Site icon Vistara News

Renuka Swamy Murder Case: ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದ 66 ವಸ್ತುಗಳು ಎಫ್ಎಸ್ಎಲ್‌ಗೆ ರವಾನೆ

Renuka Swamy Murder Case

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ‌ ಕೊಲೆ‌ ಪ್ರಕರಣದ (Renuka Swamy Murder Case) ತನಿಖೆಯನ್ನು ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ. ರೇಣುಕಾಸ್ವಾಮಿ ಬಳಸಿದ ವಸ್ತುಗಳು, ಆತನ ಶವ ಪರೀಕ್ಷೆ ವೇಳೆ ಸಂಗ್ರಹಿಸಿದ ಹಾಗೂ ಆರೋಪಿಗಳಿಂದ ವಶಕ್ಕೆ ಪಡೆದ ವಸ್ತುಗಳನ್ನು ಎಫ್ಎಸ್ಎಲ್‌ಗೆ ರವಾನೆ ಮಾಡಲಾಗಿದೆ.

ರೇಣುಕಾಸ್ವಾಮಿಯ ಬಟ್ಟೆಗಳು ಸೇರಿ ಇನ್ನಿತರ ವಸ್ತುಗಳು, ಸಿಸಿಟಿವಿ ಫುಟೇಜ್, ಮೊಬೈಲ್ ಫೋನ್‌ಗಳು ಸೇರಿ 66 ವಸ್ತುಗಳನ್ನು ಎಫ್ಎಸ್ಎಲ್‌ಗೆ ರವಾನೆ ಮಾಡಲಾಗಿದೆ. ಪ್ರಕರಣದಲ್ಲಿ ಆರೋಪಿಗಳ ಪಾತ್ರ ತಿಳಿಯಲು ಅವರಿಗೆ ಸಂಬಂಧಿಸಿದ ಪ್ರತಿಯೊಂದು ವಸ್ತುವನ್ನು ಎಫ್ಎಸ್ಎಲ್‌ಗೆ ಕಳುಹಿಸಿ ತನಿಖಾ ತಂಡ ವರದಿ ಪಡೆಯುತ್ತಿದೆ.

ರೇಣುಕಾಸ್ವಾಮಿ ಸಾವಿನ ಅಸಲಿ ಸಮಯ ಪತ್ತೆಗೆ ಮುಂದಾದ ಪೊಲೀಸರು

ನಟ ದರ್ಶನ್ ಮತ್ತು ಗ್ಯಾಗ್‌ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ರೇಣುಕಾಸ್ವಾಮಿ ಸಾವಿನ ಅಸಲಿ ಸಮಯ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆ ವಿಧಿ ವೈದ್ಯಶಾಸ್ತ್ರ ಪ್ರಾಧ್ಯಾಪಕರಿಗೆ ಪೊಲೀಸರಿಂದ ಪತ್ರ ಬರೆಯಲಾಗಿದ್ದು, ರೇಣುಕಾಸ್ವಾಮಿ ಯಾವ ದಿನ, ಯಾವ ಸಮಯಕ್ಕೆ ಸಾವನ್ನಪ್ಪಿದ್ದಾನೆ ಎಂಬುದನ್ನು ಪರಿಶೀಲಿಸಿ ಸ್ಪಷ್ಟವಾದ ವರದಿ ನೀಡುವಂತೆ ಕೋರಲಾಗಿದೆ.

