Site icon Vistara News

Religious conversion | ಇಸ್ಲಾಮ್‌ಗೆ ಮತಾಂತರಗೊಂಡಿದ್ದ ಅರ್ಚಕ ಘರ್‌ ವಾಪ್ಸಿ

religion change

ತುಮಕೂರು: ಇಸ್ಲಾಮ್‌ಗೆ ಮತಾಂತರಗೊಂಡಿದ್ದ (Religious conversion) ಅರ್ಚಕ ಚಂದ್ರಶೇಖರಯ್ಯರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರಲಾಗಿದೆ. ಊರ್ಡಿಗೆರೆ ಹೋಬಳಿ ಹಿರೇಹಳ್ಳಿಯ ಓಂಕಾರೇಶ್ವರ ದೇವಾಲಯದ ಅರ್ಚಕ ದಿವಂಗತ ರೇಣುಕಾರಾದ್ಯ ಎಂಬುವವರ ಪುತ್ರ ಎಚ್.ಆರ್ ಚಂದ್ರಶೇಖರಯ್ಯ ಉರುಫ್ ಮಂಜುನಾಥ್‌ ಅವರು ಸ್ವ ಇಚ್ಚೆಯಿಂದ ಮತಾಂತರಗೊಂಡಿರುವುದಾಗಿ ಪ್ರಕಟಣೆ ಹೊರಡಿಸಿದ್ದರು.

ಮತಾಂತರಗೊಂಡಿದ್ದ ಎಚ್.ಆರ್.ಚಂದ್ರಶೇಖರಯ್ಯ ತಮ್ಮ ಹೆಸರನ್ನು ಮುಬಾರಕ್ ಪಾಷಾ ಎಂದು ಬದಲಾಯಿಸಿಕೊಂಡಿದ್ದರು. ಹಲವು ಸಮಸ್ಯೆಗಳ ಕಾರಣದಿಂದ 2022ರ ಆಗಸ್ಟ್ 18ರಂದು ಸ್ವಇಚ್ಛೆಯಿಂದ ಮತಾಂತರಗೊಂಡಿರುವುದಾಗಿ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದರು.

ಹಿಂದು ಧರ್ಮಕ್ಕೆ ವಾಪಸ್‌ ಕರೆ ತಂದ ಮಾಜಿ ಸಚಿವ ಸೂಗಡು ಶಿವಣ್ಣ

ವಿಷಯ ತಿಳಿಯುತ್ತಿದ್ದಂತೆ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಎಚ್.ಆರ್.ಚಂದ್ರಶೇಖರಯ್ಯ ಅಲಿಯಾಸ್‌ ಮಂಜುನಾಥ್‌ ಅವರ ಜತೆ ಮಾತುಕತೆ ನಡೆಸಿದ್ದಾರೆ.

ಮರಳಿ ಹಿಂದೂ ಧರ್ಮಕ್ಕೆ ಕರೆತರಲು ಒಪ್ಪಿಸಿದ್ದಾರೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಮಂಜುನಾಥ್‌ ಅವರನ್ನು ಮಾತೃ ಧರ್ಮಕ್ಕೆ ಕರೆತಂದು, ವ್ಯಾಸರಾಯ ಮಠದ ವಿದ್ಯಾಶ್ರೀಶ ತೀರ್ಥ ಶ್ರೀ ಪಾದಂಗಳವರಿಂದ ಮಂತ್ರಾಕ್ಷತೆಯನ್ನು ಗಡು ಶಿವಣ್ಣ ಕೊಡಿಸಿದ್ದಾರೆ.

ಇದನ್ನೂ ಓದಿ | ಚಂದ್ರಶೇಖರಯ್ಯ ಈಗ ಮುಬಾರಕ್‌ ಪಾಷಾ, ಇಸ್ಲಾಂಗೆ ಮತಾಂತರಗೊಂಡ ಅರ್ಚಕ

Exit mobile version