ಬೆಂಗಳೂರು: ಕುಡಿತದ ಚಟ ಬಿಡಿಸಬೇಕೆಂದು (Alcohol addiction) ವ್ಯಸನ ಮುಕ್ತ ಕೇಂದ್ರಕ್ಕೆ (Rehabilitation Centre) ಸೇರಿಸುವ ಮುನ್ನ ಎಚ್ಚರವಾಗಿರಿ ಇಲ್ಲದಿದ್ದರೆ ಆಸ್ಪತ್ರೆ ಪಾಲಾಗುವುದು ಗ್ಯಾರಂಟಿ. ಪ್ರವೀಣ್ ಎಂಬಾತ ವಿಪರೀತ ಕುಡಿತದ ಚಟಕ್ಕೆ ಬಿದ್ದಿದ್ದ. ಕುಡಿತದ ಚಟಕ್ಕೆ ಬಿದ್ದ ಪ್ರವೀಣ್‌ನನ್ನು ಕುಟುಂಬಸ್ಥರು ವ್ಯಸನ ಮುಕ್ತ ಕೇಂದ್ರಕ್ಕೆ ಸೇರಿಸಿದ್ದರು. ಆದರೆ ಸೇರಿದ ಎರಡೇ ದಿನಕ್ಕೆ ಪ್ರವೀಣ್ ಆಸ್ಪತ್ರೆ ಪಾಲಾಗಿದ್ದಾರೆ.
ಪ್ರವೀಣ್‌ಗೆ ಮದುವೆಯಾಗಿ ಒಂದು ಹೆಣ್ಣು ಮಗು ಸಹ ಇತ್ತು. ಕುಡಿತದ ಚಟಕ್ಕೆ ಬಿದ್ದು ಹೆಂಡತಿ ಮಕ್ಕಳನ್ನು ಉಪವಾಸ ಕೆಡವಿದ್ದ. ಹೀಗಾಗಿ ಕುಟುಂಬಸ್ಥರು ಪ್ರವೀಣ್‌ನನ್ನು ಸರಿದಾರಿಗೆ ತರಲು ಕಾಮಾಕ್ಷಿಪಾಳ್ಯದ ಆರ್‌ಎಎಸ್‌ಪಿ ಎಂಬ ವ್ಯಸನ ಮುಕ್ತ ಕೇಂದ್ರಕ್ಕೆ ಸೇರಿದ್ದರು. ಆದರೆ ಎರಡೇ ದಿನಕ್ಕೆ ಪ್ರವೀಣ್ ಕೈಕಾಲು ಸ್ವಾದೀನ ಕಳೆದುಕೊಳ್ಳುವಂತೆ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: Liquor Consumption: ಬಡವನ ಕುಡಿತದ ವಾರ್ಷಿಕ ಲೆಕ್ಕಾಚಾರ ಇಲ್ಲಿದೆ! ದಿನಕ್ಕೆ ಆತನ ಸರಾಸರಿ ಖರ್ಚೆಷ್ಟು?
ಕೇಂದ್ರದಲ್ಲಿ ಎರಡು ದಿನಗಳ ಕಾಲ ಕೈಕಾಲು ಕಟ್ಟಿ ಹಾಕಿ ಪ್ರವೀಣ್‌ಗೆ ಮನಬಂದಂತೆ ಥಳಿಸಿದ್ದಾರೆ. ಹಲ್ಲೆ ಮಾಡಿ ಪ್ರಜ್ಞೆ ತಪ್ಪುತ್ತಿದ್ದಂತೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಕೇಂದ್ರದ ಸಿಬ್ಬಂದಿ ಹೊಡೆದಿರುವ ವಿಚಾರ ಮುಚ್ಚಿಟ್ಟು ಪ್ರಜ್ಞೆ ತಪ್ಪಿದ್ದಾಗಿ ಮಾತ್ರ ಹೇಳಿ ಕೈತೊಳೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದಾಗ ಅಸಲಿ ವಿಚಾರ ತಿಳಿದು ಬಂದಿದೆ.
ವಿವೇಕ್ ಎಂಬುವವರಿಗೆ ಸೇರಿರುವ ಆರ್‌ಎಎಸ್‌ಪಿ ಸೆಂಟರ್ ವಿರುದ್ಧ ಪ್ರವೀಣ್ ಕುಟುಂಬಸ್ಥರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಪೊಲೀಸರು ಎಫ್ಐಆರ್‌ನಲ್ಲಿ ಕೇಂದ್ರದ ಹೆಸರನ್ನೇ ನಮೂದಿಸಿಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