Site icon Vistara News

ಜನಗಣತಿಯಲ್ಲಿ ಲಿಂಗಾಯತ ಎಂದು ನಮೂದಿಸಲು ಸಂಘಟನೆಗಳ ಮನವಿ

ಜನಗಣತಿಯಲ್ಲಿ ಲಿಂಗಾಯತ

ಬೆಂಗಳೂರು: ಲಿಂಗಾಯತರು ಹಿಂದೂ ಧರ್ಮದ ಭಾಗವಲ್ಲ, ಆದ್ದರಿಂದ ಜನಗಣತಿಯಲ್ಲಿ ಧರ್ಮವನ್ನು ಲಿಂಗಾಯತ ಮತ್ತು ಜಾತಿ ಕಾಲಂನಲ್ಲಿ ತಮ್ಮ ಉಪ ಪಂಗಡಗಳ ಹೆಸರುಗಳನ್ನು ನೋಂದಾಯಿಸಬೇಕು ಎಂದು ಲಿಂಗಾಯತ ಮಠಾಧೀಶರ ಒಕ್ಕೂಟ, ಲಿಂಗಾಯತ ಧರ್ಮ ಮಹಾಸಭೆ ಮತ್ತು ಬಸವ ದಳ, ಜಾಗತಿಕ ಲಿಂಗಾಯತ ಮಹಾಸಭೆ, ಬಸವ ಸಮಿತಿ ಬಸವ ಧರ್ಮ ಪ್ರತಿಷ್ಠಾನಗಳ ಪದಾಧಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕರೆ ನೀಡಿವೆ.

ಗತಿಕ ಲಿಂಗಾಯತ ಮಹಾಸಭಾದ ಎಸ್.ಎಂ. ಜಾಮದಾರ್‌ ಮಾತನಾಡಿ, ಲಿಂಗಾಯತ ಎಂಬುದು ವಿಶೇಷ ತಂತ್ರ ಸಿದ್ಧಾಂತಗಳೊಂದಿಗೆ 900 ವರ್ಷಗಳ ಇತಿಹಾಸ ಹೊಂದಿರುವ ಧರ್ಮ. ವೀರಶೈವ ಮಹಾಸಭಾವು 2018ರಲ್ಲಿ ತೆಗೆದುಕೊಂಡ ತೀರ್ಮಾನಗಳಿಂದ ಲಿಂಗಾಯತ ಮತ್ತು ವೀರಶೈವ ಲಿಂಗಾಯತರ ನಡುವೆ ಗೊಂದಲಗಳು ಸೃಷ್ಟಿ ಆಗಿದ್ದವು. ವೀರಶೈವ ಮಹಾಸಭಾ ಎಂದು ಇದ್ದ ಹೆಸರನ್ನು ಈಗ ವೀರಶೈವ ಲಿಂಗಾಯತ ಮಹಾಸಭಾ ಎಂದು ಬದಲಿಸಿ ಕೊಂಡಿದ್ದಾರೆ.

ಇದೆಲ್ಲವನ್ನೂ ನೋಡಿದರೆ ಧರ್ಮವನ್ನು ಒಡೆದವರು ಯಾರು ಎಂಬುದು ಗೊತ್ತಾಗುತ್ತದೆ. ಜನಗಣತಿಯಲ್ಲಿ ಲಿಂಗಾಯತರನ್ನು ವೀರಶೈವ ಲಿಂಗಾಯತ ಎಂದು ನಮೂದಿಸಬೇಕು. ಲಿಂಗಾಯತ ಧರ್ಮದಲ್ಲಿ 102 ಉಪ ಪಂಗಡಗಳಿದ್ದು, ಅದರಲ್ಲಿ ವೀರಶೈವ ಕೂಡ ಒಂದು ಉಪಪಂಗಡವಾಗಿದೆ.

ಇದನ್ನೂ ಓದಿ: ಪರಿಷ್ಕೃತ ಶಾಲಾ ಪಠ್ಯವನ್ನು ಕೈಬಿಡಲು ಸಾಣೇಹಳ್ಳಿ ಶ್ರೀ ಆಗ್ರಹ

ಅಲ್ಪಸಂಖ್ಯಾತ ಕೋಟಾದಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ದೊರೆಯಬಹುದಾದ ಐದು ಸಾವಿರ ಪದವಿ ಮತ್ತು 500ಕ್ಕೂ ಹೆಚ್ಚು ಸ್ನಾತಕೋತ್ತರ ಪದವಿ ಸೀಟುಗಳಿಂದ ಲಿಂಗಾಯತ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಆದ್ದರಿಂದ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದೇ ನಮೂದಿಸಬೇಕು.

ಲಿಂಗಾಯತ ವೀರಶೈವ ಸಮುದಾಯ ಒಂದೋ ಅಥವಾ ಬೇರೆ ಬೇರೆಯೋ ಎಂಬುದರ ವಿವರಗಳುಳ್ಳ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸುದ್ದಿಗೋಷ್ಠಿಯಲ್ಲಿ ಲಿಂಗಾಯತ ಧರ್ಮ ಮಹಾಸಭಾದ ಗಂಗಾ ಮಾತಾಜೀ, ಲಿಂಗಾಯಿತ ಮಠಾಧೀಶರ ಒಕ್ಕೂಟದ ಬಸವಲಿಂಗ ಪಟ್ಟದೇವರು, ಬಸವಧರ್ಮ ಪ್ರತಿಷ್ಠಾನದ ಅನ್ನಪೂರ್ಣ, ರಾಷ್ಟ್ರೀಯ ಬಸವದಳ ಅಧ್ಯಕ್ಷರಾದ ಬಸವರಾಜ್ ದನೂರು ಬಸವ ಸಮಿತಿಯ ಪದಾಧಿಕಾರಿಗಳು ಹಾಗೂ ನಾನಾ ಮಠಾಧೀಶರು ಮುಖಂಡರು ಭಾಗವಹಿಸಿದ್ದರು.

ಇದನ್ನೂ ಓದಿ: ಲಿಂಗಾಯತ ಧರ್ಮ ನಾವು ರಾಜಕೀಯಕ್ಕೆ ಬಳಸುವುದಿಲ್ಲ: ಎಂ.ಬಿ.ಪಾಟೀಲ್

Exit mobile version