತಂತ್ರಜ್ಞಾನಗಳಾದ ಮೊಬೈಲ್ ಹಾಗೂ ಇತರೆ ಕಾರಣದಿಂದಾಗಿ ಭಾಷೆಗಳಿಗೆ ಅನೇಕ ಸವಾಲುಗಳು ಹುಟ್ಟಿಕೊಳ್ಳುತ್ತಿವೆ. ಈಗ ಹಿಂದಿನ ಭಾಷೆಗಳನ್ನು ಅಭ್ಯಾಸ ಮಾಡುವಂಥದ್ದು ಒಂದು ಪರಂಪರೆ. ಆದರೆ ಈ ಭಾಷೆ ಮುಂದೇನಾಗಬಹುದು ಎಂಬುದನ್ನು ಯೋಚಿಸುವುದು ಅಗತ್ಯವಾಗಿದೆ. ಮೊಬೈಲ್‌ಗಳಲ್ಲಿ ಇಂದಿನ ಯುವ ಪೀಳಿಗೆಯವರು ಕಳಿಸುತ್ತಿರುವ ಮೆಸೇಜ್‌ಗಳನ್ನು ನೋಡಿದರೆ ಈ ಭಾಷೆ ಏನಾಗುತ್ತಿದೆ ಎಂಬ ಆತಂಕವಾಗುತ್ತದೆ. ಹಾಗಾಗಿ ಈ ಕುರಿತು ಅಧ್ಯಯನ ಮಾಡಬೇಕಾದ ಅವಶ್ಯಕತೆ ಇದೆʼʼ ಎಂದರು.
ಇದನ್ನೂ ಓದಿ | Bharat Jodo Yatra: ಸಹೋದರಿ ಪ್ರಿಯಾಂಕಾ, ಕಾರ್ಯಕರ್ತರ ಜತೆ ರಾಹುಲ್ ಗಾಂಧಿ ಹಿಮ ಎರಚಾಟ! Video Viral
ಕಸಾಪ ತಾಲೂಕು ಅಧ್ಯಕ್ಷ ಗೋಪಾಲ್ ಬಾಶಿ ಪ್ರಾಸ್ತಾವಿಕವಾಗಿ ಮಾತನಾಡಿದರು . ಕಸಾಪ ಜಿಲ್ಲಾ ಅಧ್ಯಕ್ಷ ಬಿಎನ್ ವಾಸರೆ ಆಶಯ ನುಡಿಯಾಡಿದರು. ನಾಗರಾಜ್ ಮಾಳ್ಕೋಡ್ ದ್ವಾರಗಳನ್ನು ಪರಿಚಯಿಸಿದರು. ಸಾಹಿತಿ ತಮ್ಮಣ್ಣ ಬೀಗಾರ ಹೊಸ ಪುಸ್ತಕಗಳ ಬಿಡುಗಡೆ, ಆರ್ ಎಂ ಹೆಗಡೆ ಬಾಳೆಸರ ಮೆರವಣಿಗೆಗೆ ಚಾಲನೆ ನೀಡಿದರು. ಡಾ ಕೆ ಶ್ರೀಧರ್ ವೈದ್ಯ ದ್ವಾರಗಳನ್ನು ಉದ್ಘಾಟಿಸಿದರು. ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಿದರು. ಸುಜಾತಾ ದಂಠಕಲ್ ಸಂದೇಶ ವಾಚಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಪ.ಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ವಿನಯ ಹೊನ್ನೆಗುಂಡಿ, ಕೆ ಜಿ ನಾಗರಾಜ, ಆರ್ ಆರ್ ನಾಯ್ಕ, ಸಿ ಎಸ್ ಗೌಡರ್, ಸತೀಶ್ ಹೆಗಡೆ, ಶಶಿಭೂಷಣ ಹೆಗಡೆ, ಜಿಲ್ಲಾ ಕಸಾಪದ ಕಾರ್ಯದರ್ಶಿ ಪಿ ಆರ್ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ಇಒ ಪ್ರಶಾಂತ ರಾವ್.
ಕುಮಾರಿ ನಿಶಾ ಮಂಜುನಾಥ್ ನಾಯ್ಕ್ ಯಕ್ಷ ನೃತ್ಯ ಮಾಡಿ ಸಭೆಯನ್ನು ಸ್ವಾಗತಿಸಿದರು.
