Site icon Vistara News

ಭಾರತೀಯ ಸೇನೆಯಲ್ಲಿ 21 ವರ್ಷ ಸೇವೆ ಸಲ್ಲಿಸಿ ವಾಪಸಾದ ಯೋಧನಿಗೆ ಅದ್ಧೂರಿ ಸ್ವಾಗತ

chamarajpet solider

ಚಾಮರಾಜನಗರ: ಭಾರತೀಯ ಸೇನೆಯಲ್ಲಿ 21 ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಹೆಮ್ಮೆಯ ಯೋಧರೊಬ್ಬರಿಗೆ ಗ್ರಾಮದವರಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ.

ಚಾಮರಾಜನಗರ ತಾಲೂಕಿನ ಬೇವಿನತಾಳಪುರ ಗ್ರಾಮದ ಬಿ.ಎಂ. ಮಲ್ಲೇಶ್ ಎಂಬ ಯೋಧ ಜಮ್ಮು ಕಾಶ್ಮೀರ, ರಾಜಸ್ಥಾನ, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೇವೆ ಸಲ್ಲಿಸಿ ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ಅವರಿ​ಗೆ ಗ್ರಾಮದ ಯುವಕರು ಭರ್ಜರಿಯಾಗಿಯೇ ಸ್ವಾಗತ ಕೋರಿದ್ದಾರೆ.

ಚಾಮರಾಜನಗರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಮಲ್ಲೇಶ್​ಗೆ ಆರತಿ ಮಾಡಿ, ಹೂವಿನ ಹಾರ ಹಾಕಿ ಜೈಕಾರ ಹಾಕಲಾಗಿದೆ. ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಗ್ರಾಮಕ್ಕೆ ಕರೆ ತರಲಾಗಿದೆ. ಇದೇ ವೇಳೆ ಗ್ರಾಮದ ಯುವಕರು ಸಹ ಬೈಕ್ ರ‍್ಯಾಲಿ ಮಾಡುವ ಮೂಲಕ ಯೋಧನಿಗೆ ಗೌರವಪೂರ್ವಕ ಸ್ವಾಗತವನ್ನು ಕೋರಿದ್ದಾರೆ. ಯೋಧನ ಈ ಸ್ವಾಗತ ಸಂದರ್ಭದಲ್ಲಿ ಸಾರ್ವಜನಿಕರಿಂದ “ಭಾರತ್ ಮಾತಾಕಿ ಜೈ” ಎಂದು ಜೈಕಾರ ಕೇಳಿ ಬಂದಿದೆ. ಎಲ್ಲೆಲ್ಲೂ ದೇಶಭಕ್ತಿ ಮೊಳಗಿದೆ.

ಇದನ್ನು ಓದಿ| ಕನ್ನಡಿಗ ಹುತಾತ್ಮ ಯೋಧನ ಶೌರ್ಯ ಪ್ರಶಸ್ತಿ ನೀಡಲು ಸ್ವತಃ ರಾಷ್ಟ್ರಪತಿ ವೇದಿಕೆ ಇಳಿದು ಬಂದರು

Exit mobile version