ಬೆಂಗಳೂರು: ರಾಜಧಾನಿಯ ತಿಲಕ್ ನಗರದಲ್ಲಿ ಸಿಕ್ಕಿಬಿದ್ದ ಇಬ್ಬರು ಶಂಕಿತ ಉಗ್ರರಾದ ಅಖ್ತರ್ ಹುಸೇನ್ ಮತ್ತು ಜುಬಾನ ಮೊಬೈಲ್‌ನಿಂದ ಹಲವು ಮಹತ್ವದ ಸಾಕ್ಷ್ಯಗಳು ಸಿಕ್ಕಿದ್ದು, ಇದರಿಂದ ತನಿಖಾ ವರದಿ ಸಲ್ಲಿಕೆಗೆ ಅನುಕೂಲವಾಗಿದೆ ಎಂದು ಹೇಳಲಾಗಿದೆ. ಉಗ್ರರು ಹಳೆಯ ಹಳೆ ಮೊಬೈಲ್ ಬಳಸುತ್ತಿದ್ದುರಿಂದ ಅದರಲ್ಲಿರುವ ಮಾಹಿತಿಗಳನ್ನು ರಿಟ್ರೀವ್ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಈಗ ರಿಟ್ರೀವ್ ಮಾಡಿರುವುದರಿಂದ ಸಿಸಿಬಿ ನಡೆಸುತ್ತಿರುವ ತನಿಖೆಯೂ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಂತಾಗಿದೆ.
ಆರೋಪಿಗಳ ಕೈಯಿಂದ ಸಿಸಿಬಿ ಪೊಲೀಸರು ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದರು. ಉಗ್ರ ಅಖ್ತರ್‌ಗೆ ಸೇರಿದ ಒಂದಯ ಮೊಬೈಲ್‌ನಿಂದ ಮಾಹಿತಿ ಪಡೆಯುವುದು ಭಾರಿ ಕಷ್ಟಕರವಾಗಿತ್ತು. ಕೊನೆಗೂ ಅದರ ಮುಕ್ಕಾಲು ಭಾಗವನ್ನು ರಿಟ್ರೀವ್ ಮಾಡಲು ಸಾಧ್ಯವಾಗಿದೆ. ಮೊಬೈಲ್‌ಗಳಿಂದ ಯಾವ್ಯಾವ ಮಾಹಿತಿ ಸಿಕ್ಕಿದೆ ಎಂಬ ಬಗ್ಗೆ ಕೇಂದ್ರ ಗೃಹ ಇಲಾಖೆ ಈ ಹಿಂದೆ ಒಮ್ಮೆ ಮಾಹಿತಿ ಕೇಳಿತ್ತು. ಈಗ ರಿಟ್ರೀವ್ ಆಗಿರುವುದರಿಂದ ಮಾಹಿತಿ ನೀಡುವುದು ಸಾಧ್ಯವಾಗಿದೆ.
ಮೊಬೈಲ್‌ನಿಂದ ಸಿಕ್ಕಿರುವ ಮಾಹಿತಿಗಳೇನು?
-ಮೂರು ಮೊಬೈಲ್‌ಗಳಿಂದ ಒಟ್ಟು ೩೦ ಜಿಬಿ ಡೇಟಾ ರಿಟ್ರೀವ್ ಮಾಡಲಾಗಿದೆ.
– ಒಂದೊಂದು ಮೊಬೈಲ್‌ನಲ್ಲೂ ಲೆಕ್ಕವಿಲ್ಲದಷ್ಟು ಟೆಕ್ಸ್ಟ್ ಮೆಸೇಜ್‌ಗಳು, ನೂರಕ್ಕೂ ಹೆಚ್ಚು ಪ್ರಚೋದನಾಕಾರಿ ವಿಡಿಯೊಗಳು, ಐವತ್ತಕ್ಕೂ ಹೆಚ್ಚು ಪಿಡಿಎಫ್ ಫೈಲ್‌ಗಳು ಸಿಕ್ಕಿವೆ.
– ಮೊಬೈಲ್ ನಲ್ಲಿ ಬರೀ ಧರ್ಮದ ಆಧಾರಿತ ವಿಷಯಗಳೇ ಹೆಚ್ಚು. ಕುಟುಂಬಿಕರು ಮತ್ತು ಸ್ನೇಹಿತರ ಜೊತೆ ಸಂಪರ್ಕದ ಮೆಸೇಜ್ ಗಳು ಭಾರಿ ಕಡಿಮೆ.
– ಆಲ್ ಖೈದಾ ಸಂಘಟನೆಗೆ ಸೇರಿದರೆ ಏನೆಲ್ಲಾ ಉಪಯೋಗ ಆಗುತ್ತದೆ ಎಂಬ ವಿವರ ನೀಡುವ ಪಿಡಿಎಫ್ ಫೈಲ್
- ಉಗ್ರರು ಗನ್ ಮತ್ತು ಬಾಂಬ್ ಸ್ಫೋಟಿಸೋ ದೃಶ್ಯಗಳು ಕೂಡಾ ಪತ್ತೆ.
ಮುಂದಿನ ತನಿಖೆ ಎನ್ಐಎಗೆ
ಸಿಸಿಬಿ ಒಂದು ಹಂತದ ಮಹತ್ವದ ತನಿಖೆಯನ್ನು ನಡೆಸಿದ ಬಳಿಕ ಪ್ರಕರಣ ಎನ್‌ಐಎಗೆ ಅಧಿಕೃತವಾಗಿ ಹಸ್ತಾಂತರಗೊಳ್ಳಲಿದೆ. ಈಗ ಎನ್‌ಐಎ ಅಧಿಕಾರಿಗಳು ಸಿಸಿಬಿಯಿಂದಲೇ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಮುಂದಿನ ಹಂತದಲ್ಲಿ ಸಿಸಿಬಿ ಕೇಂದ್ರ ಗೃಹ ಇಲಾಖೆಗೆ ವರದಿಯನ್ನು ಸಲ್ಲಿಸಬೇಕಾಗಿದೆ.
ಇದನ್ನೂ ಓದಿ| Terrorist arrest | ಬೆಂಗಳೂರು ಪೊಲೀಸರ ನಿದ್ದೆ ಕೆಡಿಸಿದ ಶಂಕಿತ ಉಗ್ರನ ಬಂಧನ