ಶಿಕ್ಷಕರ ತಂಡದವರು ನಾಡಗೀತೆ ಹಾಡಿದರು. ಪ್ರಶಾಂತಿ ಪ್ರೌಢಶಾಲೆ ವಿದ್ಯಾರ್ಥಿಗಳು ರೈತ ಗೀತೆ ಹಾಡಿದರು.
ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ತಹಶೀಲ್ದಾರ್ ಸಂತೋಷ್ ಭಂಡಾರಿ ಸ್ವಾಗತಿಸಿದರು.
ರತ್ನಾಕರ್ ಜಿ ನಾಯ್ಕ್, ಕುಮಾರಿ ನೇಹಾ, ಕುಮಾರಿ ಸಂಜನಾ ನಿರೂಪಿಸಿದರು. ಪಿ ಬಿ ಹೊಸೂರ್ ವಂದಿಸಿದರು.
ಇದನ್ನೂ ಓದಿ | ಗ್ರಾಮೀಣ ಶಾಸಕಿ ಸಲುವಾಗಿ ರಾಜ್ಯವನ್ನು ಹಾಳು ಮಾಡಿದ್ದು ಡಿ.ಕೆ. ಶಿವಕುಮಾರ್ : ಸಿಡಿ ಪ್ರಕರಣ ಸಿಬಿಐಗೆ ನೀಡಲು ರಮೇಶ್ ಜಾರಕಿಹೊಳಿ ಆಗ್ರಹ
ಕನ್ನಡ ಸಾಹಿತ್ಯ ಸಮ್ಮೇಳನ
Virat Hindu Samavesha | ದೇಶ, ಹಿಂದು ಧರ್ಮ ಉಳಿಯಬೇಕೆಂದರೆ ಬಿಜೆಪಿ ಬೇಕು: ಪ್ರಮೋದ್ ಮುತಾಲಿಕ್
Virat Hindu Samavesha | ಕರ್ನಾಟಕದಲ್ಲಿ ಬೇರೆ ಬೇರೆ ಗೊಂದಲಗಳು ಇವೆ. ಆದರೆ, ಗೋಹತ್ಯೆ ಸಂಪೂರ್ಣ ನಿಷೇಧವಾಗಲು, ರಾಮ, ಕೃಷ್ಣ ಮಂದಿರ ನಿರ್ಮಾಣವಾಗಲು ನರೇಂದ್ರ ಮೋದಿ ಬೇಕು, ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಬೆಳಗಾವಿ: ದೇಶ, ಹಿಂದು ಧರ್ಮ ಉಳಿಯಬೇಕೆಂದರೆ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಒಂದು ಪಕ್ಷಕ್ಕಾಗಿ ಅಲ್ಲ, ರಾಮ ಮಂದಿರ, ಶ್ರೀಕೃಷ್ಣ ಮಂದಿರ ಪೂರ್ಣವಾಗಲು ಹಾಗೂ ಹಿಂದು ಧರ್ಮಕ್ಕೋಸ್ಕರ ಬಿಜೆಪಿ ಬೇಕು ಎಂದು (Virat Hindu Samavesha) ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದ ಧರ್ಮವೀರ ಸಂಭಾಜಿ ಮೈದಾನದಲ್ಲಿ ಶ್ರೀರಾಮ ಸೇನೆ ಮತ್ತು ಹಿಂದು ರಾಷ್ಟ್ರ ಸೇನಾ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ವಿರಾಟ್ ಹಿಂದು ಸಮಾವೇಶದಲ್ಲಿ ಮಾತನಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದು ಹೆಣ್ಣುಮಕ್ಕಳನ್ನು ಹರಾಜು