Site icon Vistara News

Actor Darshan: ದರ್ಶನ್‌ಗೆ ಮತ್ತೆ ಪರಪ್ಪನ ಅಗ್ರಹಾರವೇ ಗತಿ; ಜುಲೈ 18ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

Actor Darshan

Renukaswamy Murder Case: Actor Darshan's Judicial Custody Extended Till July 18

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Murder Case) ಬಂಧಿತನಾಗಿರುವ ನಟ ದರ್ಶನ್‌ಗೆ (Actor Darshan) ಮತ್ತೆ ಪರಪ್ಪನ ಅಗ್ರಹಾರವೇ ಗತಿಯಾಗಿದೆ. ನಟ ದರ್ಶನ್‌ ಸೇರಿ ಹಲವು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಜುಲೈ 18ರವರೆಗೆ ವಿಸ್ತರಣೆ ಮಾಡಲಾಗಿದೆ. ಬೆಂಗಳೂರಿನಲ್ಲಿರುವ ಆರ್ಥಿಕ ಅಪರಾಧಗಳ ಕೋರ್ಟ್‌ ನ್ಯಾಯಾಧೀಶರು ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಪೊಲೀಸ್‌ ಕಸ್ಟಡಿ ಬಳಿಕ ನ್ಯಾಯಾಂಗ ಬಂಧನದಲ್ಲಿದ್ದ ದರ್ಶನ್‌ ಸೇರಿ ಹಲವು ಆರೋಪಿಗಳ ಅವಧಿಯು ಮುಕ್ತಾಯಗೊಂಡ ಕಾರಣ ವಿಡಿಯೊ ಕಾನ್ಫರೆನ್ಸ್‌ ಮೂಲಕ ಜಡ್ಜ್‌ ಎದುರು ಆರೋಪಿಗಳನ್ನು ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಜುಲೈ 18ರವರೆಗೆ ನ್ಯಾಯಾಂಗ ಬಂಧನಕ್ಕೆ ವಹಿಸಿ ಆದೇಶ ಹೊರಡಿಸಿದರು. ಇದರಿಂದಾಗಿ ದರ್ಶನ್‌ ಹಾಗೂ ಗ್ಯಾಂಗ್‌ಗೆ ಹಿನ್ನಡೆಯಾದಂತಾಗಿದೆ.

Actor Darshan Will Attend The Court Hearing From Online

ದರ್ಶನ್‌ ಪತ್ನಿ ನಾನು ಎಂದ ವಿಜಯಲಕ್ಷ್ಮೀ

ನಟ ದರ್ಶನ್ (Actor Darshan) ಹಾಗೂ ಪವಿತ್ರ ಗೌಡ (Pavitra Gowda) ಸಂಬಂಧದ ಕುರಿತು ಕಮಿಷನರ್‌ ಬಿ. ದಯಾನಂದ್‌ (Police commissioner B Dayanand) ಅವರು ನೀಡಿರುವ ಉಲ್ಲೇಖದ ಬಗ್ಗೆ ದರ್ಶನ್‌ ಪತ್ನಿ ವಿಜಯಲಕ್ಷ್ಮಿ (Vijayalakshmi) ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ʼಪವಿತ್ರ ಗೌಡ ಅವರು ದರ್ಶನ್‌ ಪತ್ನಿ ಅಲ್ಲ, ದರ್ಶನ್‌ ಪತ್ನಿ ನಾನುʼ ಎಂದು ಸ್ಪಷ್ಟಪಡಿಸಿದ್ದಾರೆ.

ದರ್ಶನ್ ಹಾಗೂ ಇತರೆ ಆರೋಪಿಗಳ ಬಂಧನದ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ.‌ದಯಾನಂದ್ ಸುದ್ದಿಗೋಷ್ಠಿ ಮಾಡಿದ್ದರು. ಆ ವೇಳೆ,‌‌ ʼದರ್ಶನ್ ಪತ್ನಿ ಪವಿತ್ರ ಗೌಡಗೆ ರೇಣುಕಾ ಸ್ವಾಮಿ ‌ಅಶ್ಲೀಲ‌ ಸಂದೇಶ ಕಳಿಸಿದ್ದʼ ಎಂದು ಉಲ್ಲೇಖ ಮಾಡಿದ್ದರು. ಆ ಸುದ್ದಿ ಎಲ್ಲಾ ಮಾಧ್ಯಮಗಳಲ್ಲಿ, ‌ಪತ್ರಿಕೆಗಳಲ್ಲಿ‌ ಪ್ರಸಾರವಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ‌ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ.

“ನೀವು ಸುದ್ದಿಗೋಷ್ಠಿಯಲ್ಲಿ ದರ್ಶನ್ ಪತ್ನಿ ಪವಿತ್ರ ಗೌಡ ಎಂದು ಹೇಳಿಕೆ‌ ನೀಡಿದ್ದೀರಿ. ದರ್ಶನ್‌ಗೆ ನಾನು ಕಾನೂನುಬದ್ಧವಾಗಿ ವಿವಾಹವಾದ ಏಕೈಕ ಪತ್ನಿ. ನಮ್ಮ ವಿವಾಹವು 19.05.2003ರಂದು ಧರ್ಮಸ್ಥಳದಲ್ಲಿ ಅದ್ಧೂರಿಯಾಗಿ ನೆರವೇರಿತು. ಪವಿತ್ರ ಗೌಡ ನನ್ನ ಪತಿ ದರ್ಶನ್ ಸ್ನೇಹಿತೆ ನಿಜ. ಆದರೆ ಅವರು ದರ್ಶನ್ ಅವರ ಹೆಂಡತಿಯಲ್ಲ ಎಂದು ದಯವಿಟ್ಟು ಗಮನಿಸಿ” ಎಂದು ವಿಜಯಲಕ್ಷ್ಮಿ ಬರೆದಿದ್ದಾರೆ.

ಇದನ್ನೂ ಓದಿ: Actor Darshan: ಪವಿತ್ರಾ ಗೌಡ ಮತ್ತು ದರ್ಶನ್‌ ಸಂಬಂಧ ಅದಲ್ಲ: ಕಮಿಷನರ್‌ಗೆ ಪತ್ರ ಬರೆದ ವಿಜಯಲಕ್ಷ್ಮಿ

Exit mobile version