Site icon Vistara News

Road Accident : ಅಪಘಾತದಲ್ಲಿ ನರಳಾಡುತ್ತಿದ್ದ ಸವಾರನ ಪಾಲಿಗೆ ಆಪತ್ಭಾಂದವರಾದ 108 ಸಿಬ್ಬಂದಿ

bike accident in belgavi. 108 Employee helped the rider and his Money

ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ಗಳ ನಡುವೆ ಅಪಘಾತ (Bike Accident) ಸಂಭವಿಸಿದೆ. ಅಪಘಾತದ (Road Accident) ಬಳಿಕ ಬೈಕ್ ಸವಾರನೊಬ್ಬ ಪರಾರಿಯಾಗಿದ್ದು, ಮತ್ತೊಬ್ಬ ಬೈಕ್‌ ಸವಾರ ಸುಧಾಕರ್‌ ಕುಮಟೊಳ್ಳಿ (36) ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದವನನ್ನು ರಕ್ಷಣೆ ಮಾಡಲಾಗಿದೆ.

ಬೈಕ್ ಸವಾರ ಸುಧಾಕರ್‌ ಕುಮಟೊಳ್ಳಿ (36) ಅವರನ್ನು ರಕ್ಷಣೆ ಮಾಡಿ 108 ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ಸುಧಾಕರ್‌ ಕುಮಟೊಳ್ಳಿ ಫೈನಾನ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬೈಕ್‌ನಲ್ಲಿ ಬರುವಾಗ ಕಳೆದ ರಾತ್ರಿ ಅಂಕಲಿ ಹಾಗೂ ಶಿರಗುಪ್ಪಿ ಮಧ್ಯೆ ಬೈಕಗಳ ನಡುವೆ ಅಪಘಾತ ನಡೆದಿತ್ತು. ಈ ವೇಳೆ ಅಪಘಾತ ಮಾಡಿ ಬೈಕ್‌ ಸವಾರ ಪರಾರಿ ಆಗಿದ್ದ.

ಸವಾರನ ಬ್ಯಾಗ್‌ನಲ್ಲಿದ್ದ ಹಣವನ್ನು ಹಿಂದಿರುಗಿಸಿದ 108 ಸಿಬ್ಬಂದಿ

ರಕ್ತದ ಮಡುವಿನಲ್ಲಿ ಬಿದ್ದು ನೋವಿನಲ್ಲಿ ನರಳಾಡುತ್ತಿದ್ದನನ್ನು ಕಂಡ ಸ್ಥಳೀಯರು 108 ಗೆ ಕರೆ ಮಾಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಅಂಕಲಿ ಗ್ರಾಮದ 108 ಸಿಬ್ಬಂದಿ ಶಬ್ಬೀರ ಮುಲ್ಲಾ ಹಾಗೂ ಅನಿಲ ಮಾಂಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸವಾರನನ್ನು ರಕ್ಷಣೆ ಮಾಡಿದರು. ಈ ವೇಳೆ ಬೈಕ್‌ ಸವಾರನ ಗುರುತು ಪತ್ತೆಗೆ ಮುಂದಾದಾಗ ಆತನ ಬಳಿ ಬ್ಯಾಗ್‌ನಲ್ಲಿ 23 ಸಾವಿರ ರೂ. ಇರುವುದು ಕಂಡು ಬಂತು. ಕೂಡಲೆ ಪೊಲೀಸರಿಗೆ ಬ್ಯಾಗ್ ಒಪ್ಪಿಸಿ, ಸವಾರನಿಗೆ ತಲುಪಿಸಿದ್ದಾರೆ

ಇದನ್ನೂ ಓದಿ: Medical Negligence : ಬೆಂಗಳೂರಲ್ಲಿ ವೈದ್ಯರ ಎಡವಟ್ಟು; ಯುವಕನ ಜೀವ ತೆಗೆದ ಇಂಜೆಕ್ಷನ್‌!

ಪುಣ್ಯ ಸ್ನಾನಕ್ಕೆ ನೀರಿಗಿಳಿದವನು ಸೇರಿದ್ದು ಮಸಣ

ಪುಣ್ಯ ಸ್ನಾನಕ್ಕೆಂದು ನೀರಿಗಿಳಿದ ವ್ಯಕ್ತಿಯೊಬ್ಬ ಹೆಣವಾಗಿ ಪತ್ತೆಯಾಗಿದ್ದಾನೆ. ಸವದತ್ತಿಯ ಜೋಗುಳಬಾವಿಯಲ್ಲಿ ಈ ದುರ್ಘಟನೆ ನಡೆದಿದೆ. ವಿನಾಯಕಸಿಂಗ್ ರಜಪೂತ (35) ಮೃತ ದುರ್ದೈವಿ.

ವಿನಾಯಕಸಿಂಗ್ ರಜಪೂತ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಸಂಡ ಗ್ರಾಮದ ನಿವಾಸಿ ಆಗಿದ್ದಾನೆ. ಶ್ರಾವಣಮಾಸ ಹಿನ್ನೆಲೆ ಸವದತ್ತಿ ಎಲ್ಲಮ್ಮನ ದರ್ಶನಕ್ಕೆ ವಿನಾಯಕಸಿಂಗ್ ರಜಪೂತ ಕುಟುಂಬ ಸಮೇತ ಬಂದಿದ್ದರು. ಈ ವೇಳೆ ಪುಣ್ಯ ಸ್ನಾನಕ್ಕೆಂದು ವಿನಾಯಕಸಿಂಗ್ ರಜಪೂತ ನೀರಿಗಿಳಿದಿದ್ದರು. ಆದರೆ ಹೊರ ಬರಲು ಆಗದೆ ಮೃತಪಟ್ಟಿದ್ದರು.

ನಿರಂತರ ಕಾರ್ಯಾಚರಣೆ ನಡೆಸಿ ಅಗ್ನಿಶಾಮಕ ದಳದ ಸಿಬ್ಬಂದಿ ಶವವನ್ನು ಹೊರ ತೆಗೆದಿದ್ದಾರೆ. ಈ ಸಂಬಂಧ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಚಲಿಸುತ್ತಿದ್ದ ರೈಲಿಗೆ ಸಿಲುಕಿದ ವ್ಯಕ್ತಿ ಸಾವು

ಚಲಿಸುತ್ತಿದ್ದ ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ದಾರುಣ ಘಟನೆ ರಾಮನಗರದ ಚನ್ನಪಟ್ಟಣ ತಾಲೂಕಿನ ಪೊಲೀಸ್‌ ತರಬೇತಿ ಶಾಲೆ ಬಳಿ ನಡೆದಿದೆ. ತಂಜಾವೂರ್ ಎಕ್ಸ್‌ಪ್ರೆಸ್‌ ರೈಲಿಗೆ ಸಿಲುಕಿ ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತನ ಕೈಯಲ್ಲಿ ಚೌಡಮ್ಮ ಎಂಬ ಹೆಸರು ಅಚ್ಚೆ ಗುರುತು ಪತ್ತೆ ಆಗಿದೆ. ಹೀಗಾಗಿ ಮೃತನ ಸಂಬಂಧಿಕರು ತಿಳಿಯಲು ರೈಲ್ವೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version