ಹಾಕುತ್ತಾರೆ. ಮತಾಂತರ ನಿಷೇಧ ಕಾಯ್ದೆ ರದ್ದು ಮಾಡುತ್ತಾರೆ. ಹಿಂದು ವಿರೋಧಿ ವಿಚಾರಧಾರೆ ನೆಹರು ಅವರಿಂದ ಪ್ರಾರಂಭವಾಗಿ, ರಾಹುಲ್ ಗಾಂಧಿವರೆಗೆ ಬಂದಿದೆ. ಹೀಗಾಗಿ ನರೇಂದ್ರ ಮೋದಿಯನ್ನು ನಾವು ಬೆಂಬಲಿಸಬೇಕಾಗಿದೆ. ಕರ್ನಾಟಕದಲ್ಲಿ ಬೇರೆ ಬೇರೆ ಗೊಂದಲಗಳು ಇವೆ. ಆದರೆ, ಗೋಹತ್ಯೆ ಸಂಪೂರ್ಣ ನಿಷೇಧವಾಗಲು, ರಾಮ, ಕೃಷ್ಣ ಮಂದಿರ ನಿರ್ಮಾಣವಾಗಲು ಮೋದಿ ಬೇಕು, ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಈ ದೇಶ ಹಾಳು ಮಾಡಿ ಭಯೋತ್ಪಾದನೆ, ಭ್ರಷ್ಟಾಚಾರಕ್ಕೆ ಸಹಕರಿಸಿದ್ದು ಕಾಂಗ್ರೆಸ್. ಮುಸ್ಲಿಮರಿಗೋಸ್ಕರ ಜೊಲ್ಲು ಸುರಿಸುವವರು ಕಾಂಗ್ರೆಸ್‌ನಲ್ಲಿದ್ದಾರೆ. ಬಾಬ್ರಿ ಮಸೀದಿ ಮಾದರಿಯಲ್ಲಿ ಕಾಂಗ್ರೆಸ್ ಅನ್ನು ಸಮಾಧಿ ಮಾಡಬೇಕಿದೆ. ಅದಕ್ಕೆ ಹಿಂದು ಸಮಾಜ ಒಗ್ಗಟ್ಟಾಗಬೇಕಿದೆ. ಗೋಹತ್ಯೆ ನಿಷೇಧ ಮಾಡಿದ್ದು ರಾಜ್ಯ ಬಿಜೆಪಿ. ಮತಾಂತರ ನಿಷೇಧ ಕಾಯ್ದೆ ತಂದಿದ್ದು ಬಿಜೆಪಿ ಎಂದ ಅವರು, ಕರ್ನಾಟಕ ಬಿಜೆಪಿಯವರು ಸ್ವಲ್ಪ ಗೊಂದಲ ಮಾಡುತ್ತಿದ್ದಾರೆ. ಎಲ್ಲೋ ದಾರಿ ತಪ್ಪಿದವರನ್ನು ನಾವು ಸರಿ ಮಾಡೋಣ ಎಂದರು.
ಆರ್‌ಎಸ್ಎಸ್ ವಿಚಾರಧಾರೆ ಇವತ್ತು ನಮ್ಮನ್ನು ಇಲ್ಲಿವರೆಗೆ ತಂದಿದೆ. ಆದರೆ, ನಮ್ಮ ಶ್ರೇಷ್ಠ ಸಂಸ್ಕೃತಿ, ಧರ್ಮ, ಸಂಪ್ರದಾಯ ನಷ್ಟ ಮಾಡಲು ಮೂರು ದುಷ್ಟಶಕ್ತಿಗಳು ಯತ್ನಿಸುತ್ತಿವೆ. ಒಂದು ಇಸ್ಲಾಂ, ಎರಡನೇಯದು ಕ್ರಿಶ್ಚಿಯನ್ನರು, ಮೂರನೇಯದು ಕಮ್ಯುನಿಸ್ಟರು. ಹಿಂದುಗಳನ್ನು ವಿರೋಧ ಮಾಡುವ ನಾಸ್ತಿಕರು, ಬುದ್ಧಿಜೀವಿಗಳು ದೇಶದ ಸಾಕಷ್ಟು ಭೂಭಾಗ ನುಂಗಿ ನೀರು ಕುಡಿದಿದ್ದಾರೆ. ಇವರಿಂದ ದೇಶ ಉಳಿಸಬೇಕಾಗಿದೆ. ಇಲ್ಲಿ ಯಾವುದೇ ಜಾತಿ, ಮತ, ಪಕ್ಷ ಇಲ್ಲ. ನಾವೆಲ್ಲ ಒಂದಾಗಿ ಹಿಂದು ರಾಷ್ಟ್ರ ನಿರ್ಮಾಣ ಮಾಡಬೇಕಿದೆ, ಅದಕ್ಕಾಗಿಯೇ ಈ ವಿರಾಟ್ ಹಿಂದು ಸಮಾವೇಶ ಎಂದು ಹೇಳಿದರು.