ರೇಣುಕಾಸ್ವಾಮಿ ಸಾಯುವ ಮುನ್ನ ಸಂಜೆ ಸುಮಾರು 4.30 ರಿಂದ 5 ಗಂಟೆಯ ನಡುವೆ ಆಹಾರ ಸೇವನೆ ಮಾಡಿದ್ದ ಬಗ್ಗೆ ತಿಳಿದುಬಂದಿದೆ. ಹೀಗಾಗಿ ರೇಣುಕಾಸ್ವಾಮಿ ಮರಣದ ನಂತರ ಆತನ ದೇಹದಲ್ಲಿ ಉಂಟಾಗುವ ಬದಲಾವಣೆ, ಮೃತದೇಹ ಫ್ರೀಜರ್‌ನಲ್ಲಿ ಇಟ್ಟಿರುವ ಸಮಯವನ್ನು ಪರಿಗಣನೆಗೆ ತೆಗೆದುಕೊಂಡು ಪರಿಶೀಲಿಸಬೇಕು ಎಂದು ಕಾಮಾಕ್ಷಿಪಾಳ್ಯ ಪೊಲೀಸರು, ವಿಕ್ಟೋರಿಯಾ ಆಸ್ಪತ್ರೆ ವಿಧಿ ವೈಧ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ದರ್ಶನ್‌ ಹೊರಗೆ ಯಾವಾಗ ಬರ್ತಾರೆ? ವಿದ್ಯಾ ಶಂಕರಾನಂದ ಸರಸ್ವತಿ ಭವಿಷ್ಯ ಏನು?

ಬೆಂಗಳೂರು: ನಟ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಹತ್ಯೆ (Renukaswamy) ಪ್ರಕರಣದ ಆರೋಪ ಹೊತ್ತು ಬಂಧನದಲ್ಲಿದ್ದಾರೆ. ಇಂತಹ ವಿವಾದದ ಮಧ್ಯೆ ಸಿಲುಕಿಕೊಂಡು ಸೆಣಸಾಡುತ್ತಿರುವ ನಟ ದರ್ಶನ್ ಅವರಿಗೆ ಜ್ಯೋತಿಷಿ ಆರ್ಯವರ್ಧನ್ ರಾಜಯೋಗ ಕೂಡಿ ಬರಲಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ಬಿಗ್ ಬಾಸ್​ಗೆ ಅತಿಥಿಯಾಗಿ ಬಂದು ಖ್ಯಾತಿ ಪಡೆದಿರೋ ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ಅವರು ದರ್ಶನ್ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.

ಮಾಧ್ಯಮವೊಂದರಲ್ಲಿ ವಿದ್ಯಾ ಶಂಕರಾನಂದ ಸರಸ್ವತಿ ಸ್ವಾಮೀಜಿ ಅವರು ದರ್ಶನ್‌ ಬಗ್ಗೆ ಭವಿಷ್ಯ ನುಡಿದಿದ್ದು ಹೀಗೆ. ʻ ದರ್ಶನ್ ಅವರು ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. 14-15 ವರ್ಷಗಳಲ್ಲಿ ಅವರು ಒಂದಲ್ಲಾ ಒಂದು ವಿವಾದ ಮಾಡಿಕೊಳ್ಳುತ್ತಿದ್ದಾರೆ. ಯಾರ ತಪ್ಪು ಯಾರು ಸರಿ ಎಂಬುದನ್ನು ನಾವು ಹೇಳಬಾರದು. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಬರುತ್ತದೆ.

`ʻʻ2011ರಿಂದ ಗುರುದಶ ಶುರುವಾಗಿದೆ. ಅವರು ಆಗ ದೊಡ್ಡ ಅಪವಾದ ಅನುಭವಿಸಿದ್ದರು. ಹಲವು ದಿನ ಜೈಲಿನಲ್ಲಿದ್ದರು. ಹೊರಗೆ ಇರೋ ದರ್ಶನ್​ಗೂ ಆಂತರ್ಯದಲ್ಲಿರೋ ದರ್ಶನ್​ಗೂ ಸಾಕಷ್ಟು ವ್ಯತ್ಯಾಸ ಇದೆ 2023 ನವೆಂಬರ್​ನಿಂದ 2024ರ ಅಕ್ಟೋಬರ್​ವರೆಗೆ ಕುಜ ಭುಕ್ತಿ ಇದೆ. ಅಕ್ಟೋಬರ್ ನಂತರ ಅವರು ಜೀವನ ಬದಲಾಗುತ್ತದೆ. ದರ್ಶನ್​​ಗೆ ಅಕ್ಟೋಬರ್​ 28ವರೆಗೂ ಜಾಮೀನು ಅಸಾಧ್ಯ’ ಎಂದಿದ್ದಾರೆ ಅವರು.

Exit mobile version