Site icon Vistara News

Road Accident: ಶಾಲೆಗೆ ಹೋದವನು ಮಸಣ ಸೇರಿದ; ಟ್ರ್ಯಾಕ್ಟರ್‌ ಚಕ್ರಕ್ಕೆ ಸಿಲುಕಿ 7ವರ್ಷದ ಬಾಲಕ ಮೃತ್ಯು

#image_title

ಚಿಕ್ಕೋಡಿ: ಇಲ್ಲಿನ ಅಥಣಿ ತಾಲೂಕಿನ ತೇವರಟ್ಟಿ ಗ್ರಾಮದಲ್ಲಿ ಟ್ರ್ಯಾಕ್ಟರ್‌ಗೆ ಸಿಲುಕಿ 7 ವರ್ಷದ ಬಾಲಕ ಮೃತಪಟ್ಟಿರುವ ಘಟನೆ (Road Accident) ನಡೆದಿದೆ. ಸುದರ್ಶನ ಹನಮಂತ ನಿಲಜಗಿ ಮೃತ ದುರ್ದೈವಿ.

ಸುದರ್ಶನ ಶಾಲೆಗೆ ತನ್ನ ಚಿಕ್ಕಪ್ಪನ ಟ್ರ್ಯಾಕ್ಟರ್‌ನಲ್ಲಿ ಹೋಗಿದ್ದ ಈ ವೇಳೆ ಟ್ರ್ಯಾಕ್ಟರ್‌ನಿಂದ ಇಳಿದು ಹೋಗುವಾಗ ಟ್ರೇಲರ್‌ ಗೆ ಸ್ಕೂಲ್‌ ಬ್ಯಾಗ್‌ ಸಿಕ್ಕಿಕೊಂಡಿದೆ. ಬ್ಯಾಗ ಸಿಲುಕಿದ್ದರಿಂದ ಟ್ರಾಕ್ಟರ್ ಚಕ್ರಕ್ಕೆ ಬಾಲಕ ಸಿಲುಕಿ ಮೃತಪಟ್ಟಿರುವ ಘಟನೆ ಸೋಮವಾರ (6) ಬೆಳಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Electricity Price Hike: ರಾಜ್ಯದ ಜನತೆಗೆ ಮತ್ತೊಮ್ಮೆ ಕರೆಂಟ್ ಶಾಕ್; ದರ ಪರಿಷ್ಕರಣೆಗೆ ಕೆಇಆರ್‌ಸಿ ಪ್ರಸ್ತಾವನೆ

ಬಾಲಕನ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Exit mobile version