ನಾ ಖಾವೂಂಗಾ ನಾ ಖಾನೇ ದೂಂಗಾ ಎನ್ನುವಂತೆ 9 ವರ್ಷದಲ್ಲಿ ಪ್ರಧಾನಿ ಮೇಲೆ ಒಂದೇ ಒಂದು ಅಪವಾದ ಇಲ್ಲ. 2014ರ ಕಾಂಗ್ರೆಸ್ ಆಡಳಿತದ ನಂತರ ದೇಶದಲ್ಲಿ ವಿಚಾರಧಾರೆ ಬದಲಾವಣೆ ಆಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ ಸೈನಿಕರ ಮೇಲೆ ಕಲ್ಲು ಎಸೆಯುತ್ತಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಏನೂ ಮಾಡಿರಲಿಲ್ಲ. ಆದರೆ ಮೋದಿ ಸರ್ಕಾರ, ಭಯೋತ್ಪಾದನೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ ಎಂದು ಹಾಡಿ ಹೊಗಳಿದರು.
ಕ್ರಿಶ್ಚಿಯನ್ನರಿಂದ ಹಿಂದುಗಳ ಮತಾಂತರ
ಕ್ರಿಶ್ಚಿಯನ್ನರು ಹಿಂದುಗಳನ್ನು ಮತಾಂತರ ಮಾಡುತ್ತಿದ್ದಾರೆ. ದಲಿತ, ಬ್ರಾಹ್ಮಣ, ಲಿಂಗಾಯತ, ಕುರುಬರನ್ನು ಮತಾಂತರ ಮಾಡುತ್ತಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಒಂದೂವರೆ ಲಕ್ಷ ಜನ ಕುರುಬ ಜನಾಂಗ ಮತಾಂತರ ಆಗಿದ್ದಾರೆ. ಸಿದ್ದರಾಮಯ್ಯನವರೇ, ನೀವು ಕುರುಬ ಜನಾಂಗದಿಂದಲೇ ಆಶ್ರಯ ಪಡೆದು ಓಡಾಡುತ್ತಿದ್ದೀರಿ, ನಾಳೆ ಕುರುಬ ಜನಾಂಗವೇ ಇರಲ್ಲ. ಈ ಬಗ್ಗೆ ವಿಚಾರ ಮಾಡಬೇಕು ಎಂದು ಹೇಳಿದ ಅವರು, ದಾವಣಗೆರೆ ಜಿಲ್ಲೆಯಲ್ಲಿ ಒಂದು ಲಕ್ಷ ಲಿಂಗಾಯತರು ಮತಾಂತರವಾಗಿದ್ದಾರೆ. ಬೈಲಹೊಂಗಲದಲ್ಲಿ ವೀರಶೈವ ಲಿಂಗಾಯತ ಚರ್ಚ್ ಇದೆ, ಬೋರ್ಡ್ ಇದೆ ಎಂದು ಹೇಳಿದರು.
ಮಸೀದಿ ನಿರ್ಮಾಣಕ್ಕೆ ವಿರೋಧ
ಬೆಳಗಾವಿಯ ಸಾರಥಿ ನಗರದಲ್ಲಿ ಮಸೀದಿ ನಿರ್ಮಾಣದ ಬಗ್ಗೆ ಪ್ರತಿಕ್ರಿಯಿಸಿ, ಸಾರಥಿ ನಗರದಲ್ಲಿ ಮನೆಯಲ್ಲಿ ಅನಧಿಕೃತವಾಗಿ ಮಸೀದಿ ಮಾಡಿದ್ದಾರೆ. ಆದರೆ, ಪಾಲಿಕೆ ಕಮಿಷನರ್ ಕಾಂಗ್ರೆಸ್ ಬಾಲ ಬಡಿಯುತ್ತಿದ್ದಾರೆ. ಒಂದು ವಾರದಲ್ಲಿ ಮಸೀದಿ ನೆಲಸಮ ಮಾಡದಿದ್ದರೆ ನಾವೇ ಕೆಡವುತ್ತೇವೆ. ಕೆಡವುದಿದ್ದರೆ ಕೆಡವು, ಇಲ್ಲವಾದರೆ ದೀರ್ಘ ರಜೆ ತೆಗೆದುಕೊಂಡು ಹೋಗು ಎಂದ ಅವರು, ಎಂಎಲ್‌ಎಗಳೇ ನಿಮಗೆ ಸಾಧ್ಯವಿಲ್ಲವೆಂದರೆ ಹೇಳಿ ನಾನು ಬರುತ್ತೇನೆ ಎಂದು ಹೇಳಿದರು.
