Site icon Vistara News

Republic Day Tableau : ಯಾವ ಪಕ್ಷದ ಅವಧಿಯಲ್ಲಿ ಹೆಚ್ಚು ಸ್ತಬ್ಧಚಿತ್ರಗಳು ತಿರಸ್ಕೃತ ಆಗಿದ್ದವು? ಇಲ್ಲಿದೆ ಮಾಹಿತಿ

Republic Day Tableau

ಬೆಂಗಳೂರು: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸ್ತಬ್ಧಚಿತ್ರ (Republic Day Tableau) ಆಯ್ಕೆ ಹಾಗೂ ತಿರಸ್ಕಾರದ ಕುರಿತು ಕರ್ನಾಟಕದಲ್ಲಿ ರಾಜಕೀಯ ಚರ್ಚೆಗಳು ನಡೆಯುತ್ತಿವೆ. ಈ ವರ್ಷ ಕರ್ನಾಟಕದ ಪ್ರಸ್ತಾವನೆ ತಿರಸ್ಕಾರವಾಗಿತ್ತಾದರೂ ಮತ್ತೆ ಪ್ರಯತ್ನಿಸಿದ ಪರಿಣಾಮವಾಗಿ ಒಪ್ಪಿಗೆ ಪಡೆದಿದೆ.

ಅನಕ್ಷರಸ್ಥರಾಗಿದ್ದರೂ ಪರಿಸರ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅಗಾಧ ಸೇವೆ ಸಲ್ಲಿಸಿದ ಕಾರಣಕ್ಕೆ ಪದ್ಮ ಪ್ರಶ್ನಸ್ತಿ ಪಡೆದ ಸೂಲಗಿತ್ತಿ ನರಸಮ್ಮ, ವೃಕ್ಷಮಾತೆ ತುಳಸಿ ಗೌಡ, ಸಾಲುಮರದ ತಿಮ್ಮಕ್ಕ ಅವರ ಜೀವನ ಬಿಂಬಿಸುವ ʼನಾರಿ ಶಕ್ತಿʼ ಸ್ತಬ್ಧಚಿತ್ರ ನವದೆಹಲಿಯ ಕರ್ತವ್ಯ ಪಥದಲ್ಲಿ ಗುರುವಾರ ಹಾದುಹೋಗಲಿದೆ.

2000ನೇ ಇಸವಿಯಿಂದ 202೨ರವರೆಗೆ 2೩ ವರ್ಷದಲ್ಲಿ ಕರ್ನಾಟಕ 19 ಬಾರಿ ಸ್ತಬ್ಧಚಿತ್ರವನ್ನು ಪ್ರದರ್ಶಿಸಿದೆ. ಇದೀಗ 20ನೇ ಬಾರಿ ಕರ್ನಾಟಕ ಭಾಗವಹಿಸುತ್ತಿದೆ. ಒಟ್ಟು ನಾಲ್ಕು ಬಾರಿ ಕರ್ನಾಟಕದ ಸ್ತಬ್ಧಚಿತ್ರ ತಿರಸ್ಕೃತವಾಗಿದೆ. ಆ ಸಮಯದಲ್ಲಿ ಯಾವ ಸರ್ಕಾರಗಳು ಇದ್ದವು ಎಂಬ ಮಾಹಿತಿ ಇಲ್ಲಿದೆ.

1. 2002– ಎಸ್‌.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್‌ ಸರ್ಕಾರ
2. 2004-ಎಸ್‌.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್‌ ಸರ್ಕಾರ
3. 2007-ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌- ಬಿಜೆಪಿ ಮೈತ್ರಿ ಸರ್ಕಾರ
4. 2009-ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ

ಕರ್ನಾಟಕದ ಸ್ತಬ್ಧ ಚಿತ್ರಗಳು ಮೂರೂ ಪಕ್ಷಗಳು ಅಧಿಕಾರದಲ್ಲಿರುವಾಗ ತಿರಸ್ಕೃತಗೊಂಡಿದೆ. ಕಾಂಗ್ರೆಸ್‌ ಅವಧಿಯಲ್ಲಿ ಎರಡು ಬಾರಿ ತಿರಸ್ಕಾರಗೊಂಡಿದೆ ಎನ್ನುವುದು ಇದರಿಂದ ತಿಳಿಯುತ್ತದೆ. ಸ್ತಬ್ಧಚಿತ್ರ ಆಯ್ಕೆಯು ಯಾವುದೇ ರಾಜಕೀಯ ಹಿನ್ನೆಲೆಯನ್ನು ಪರಿಗಣನೆಗೆ ತೆಗೆದುಕೊಳ್ಳದೇ ರಕ್ಷಣಾ ಇಲಾಖೆಯು ನೇಮಿಸಿದ ತಜ್ಞರ ಮೂಲಕ ನಡೆಯುತ್ತದೆ. ಆದರೂ ಇತ್ತೀಚಿನ ವರ್ಷಗಳಲ್ಲಿ ಕೇರಳ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳು ಇದರಲ್ಲಿ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದ್ದವು. ಕರ್ನಾಟಕ ಸ್ತಬ್ಧಚಿತ್ರ ಈ ಹಿಂದೆ ತಿರಸ್ಕೃತವಾದಾಗಲೂ ರಾಜಕೀಯ ಚರ್ಚೆ ನಡೆದಿರಲಿಲ್ಲ, ಆದರೆ ಇದೀಗ ಕರ್ನಾಟಕದಲ್ಲೂ ಈ ವಿಚಾರ ರಾಜಕೀಯ ಬಣ್ಣ ಪಡೆದಿದೆ.

2000ನೇ ಇಸವಿಯಿಂದ ಇಲ್ಲಿವರೆಗೆ ಕರ್ನಾಟಕದ ಸ್ತಬ್ಧಚಿತ್ರಗಳು ಪಡೆದ ಬಹುಮಾನದ ವಿವರ ಇಲ್ಲಿದೆ.

Exit mobile version