ಶಿವಮೊಗ್ಗ : ಖಾಸಗಿ ಬಸ್ ಒಂದು ವಿದ್ಯುತ್ ಕಂಬಕ್ಕೆ ಡಿಕ್ಕಿ (Private Bus rams into Electric poll) ಹೊಡೆದು (Road accident) 35ಕ್ಕೂ ಅಧಿಕ ವಿದ್ಯಾರ್ಥಿಗಳು ಶಾಕ್‌ಗೆ (Electric Shock) ಒಳಗಾದ ಘಟನೆ ಸಾಗರ ಬಳಿ ನಡೆದಿದೆ. ಆಘಾತಕ್ಕೊಳಗಾದ ಮಕ್ಕಳಲ್ಲಿ ಇಬ್ಬರ ಸ್ಥಿತಿ ಸ್ವಲ್ಪ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಸಾಗರದ ಹೊಳೆಬಾಗಿಲು ಸಮೀಪದ ಗೆಣಸಿನಕುಣಿ ಗ್ರಾಮದ ಸಮೀಪ ಈ ಘಟನೆ ನಡೆದಿದ್ದು, ಹೊಳೆಬಾಗಿಲಿನಿಂದ ಸಾಗರಕ್ಕೆ ಬರುತ್ತಿದ್ದ ಖಾಸಗಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಎಸ್.ಬಿ.ಕೆ. ಕಂಪನಿಗೆ ಸೇರಿದ ಈ ಬಸ್‌ನಲ್ಲಿ 45 ಮಂದಿ ಪ್ರಯಾಣಿಕರಿದ್ದರು.
ಸಿಗಂದೂರಿನಲ್ಲಿ ಲಾಂಚ್ ನಿಲ್ಲುವ ಗ್ರಾಮವಾಗಿರುವ ಹೊಳೆಬಾಗಿಲುವಿನಿಂದ ಬೆಳಗ್ಗಿನ ಹೊತ್ತು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳೇ ಬಸ್ಸಿನಲ್ಲಿ ತುಂಬಿದ್ದರು. ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಒಮ್ಮೆಗೇ ಬಸ್‌ಗೆ ವಿದ್ಯುತ್ ಸಂಪರ್ಕ ಆಗಿದೆ. ಇದರಿಂದ ಎಲ್ಲಾ 35 ವಿದ್ಯಾರ್ಥಿಗಳು ಶಾಕ್‌ಗೆ ಒಳಗಾದರು. ಕೆಲವರು ಬಸ್ಸಿನೊಳಗೇ ಉರುಳಿ ಬಿದ್ದರು. ಈ ವೇಳೆ ಕೆಲವರಿಗೆ ಗಾಯಗಳೂ ಆಗಿವೆ.
ಸಾಮಾನ್ಯವಾಗಿ ಈ ರೀತಿ ವಿದ್ಯುತ್ ಕಂಬಕ್ಕೆ ಏನಾದರೂ ಸಮಸ್ಯೆಯಾದರೆ ಪವರ್ ಟ್ರಿಪ್ ಆಗುತ್ತದೆ. ಆದರೆ, ಇಲ್ಲಿ ಹಾಗೆ ಆಗದೆ ವಿದ್ಯುತ್ ಪ್ರವಹಿಸುತ್ತಲೇ ಇತ್ತು. ಹೀಗಾಗಿ ಶಾಕ್‌ಗೆ ಒಳಗಾದ ಇಬ್ಬರು ವಿದ್ಯಾರ್ಥಿಗಳಿಗೆ ಸ್ವಲ್ಪ ಗಂಭೀರ ಗಾಯಗಳಾಗಿವೆ.
ಗಾಯಾಳುಗಳಿಗೆ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ : Road Accident: ಹಾಲೊ ಬ್ಲಾಕ್ ಕ್ಯಾಂಟರ್ ಮಗುಚಿ ಇಬ್ಬರ ಸಾವು
ಶಿರಾ ಬಳಿ ಲಾರಿಗೆ ಖಾಸಗಿ ಬಸ್ ಡಿಕ್ಕಿ, 20ಕ್ಕೂ ಹೆಚ್ಚು ಜನರಿಗೆ ಗಾಯ
ಶಿರಾ: ಲಾರಿಗೆ ಖಾಸಗಿ ಬಸ್ (private bus) ಡಿಕ್ಕಿ ಹೊಡೆದ ಪರಿಣಾಮ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿರುವ (Injured) ಘಟನೆ ತಾಲೂಕಿನ ಚಿಕ್ಕನಹಳ್ಳಿ ಸಮೀಪದ ಬೆಂಗಳೂರು-ದಾವಣಗೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ (NH) ನಡೆದಿದೆ.
ಕೊಪ್ಪಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಲಾರಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯಾದ ರಭಸಕ್ಕೆ ಬಸ್ಸಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ, ಬಸ್‌ನಲ್ಲಿದ್ದ 20 ಜನ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಇನ್ನು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳು ಶಿರಾ ಮತ್ತು ಕಳ್ಳಂಬೆಳ್ಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರಿನಲ್ಲಿ ಆಕಸ್ಮಿಕ ಬೆಂಕಿ, ಸುಟ್ಟು ಭಸ್ಮವಾದ ಕಾರು
ಆಕಸ್ಮಿಕವಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಇಡೀ ಕಾರಿಗೆ ವ್ಯಾಪಿಸಿ, ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಶಿರಾ ತಾಲೂಕಿನ ಮೂಗನಹಳ್ಳಿ ಸಮೀಪ ಶಿರಾ ಮಧುಗಿರಿ ರಸ್ತೆಯಲ್ಲಿ ಕಳೆದ ರಾತ್ರಿ ಸುಮಾರು 12.30 ರ ವೇಳೆ ಜರುಗಿದೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ಪ್ರಯಾಣಿಕರು ಇಳಿದು ಬಚಾವ್ ಆಗಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದುಬಂದಿದೆ, ಶಿರಾ ತಾಲೂಕಿನ ಬುಕ್ಕಪಟ್ಟಣ ಹೋಬಳಿ ವ್ಯಾಪ್ತಿ ಸಮೀಪದ ಗ್ರಾಮದವರಿಗೆ ಸೇರಿದ ಕಾರು ಇದಾಗಿದೆ ಎಂದು ತಿಳಿದುಬಂದಿದೆ.