ಮುಸ್ಲಿಮರಿಗೆ ಸಂವಿಧಾನ ಇಲ್ಲ
ದೆಹಲಿಯಲ್ಲಿ ಶ್ರದ್ಧಾ ಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಪ್ರೀತಿ ಮಾಡಿದ ಹುಡುಗಿಯನ್ನು ಕತ್ತರಿಸಿದ ಪಾಪಿಯನ್ನು ಅಲ್ಲಾಹು ಕೂಡ ಕ್ಷಮಿಸಲ್ಲ. ಆ ಪಾಪಿಗೆ ಜಾಮೀನು ಕೊಟ್ಟರೆ ನಾಳೆ ಜಡ್ಜ್ ಮಗಳನ್ನೂ ಕತ್ತರಿಸುತ್ತಾರೆ. ನಿಮಗೆ ಹಿಜಾಬ್ ಮುಖ್ಯವೋ ಶಿಕ್ಷಣ ಮುಖ್ಯವೋ ಎಂದರೆ ಹಿಜಾಬ್ ಎನ್ನುತ್ತಾರೆ. ಇವತ್ತು ಹಿಜಾಬ್ ಅಂತಾರೆ, ನಾಳೆ ಬುರ್ಖಾ ಅಂತಾರೆ, ನಾಡಿದ್ದು ಮಸೀದಿ ಬೇಕು ಅಂತಾರೆ. ಮುಸ್ಲಿಮರಿಗೆ ಸಂವಿಧಾನ ಇಲ್ಲ, ಇಸ್ಲಾಂ ಒಂದೇ ಇರುವುದು ಎಂದು ಕಿಡಿ ಕಾರಿದರು.
ಹಿಂದು ಸಂಘಟನೆಗಳನ್ನು ಬಲಗೊಳಿಸಿ
ಇಂದು ನಾವು ಜಾಗೃತರಾಗಬೇಕಿದೆ. ಅದು ಆರ್‌ಎಸ್ಎಸ್, ಬಜರಂಗದಳ, ಶ್ರೀರಾಮಸೇನೆ ಇರಬಹುದು. ಯಾವುದೇ ಹಿಂದು ಸಂಘಟನೆ ಇದ್ದರೂ ತನು ಮನ ಧನದಿಂದ ಬಲಗೊಳಿಸಬೇಕು. ದೇವಸ್ಥಾನ, ಮಠಾಧಿಪತಿಗಳಿಗೆ ದುಡ್ಡು ಹಾಕೋದು ನಿಲ್ಲಿಸಿ ಹಿಂದುಪರ ಕಾರ್ಯಕರ್ತರಿಗೆ ಸಹಾಯ ಮಾಡಬೇಕು. ದೇಶಿ ವಸ್ತು ಬಹಿಷ್ಕರಿಸಿ ಸ್ವದೇಶಿ ವಸ್ತು ಖರೀದಿಸಿ ಎಂದು ಕರೆ ನೀಡಿದರು.
ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ, ಸಂಗೊಳ್ಳಿ ರಾಯಣ್ಣ ಕೀ ಜೈ ಎನ್ನಬೇಕು, ಶಸ್ತ್ರಪೂಜೆ ಆಗಬೇಕು ಮನೆಯಲ್ಲಿ ಶಸ್ತ್ರ ಇಡಬೇಕು. ದೇಶದ ಉಳಿವಿಗಾಗಿ, ನಮ್ಮ ಹೆಣ್ಣು ಮಕ್ಕಳು, ತಂದೆ-ತಾಯಿ ಉಳಿಯಲು ಶಸ್ತ್ರ ಪೂಜೆ ಆಗಬೇಕು. ಆಯುಧ ಪೂಜೆ ಎಂದರೆ ವಾಹನಗಳ ಪೂಜೆ ಅಲ್ಲ. ತಲವಾರು, ಮಚ್ಚು, ಚಾಕು, ಕುಡಗೋಲನ್ನು ಇಟ್ಟು ಪೂಜೆ ಮಾಡಿ ಎಂದರು.
