Site icon Vistara News

ಎಡಿಟರ್ಸ್ ಗಿಲ್ಡ್ ಅಧ್ಯಕ್ಷರಾಗಿ ರವಿ ಹೆಗಡೆ, ಪ್ರಧಾನ ಕಾರ್ಯದರ್ಶಿಯಾಗಿ ಹರಿಪ್ರಕಾಶ್ ಕೋಣೆಮನೆ

editors guild
ರವಿ ಹೆಗಡೆ

ಬೆಂಗಳೂರು: ಎಡಿಟರ್ಸ್ ಗಿಲ್ಡ್ ಆಫ್ ಬೆಂಗಳೂರು ನೂತನ ಅಧ್ಯಕ್ಷರಾಗಿ ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ಎಡಿಟರ್ ಇನ್ ಚೀಫ್ ರವಿ ಹೆಗಡೆ ಅವರು ಆಯ್ಕೆಯಾಗಿದ್ದಾರೆ. ವಿಸ್ತಾರ ನ್ಯೂಸ್ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರು ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ.

ಕಾರ್ಯದರ್ಶಿಯಾಗಿ ಪ್ರಜಾವಾಣಿ ಪತ್ರಿಕೆಯ ಸಂಪಾದಕರಾದ ರವೀಂದ್ರ ಐನಕೈ, ಖಜಾಂಚಿಯಾಗಿ ವಿಜಯವಾಣಿ ಪತ್ರಿಕೆಯ ಸಂಪಾದಕರಾದ ಕೆ.ಎನ್ ಚನ್ನೇಗೌಡ ಆಯ್ಕೆಯಾಗಿದ್ದಾರೆ.

ಹರಿಪ್ರಕಾಶ್‌ ಕೋಣೆಮನೆ

ಗಿಲ್ಡ್‌ನ ಹಾಲಿ ಅಧ್ಯಕ್ಷ ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಅಧ್ಯಕ್ಷತೆಯಲ್ಲಿ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾದ ಹುಣಸವಾಡಿ ರಾಜನ್, ಹೊಸ ದಿಗಂತ ಪತ್ರಿಕೆಯ ಸಂಪಾದಕರಾದ ವಿನಾಯಕ ಭಟ್‌ ಮೂರೂರು ಮತ್ತು ಉದಯವಾಣಿ ಪತ್ರಿಕೆ ಸಂಪಾದಕರಾದ ಬಿ.ಕೆ ಗಣೇಶ್ ಹಾಜರಿದ್ದರು.

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ವಿಸ್ತಾರ ಮೀಡಿಯಾ ಪ್ರೈ. ಲಿ. ಕಚೇರಿಯಲ್ಲಿ ಎಡಿಟರ್ಸ್ ಗಿಲ್ಡ್ ಪದಾಧಿಕಾರಿಗಳ ಸಭೆ ನಡೆಯಿತು. ಮಾಧ್ಯಮದಲ್ಲಿ ಗುಣಾತ್ಮಕ ಸುಧಾರಣೆಗೆ ನಿಗದಿತ ಕಾರ್ಯಸೂಚಿ ರಚಿಸಿ ಕಾರ್ಯಗತಗೊಳಿಸಲು ಚರ್ಚಿಸಿ ತೀರ್ಮಾನಿಸಲಾಯಿತು.

Exit mobile version