ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗದವರು, ಪ್ರಸಕ್ತ ಸಾಲಿನ ಮೊದಲ ಹಾಗೂ ಎರಡನೇ ಪರೀಕ್ಷೆಯಲ್ಲಿ (SSLC Exam 3) ಅನುತ್ತೀರ್ಣರಾದವರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (KSEEB) ಮೂರನೇ ಅವಕಾಶ ನೀಡಿದ್ದು, ಎಸ್‌ಎಸ್‌ಎಲ್‌ಸಿ ಮೂರನೇ ಪರೀಕ್ಷೆಯ ನೋಂದಣಿಗೆ (SSLC Exam 3 Registration) ಅವಕಾಶ ನೀಡಿದೆ. ಅದರಂತೆ, ಅಭ್ಯರ್ಥಿಗಳು 2024ರ ಜುಲೈ 17ರೊಳಗಾಗಿ ಮೂರನೇ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಆಗಸ್ಟ್ 2ರಿಂದ 9ರವರೆಗೆ ಎಸ್‌ಎಸ್‌ಎಲ್‌ಸಿ ಮೂರನೇ ಪರೀಕ್ಷೆಯು ನಡೆಯಲಿದೆ. ಹಾಗಾಗಿ, ಜುಲೈ 10ರಿಂದಲೇ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಜುಲೈ 17ರವರೆಗೆ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬಹುದಾಗಿದೆ. 2022-23ನೇ ಸಾಲಿನಲ್ಲಿಯೂ ಅನುತ್ತೀರ್ಣರಾದ, 2023-24ನೇ ಸಾಲಿನ ಮೊದಲ ಹಾಗೂ ದ್ವಿತೀಯ ಪರೀಕ್ಷೆಗೆ ಗೈರಾದವರು, ತೇರ್ಗಡೆ ಹೊಂದಲು ಸಾಧ್ಯವಾಗದವರು ಕೂಡ ಮೂರನೇ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇನ್ನು, ಕಳೆದ ಪರೀಕ್ಷೆಗಳಲ್ಲಿ ಪಡೆದ ಅಂಕಗಳಿಂದ ಸಮಾಧಾನಗೊಳ್ಳದವರು, ಇನ್ನೂ ಹೆಚ್ಚಿನ ಅಂಕ ಪಡೆಯಬೇಕು ಎನ್ನುವವರು ಕೂಡ ಮೂರನೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ನೋಂದಣಿ ಮಾಡಿಕೊಳ್ಳುವುದು ಹೇಗೆ?
ಪರೀಕ್ಷೆ ಬರೆಯಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯರು https://kseab.karnataka.gov.in ಪರೀಕ್ಷೆ-3ಕ್ಕೆ ನೋಂದಣಿ ಮಾಡಬೇಕು. ಶಾಲಾ ಲಾಗಿನ್ ನಲ್ಲಿ Registration for 2024 Exam-3ನ್ನು ಕ್ಲಿಕ್ ಮಾಡಿದಾಗ ENTER REGISTER NUMBER ಎನ್ನುವ ಆಯ್ಕೆ ದೊರಕುತ್ತದೆ. ಈ ಆಯ್ಕೆಯಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಯನ್ನು ನಮೂದು ಮಾಡಲು ಅವಕಾಶ ನೀಡಲಾಗಿದೆ. ಪರೀಕ್ಷೆಗೆ ನೋಂದಾಯಿಸಿಕೊಳ್ಳುವ ವಿದ್ಯಾರ್ಥಿಯ ನೋಂದಣೆ ಸಂಖ್ಯೆಯನ್ನು ನಮೂದು ಮಾಡಿ Submit ಕೊಟ್ಟಾಗ ಆ ವಿದ್ಯಾರ್ಥಿಯ ವಿವರಗಳು, ವಿದ್ಯಾರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಮಾಧ್ಯಮ, ದೈಹಿಕ ಸ್ಥಿತಿ, ಜನ್ಮ ದಿನಾಂಕ, ಪರೀಕ್ಷೆ ತೆಗೆದುಕೊಳ್ಳುತ್ತಿರುವ ವಿಷಯಗಳು ತೆರೆದುಕೊಳ್ಳುತ್ತವೆ. ಇವುಗಳಲ್ಲಿ ಯಾವುದೇ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ.
ಶುಲ್ಕದ ವಿವರ ಹೀಗಿದೆ
2021-2022 ಮತ್ತು 2022-23 ಸಾಲಿನಲ್ಲಿ ಪರೀಕ್ಷೆ ಬರೆದು ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಹಾಗೂ ಮಾರ್ಚ್/ಏಪ್ರಿಲ್ 2024ರ ಎಸ್.ಎಸ್.ಎಲ್.ಸಿ ಪರೀಕ್ಷೆ-1 ಮತ್ತು 2 ಕ್ಕೆ ನೋಂದಾಯಿಸಿಕೊಂಡು ಪೂರ್ಣಗೊಳಿಸಲಾಗಿಲ್ಲದ ವಿದ್ಯಾರ್ಥಿಗಳ ಭಾವಚಿತ್ರ ಮತ್ತು ಸಹಿಗಳು ಮಂಡಳಿಯಲ್ಲಿ ಲಭ್ಯವಿದ್ದು, ಸದರಿ ಅಭ್ಯರ್ಥಿಗಳು ಈ ಪೂರಕ ಪರೀಕ್ಷೆಗೆ ನೋಂದಾಯಿಸಿಕೊಂಡಲ್ಲಿ ಪುನ: ಇವರು ಭಾವಚಿತ್ರ ಮತ್ತು ಸಹಿಗಳನ್ನು ಅಪ್‌ಲೋಡ್ ಮಾಡುವ ಅವಶ್ಯಕತೆ ಇರುವುದಿಲ್ಲ.
ಶುಲ್ಕ ಪಾವತಿಸಲು ನಿಗದಿಪಡಿಸಿದ ದಿನಾಂಕ
ಇದನ್ನೂ ಓದಿ: NEET UG: ನೀಟ್ ಅಕ್ರಮ: ಪರೀಕ್ಷೆಯನ್ನು ರದ್ದುಗೊಳಿಸುವುದು ಸಮಂಜಸವಲ್ಲ ಎಂದ ಕೇಂದ್ರ