ಮುಸ್ಲಿಮರ ಜತೆ ವ್ಯಾಪಾರ ಬೇಡ
ಮುಸ್ಲಿಮರ ಜತೆ ವ್ಯಾಪಾರ ಮಾಡಿದರೆ ಗೋಹತ್ಯೆ, ಲವ್ ಜಿಹಾದ್‌ಗೆ ಸಪೋರ್ಟ್ ಮಾಡಿದ ಹಾಗೆ ಎಂದ ಅವರು, ಲವ್ ಜಿಹಾದ್, ಹಲಾಲ್, ಹಿಜಾಬ್ ಮೂಲಕ ಸಂವಿಧಾನ ಧಿಕ್ಕರಿಸುವರ ಜತೆ ವ್ಯಾಪಾರ ಬೇಡ. ಪೊಲೀಸ್ ಠಾಣೆ ಸುಟ್ಟು ಹಾಕಿದವರು, ಸೈನಿಕರ ಮೇಲೆ ಕಲ್ಲೆಸೆದವರ ಜತೆ ವ್ಯಾಪಾರ ನಿಲ್ಲಿಸಬೇಕು ಎಂದು ಹೇಳಿದರು.
ಹಿಂದು ರಾಷ್ಟ್ರಸೇನಾ ಸಂಸ್ಥಾಪಕ ಧನಂಜಭಾಯ್ ದೇಸಾಯಿ, ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಸೇರಿ ನೂರಾರು ಹಿಂದು ಕಾರ್ಯಕರ್ತರು ಭಾಗಿಯಾಗಿದ್ದರು.
ಇದನ್ನೂ ಓದಿ | Basavaraj Bommai | ಇನ್ನು ಮುಂದೆ ವೋಟ್ ಬ್ಯಾಂಕ್ ರಾಜಕಾರಣ ನಡೆಯೋದಿಲ್ಲ: ಸಿಎಂ ಬೊಮ್ಮಾಯಿ
-
ಕರ್ನಾಟಕ13 hours ago
Karnataka Election: ಮೇ 10ರಂದು ಕರ್ನಾಟಕ ಚುನಾವಣೆ; ಮೇ 13ಕ್ಕೆ ಫಲಿತಾಂಶ ಎಂದು ಘೋಷಿಸಿದ ಚುನಾವಣಾ ಆಯೋಗ
-
ಕರ್ನಾಟಕ14 hours ago
Karnataka Election 2023 LIVE: ಕರ್ನಾಟಕದಲ್ಲಿ ಮೇ 10ಕ್ಕೆ ಮತದಾನ, 13ಕ್ಕೆ ರಿಸಲ್ಟ್, ಒಂದೇ ಹಂತದ ಎಲೆಕ್ಷನ್
-
ಕರ್ನಾಟಕ17 hours ago
Karnataka Election: ಕರ್ನಾಟಕ ಚುನಾವಣೆ ದಿನಾಂಕ ಇಂದು ಘೋಷಣೆ, ಇಂದಿನಿಂದಲೇ ನೀತಿ ಸಂಹಿತೆ ಜಾರಿ
-
ಕರ್ನಾಟಕ12 hours ago
Karnataka Election: ನೀತಿ ಸಂಹಿತೆಗೆ ಮೊದಲೇ ತುಂಬಿತು ಅಕ್ರಮದ ಪಾತ್ರೆ: 2018ರ ಹಣದ ಹೊಳೆಯನ್ನು ಈಗಲೇ ಮೀರಿಸಿದ ಕರ್ನಾಟಕ !
-
ಪ್ರಮುಖ ಸುದ್ದಿ8 hours ago
UPI transactions : ಯುಪಿಐ ಬಳಕೆ ಗ್ರಾಹಕರಿಗೆ ಸಂಪೂರ್ಣ ಉಚಿತ ಎಂದ ಎನ್ಪಿಸಿಐ, ಹಾಗಾದರೆ 1.1% ಶುಲ್ಕ ಯಾರಿಗೆ?
-
ಗ್ಯಾಜೆಟ್ಸ್9 hours ago
Google: ಗೂಗಲ್ಗೆ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
-
ಕರ್ನಾಟಕ11 hours ago
Karnataka Elections 2023 : ವಲಸಿಗ ಸಚಿವರ ಮೇಲೆ ಬೊಮ್ಮಾಯಿ ನಿಗಾ; ಹೆಬ್ಬಾರ್, ಮುನಿರತ್ನ ಕರೆಸಿಕೊಂಡು ಚರ್ಚೆ
-
ಕರ್ನಾಟಕ15 hours ago
Karnataka Elections 2023 : 8 ಸಚಿವರ ಸಹಿತ 35 ಶಾಸಕರಿಗೆ ಸೋಲಿನ ಭೀತಿ, ಈ ಬಾರಿ ಬಿಜೆಪಿಯಲ್ಲಿ 50 ಹೊಸ ಮುಖ?